Thursday, April 10, 2025
Homeರಾಷ್ಟ್ರೀಯ | Nationalಟ್ರಂಪ್ ತೆರೆಗೆಯಿಂದ ತಪ್ಪಿಸಿಕೊಳ್ಳಲು ಭಾರತದಿಂದ 5 ವಿಮಾನಗಳಲ್ಲಿ ಅಮೆರಿಕಕ್ಕೆ ಐಫೋನ್ ರವಾನಿಸಿದ ಆಪಲ್

ಟ್ರಂಪ್ ತೆರೆಗೆಯಿಂದ ತಪ್ಪಿಸಿಕೊಳ್ಳಲು ಭಾರತದಿಂದ 5 ವಿಮಾನಗಳಲ್ಲಿ ಅಮೆರಿಕಕ್ಕೆ ಐಫೋನ್ ರವಾನಿಸಿದ ಆಪಲ್

How Apple 'flew' 5 flights full of iPhones from India and China in 3 days to beat Trump Tariffs

ನವದೆಹಲಿ,ಏ.7- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ತೆರಿಗೆ ಸುಂಕದಿಂದ ಪಾರಾಗಲು ಆಪಲ್ ಕಂಪನಿ ಭಾರತದಿಂದ 5 ವಿಮಾನದಷ್ಟು ಐಫೋನ್ ಮತ್ತು ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ.

ಟ್ರಂಪ್‌ ತೆರಿಗೆ ಸಮರ ಆರಂಭಿಸಿದ್ದು ವಿದೇಶದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲಿದ್ದ ಸುಂಕವನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ವಿದೇಶದಿಂದ ಆಮದಾಗುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ವಸ್ತುಗಳ ಬೆಲೆ ಏರಿಕೆಯಿಂದ ಪಾರಾಗಲು ಆಪಲ್ ಕಂಪನಿ ಭಾರೀ ಪ್ರಮಾಣದಲ್ಲಿ ಐಫೋನ್ ಮತ್ತು ಇತರ ವಸ್ತುಗಳನ್ನು ಭಾರತದಿಂದ ರಫ್ತು ಮಾಡಿದೆ ಎಂದು ವರದಿಯಾಗಿದೆ.
ಭಾರತದ ಮೇಲೆ ಟ್ರಂಪ್‌ ಶೇ. 26 ಮತ್ತು ಚೀನಾದ ಮೇಲೆ ಶೇ. 52, ತೈವಾನ್ ಮೇಲೆ 32%, ವಿಯೆಟ್ನಾಂ ಮೇಲೆ 46% ತೆರಿಗೆ ವಿಧಿಸಿದ್ದಾರೆ.

ಐಫೋನ್ ಅಮೆರಿಕ ಕಂಪನಿಯಾದರೂ ಬಹುತೇಕ ಐಫೋನ್‌ಗಳು, ಅದರ ಬಿಡಿಭಾಗಗಳು ಭಾರತ, ವಿಯೆಟ್ನಾಂ, ತೈವಾನ್, ಚೀನಾದಲ್ಲಿ ತಯಾರಾಗುತ್ತವೆ. ಹೀಗಾಗಿ
ಈ ದೇಶಗಳಿಂದ ರಫ್ತಾಗುವ ಐಫೋನ್ ಗಳೂ ದುಬಾರಿ ಆಗಲಿವೆ.

ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಮೇಲೆ ವಿಧಿಸಿದ ಸುಂಕ ಕಡಿಮೆಯಿದೆ.
ಮಾರ್ಚ್ ಕೊನೆಯ ವಾರದಲ್ಲಿ ಆಪಲ್ ಐಫೋನ್ಗಳನ್ನು ರಫ್ತು ಮಾಡಿದೆ. ಏಪ್ರಿಲ್ 5 ರಿಂದ ಜಾರಿಗೆ ಬಂದ ಟ್ರಂಪ್ ಆಡಳಿತವು ವಿಧಿಸಿದ 10% ಪ್ರತಿ ತೆರಿಗೆ ಮೊದಲು ರಫ್ತಾಗಿದೆ.

ಚೀನಾದ ಸರಕುಗಳ ಮೇಲೆ 54% ತೆರಿಗೆ ವಿಧಿಸಿದರೆ ಭಾರತದ ವಸ್ತುಗಳ ಮೇಲೆ 26% ತೆರಿಗೆ ವಿಧಿಸಲಾಗುತ್ತಿದೆ. ಈ ನಿರ್ಧಾರದಿಂದ ಭಾರತವು ಆಪಲ್‌ನ ದೊಡ್ಡ ಜಾಗತಿಕ ಉತ್ಪಾದನಾ ನೆಲೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಅಂದಾಜು ಅಮೆರಿಕಕ್ಕೆ 9 ಶತಕೋಟಿ ಡಾಲರ್ ಮೌಲ್ಯದ ಐಫೋನ್‌ಗಳನ್ನು ಭಾರತ ರಫ್ತು ಮಾಡುತ್ತಿದೆ.

ಫಾಕ್ಸ್ ಕಾನ್ 2019ರಿಂದ ಆಪಲ್ ಐಫೋನ್ ಗಳನ್ನು ಭಾರತದಲ್ಲಿ ತಯಾರಿಸುತ್ತಿದ್ದು, ತಮಿಳುನಾಡಿನಲ್ಲಿ ತನ್ನ ಘಟಕ ತೆರದಿದೆ. ಕರ್ನಾಟಕದ ಕೋಲಾರದ ನರಸಾಪುರ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ವಿಸ್ಟಾನ್ ಕಂಪನಿ ಐಫೋನ್ ತಯಾರಿಸುತ್ತಿದೆ.

RELATED ARTICLES

Latest News