ಬೆಂಗಳೂರು,ಜು.31– ರಾಜಧಾನಿ ಬೆಂಗಳೂರಿನ ಸಂಪಗಿ ರಾಮನಗರದ ಜಿಯೋ ಹೋಟೆಲ್ ಬಳಿ ಹಳೇ ಕಟ್ಟಡಯೊಂದು ದಿಢೀರ್ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಸರಿ ಸುಮಾರು ಐವತ್ತು ವರ್ಷಗಳ ಎರಡು ಅಂತಸ್ಥಿನ ಕಟ್ಟಡ ಇಂದು ಮಧ್ಯಾಹ್ನ ಏಕಾಏಕಿ ಕುಸಿದಿದೆ. ಈ ವೇಳೆ ಸ್ಥಳೀಯರೇ ಜಮಾಯಿಸಿ ಅವಶೇಷಗಳಡಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ.ಕಟ್ಟಡದಲ್ಲಿ ಐದು ಮಂದಿ ಬ್ಯಾಚುಲರ್‌ರಸ ವಾಸವಾಗಿದ್ದು, ನಾಲ್ಕು ಮಂದಿ ಕೆಲಸಕ್ಕೆ ಹೋಗಿದ್ದು, ಅಶ್ವಿನ್‌ಕುಮಾರ್ ಮಾತ್ರ ಮನೆಯಲ್ಲೇ ಉಳಿದಿದ್ದು, ಆತನ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಗಳು, ಇದು ಹಳೆಯ ಕಟ್ಟಡವಾಗಿದ್ದು, ಇತ್ತೀಚಿಗೆ ನಿರಂತರ ಮಳೆಯಿಂದ ಈ ಕಟ್ಟಡದ ಪಾಯ ದುರ್ಬಲಗೊಂಡಿದೆ. ಇದೀಗ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಘಟನೆ ಸಂಬಂಧಿಸಿದಂತೆ ಸ್ಥಳಕ್ಕೆ ಸಂಪಗಿರಾಮನಗರ ಠಾಣಾ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಈ ವೇಳೆ ಕಟ್ಟಡ ಬಳಿ ತೆರಳದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಎರಡು ಅಗ್ನಿಶಾಮಕ ದಳ ಸಿಬ್ಬಂದಿಗಳು, ಎಸ್‌ಡಿಆರ್‌ಎಫ್ ತಂಡ ಹಾಗೂ ಬಿಬಿಎಂಪಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯಕ್ಕೆ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-11-2025)
 - ಅಭಿವೃದ್ಧಿ ಕಾಣದ ದೇವರಾಜ ಅರಸ್ ಅವರ ಮನೆ
 - ದಲಿತ ಅಥವಾ ಮುಸ್ಲಿಂ ಸಮುದಾಯಕ್ಕೆ ಸಿಎಂ ಸ್ಥಾನ ನೀಡಲು ಆಗ್ರಹ
 - ಕುರ್ಚಿ ಕಿತ್ತಾಟದಲ್ಲಿ ರೈತರನ್ನು ಮರೆತ ಸರ್ಕಾರ : ಆರ್.ಅಶೋಕ್
 - ಬಾಣಲಿ ಹೆಲ್ಮೆಟ್ ಸವಾರನಿಗಾಗಿ ಪೊಲೀಸರ ಶೋಧ
 
