Wednesday, January 15, 2025
Homeಸಂಪಾದಕೀಯ-ಲೇಖನಗಳುಸನಾತನ ಧರ್ಮ ಸ್ಟೀವ್‌ ಜಾಬ್‌ ಬದುಕು ಬದಲಾಯಿಸಿದ್ದು ಹೇಗೆ..?

ಸನಾತನ ಧರ್ಮ ಸ್ಟೀವ್‌ ಜಾಬ್‌ ಬದುಕು ಬದಲಾಯಿಸಿದ್ದು ಹೇಗೆ..?

How did Sanatan Dharma change Steve Jobs' life?

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಭಕ್ತರು, ಆಧ್ಯಾತಿಕ ಅನುಯಾಯಿಗಳು ಆಗಮಿಸುತ್ತಿದ್ದಾರೆ. ಅವರಲ್ಲಿ ಲಾರಿನ್‌ ಪೋವೆಲ್‌ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯಾರು ಈ ಲಾರೀನ್‌ ಪೊವೆಲ್‌ ಎಂಬುದು ಬಹುತೇಕರಿಗೆ ತಿಳಿದಿರುತ್ತದೆ. ಆಪಲ್‌ ಕಂಪನಿಯ ಸಂಸ್ಥಾಪಕ ಸ್ಟೀವನ್‌ ಪೌಲ್‌ ಜಾಬ್ಸ್‌‍ ಅವರ ಪತ್ನಿ. ಈಕೆಗೂ ಹಿಂದು ಸಂಪ್ರದಾಯಕ್ಕೂ ಏನು ಸಂಬಂಧ ಎಂದು ನೀವು ಹುಬ್ಬೇರಿಸಬಹುದು ಸಹಜ.

ಜಗತ್ತಿನಲ್ಲಿ ಆಪಲ್‌ ಸಂಸ್ಥೆ ನಂಬರ್‌ ಒನ್‌ ಸ್ಥಾನದಲ್ಲಿದೆ. ತಾಂತ್ರಿಕತೆ ಆವಿಷ್ಕಾರಗಳಲ್ಲಿ ಆಪಲ್‌ ಸದಾ ಮುಂದು. ವಿದ್ಯುನಾನ ವಲಯದಲ್ಲಿ ಹೊಸತನ ಹಾಗೂ ಹೊಸ ಪ್ರಪಂಚವನ್ನೇ ಆಪಲ್‌ ಸಂಸ್ಥೆ ಸೃಷ್ಟಿಸಿದೆ. ಇಂತಹ ಬೃಹತ್‌ ಕಂಪನಿಯನ್ನು ಕಟ್ಟಿದ ಸ್ಟೀವ್‌ ಜಾಬ್ಸ್‌‍ ಬಗ್ಗೆ ಮೊದಲು ಮಾತನಾಡೋಣ. ಸ್ಟೀವ್‌ ಜಾಬ್ಸ್‌‍ ಹುಟ್ಟಿನಿಂದಲೂ ಸಂಕಷ್ಟ ಸಂಘರ್ಷ ಹೋರಾಟದಿಂದಲೇ ಬದುಕಿದ ವ್ಯಕ್ತಿ.

