ಬೆಂಗಳೂರು,ಡಿ.2– ಜಿಟಿ ಜಿಟಿ ಮಳೆಯ ನಡುವೆಯೇ ನಗರದಲ್ಲಿ ಮನೆ ಗೊಡೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಮನೆಯಲ್ಲಿ ಇದ್ದ ಇಬ್ಬರು ವಯೋವೃದ್ಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೆ ಜೆ ನಗರದಲ್ಲಿ ತಡರಾತ್ರಿ ಏಕಾಏಕಿ ಮನೆ ಗೋಡೆ ಕುಸಿದುಬಿದ್ದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಗೋಡೆ ಕುಸಿದು ಬಿದ್ದ ಮನೆಯಲ್ಲಿ ವಯೋವೃದ್ಧರಾದ ಕಸ್ತೂರಿ ಹಾಗೂ ಲೋಕೇಶ್ ಎಂಬ ಅಕ್ಕ-ತಮ ವಾಸಿಸುತ್ತಿದ್ದರು. ರಾತ್ರಿ 12 ಗಂಟೆ ಸಮಯದಲ್ಲಿ ಏಕಾಏಕಿ ಮನೆ ಗೋಡೆ ಕುಸಿಯುತ್ತಿರುವುದನ್ನು ಕಂಡು ಇಬ್ಬರು ಜೋರಾಗಿ ಕೂಗಿಕೊಂಡರು.ಆದರೂ ಮನೆಯ ಛಾವಣಿಯ ಒಂದು ಭಾಗ ವೃದ್ಧರ ಮೇಲೆ ಬಿದ್ದಿತ್ತು. ತಕ್ಷಣ ಅಕ್ಕಪಕ್ಕದ ಮನೆಯವರು ಮನೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.
ಮಣ್ಣಿನ ಮನೆಯಾಗಿದ್ದರಿಂದ ಗೋಡೆ ಕುಸಿದುಬಿದ್ದಿದೆ ಎಂದು ತಿಳಿದುಬಂದಿದೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮನೆ ಕಳೆದುಕೊಂಡಿರುವ ವೃದ್ಧ ಜೀವಗಳು ಇದ್ದ ಮನೆಯೂ ಹಾಳಾಗಿದೆ ಎಲ್ಲಿ ಇರೋದು ಎಂದೇ ಗೊತ್ತಾಗುತ್ತಿಲ್ಲ. ನಮಗೆ ಆಧಾರ ಯಾರು ಇಲ್ಲ ಎಂದು ಕಣ್ಣೀರು ಹಾಕುತ್ತಿವೆ.