Friday, July 11, 2025
Homeರಾಜ್ಯಶಾಸಕರ ಅಭಿಪ್ರಾಯ ಪಡೆಯದೇ ಸಿಎಂ ಬದಲಾವಣೆ ಹೇಗೆ ಸಾಧ್ಯ..? : ಪ್ರಿಯಾಂಕ್‌ ಖರ್ಗೆ

ಶಾಸಕರ ಅಭಿಪ್ರಾಯ ಪಡೆಯದೇ ಸಿಎಂ ಬದಲಾವಣೆ ಹೇಗೆ ಸಾಧ್ಯ..? : ಪ್ರಿಯಾಂಕ್‌ ಖರ್ಗೆ

How can the CM be changed without getting the opinion of the MLAs? : Priyank Kharge

ಬೆಂಗಳೂರು,ಜು.11- ನಾಯಕತ್ವ ಬದಲಾವಣೆ ಕುರಿತಂತೆ ಅಭಿಪ್ರಾಯ ಪಡೆಯದ ಮೇಲೆ ಮುಖ್ಯಮಂತ್ರಿ ಬದಲಾವಣೆ ಹೇಗಾಗುತ್ತದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ಕುರಿತಂತೆ ಶಾಸಕರ ಅಭಿಪ್ರಾಯವನ್ನು ಪಡೆದುಕೊಂಡಿಲ್ಲ ಎಂದ ಮೇಲೆ ಬದಲಾವಣೆ ಎಲ್ಲಿ ಆಗಲಿದೆ ಎಂದು ಮರುಪ್ರಶ್ನೆ ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ನಾವು ಪಕ್ಷದ ವಿಚಾರಗಳನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಿಲ್ಲ. ನಮ ಹೈಕಮಾಂಡ್‌ಗೆ ನಾವು ವರದಿ ನೀಡಬೇಕೆ ಹೊರತು ಆರ್‌ಎಸ್‌‍ಎಸ್‌‍ಗೆ ಅಲ್ಲ ಎಂದು ವಿರೋಧಪಕ್ಷಗಳಿಗೆ ಅವರು ತಿರುಗೇಟು ನೀಡಿದರು.

ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಇ.ಡಿ, ಸಿಬಿಐ ವರ್ತಿಸುತ್ತಿವೆ. ಈ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ರಾಜಕೀಯ ಅಸ್ತ್ರವಾಗಿ ಬಳಕೆ ಮಾಡುತ್ತಿವೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.

ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ ವಿರುದ್ಧ ಮಾತನಾಡುವಾಗ ಈ ರೀತಿ ಮಾತನಾಡುವುದು ಸಹಜ. ಆದರೆ ಬಿಜೆಪಿ ನಾಯಕರ ಮೇಲೆ ಏಕೆ ದಾಳಿಗಳಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಮುಡಾ ಪ್ರಕರಣದಲ್ಲಿ ಹಣ ವ್ಯವಹಾರ ಇಲ್ಲದಿದ್ದರೂ ಇ.ಡಿ ಕೇಸ್‌‍ ದಾಖಲಿಸಿದೆ. ಇಲ್ಲೇ ಗೊತ್ತಾಗುತ್ತದೆ ಎಂತಹ ದಾಳಿ ಮಾಡುತ್ತಾರೆ ಎಂಬುದು ಎಂದರು.

RELATED ARTICLES

Latest News