1955ರ ಫೆಬ್ರವರಿ 24ರಂದು ಜೋನ್ನೆ ಕರೋಲ್‌ ಸ್ಕೀಬಲ್‌ ಮತ್ತು ಅಬ್ದುಲ್ಫತ್ತಾಹ್‌ ಅವರ ಪುತ್ರನಾಗಿ ಜನಿಸಿದ ಸ್ಟೀವ್‌ ಜಾಬ್ಸ್‌‍ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಜನಿಸಿದರು. ಹೆತ್ತವರ ಆರ್ಥಿಕ ದುಸ್ಥಿತಿ ಹಾಗೂ ಕುಟುಂಬದವರ ವಿರೋಧದ ಕಾರಣಗಳಿಗಾಗಿ ತಾಯಿ ಸ್ಕೀಬಲ್‌ ಬೇರೆಯವರಿಗೆ ಸ್ಟೀವ್‌ ರನ್ನು ದತ್ತು ನೀಡಲು ನಿರ್ಧರಿಸಿದರು. ಆರಂಭದಲ್ಲಿ ದತ್ತು ಪಡೆಯಲು ಮುಂದೆ ಬಂದಿದ್ದ ವಕೀಲ ದಂಪತಿ, ಮಗು ಗಂಡು ಎಂಬ ಕಾರಣಕ್ಕಾಗಿ ಹಿಂದೆ ಸರಿಯಿತು. ಕೊನೆಗೆ ಜರ್ಮನ್‌ ಮೂಲದ ದಂಪತಿ ಸ್ಟೀವ್‌ ನನ್ನು ದತ್ತು ಸ್ವೀಕರಿಸಿತ್ತು. ಶಾಲೆಯಲ್ಲಿ ಹೆಚ್ಚು ದಿನ ಕಲಿಯಲು ಸ್ಟೀವ್‌ಗೆ ಆರ್ಥಿಕಶಕ್ತಿ ಇರಲಿಲ್ಲ. ದತ್ತು ಪಡೆದ ದಂಪತಿ ಸ್ಟೀವ್‌ನನ್ನು ಪದವೀಧರನನ್ನಾಗಿ ಮಾಡಬೇಕು ಎಂದು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಕಲಿಯುವ ಆಸಕ್ತಿ ಇಲ್ಲದೆ ಶಿಕ್ಷಣದಿಂದ ಹೊರಗುಳಿದ ಸ್ಟೀವ್‌ ಕ್ಯಾಲಿಗ್ರಫಿ ಕಲಿತಿದ್ದರು. ಅದು ಮುಂದೆ ಕಂಪ್ಯೂಟರ್‌ ಜನರಿಗೆ ಅನುಗುಣವಾದ ಕಂಪ್ಯೂಟರ್‌ ಭಾಷೆ ರೂಪಿಸಲು ಸ್ಟೀವ್‌ ನೆರವಾಯಿತು.

ಆರಂಭದಲ್ಲಿ ಮೆಕ್ಯಾನಿಕ್‌ ಆಗಿ, ಕಾರು ಮಾರಾಟ ಪ್ರತಿನಿಧಿಯಾಗಿ, ಬುಕ್‌ ಕೀಪರ್‌ ಆಗಿ ನಾನಾ ರೀತಿಯ ಉದ್ಯೋಗಗಳನ್ನು ಮಾಡಿ ಸ್ಟೀವ್‌ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಒಂದು ಹೊತ್ತಿನ ಪೌಷ್ಟಿಕಾಂಶಯುಕ್ತ ಆಹಾರಕ್ಕಾಗಿ ಹದಿನೇಳು ಕಿಲೋಮೀಟರ್‌ ದೂರದಲ್ಲಿದ್ದ ಶ್ರೀ ಕೃಷ್ಣನ ದೇವಸ್ಥಾನಕ್ಕೆ ಪ್ರತಿ ಭಾನುವಾರ ನಡೆದುಕೊಂಡು ಹೋಗುತ್ತಿದ್ದದ್ದಾಗಿ ಸ್ಟೀವ್‌ ಹೇಳಿಕೊಂಡಿದ್ದಾರೆ. ಆ ಮಟ್ಟಿನ ಬಡತನದಿಂದ ಸ್ಟೀವ್‌ ಜಗತ್ತೇ ತಿರುಗಿ ನೋಡುವಂತಹ ಶ್ರೀಮಂತನಾಗಿದ್ದು, ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದು ಪವಾಡ. ಆ ಪವಾಡಕ್ಕೆ ಮೂಲ ಪ್ರೇರಣೆ ಯಾವುದೆಂದರೆ ಅಚ್ಚರಿ ಪಡುತ್ತೀರಾ. ಅದುವೆ ಸನಾತನ ಧರ್ಮ. ಹೌದು ಸನಾತನ ಧರ್ಮದ ತಾಕತ್ತೆ ಅಂತಹದ್ದು.

ಅನೇಕ ಉದ್ಯೋಗಗಳನ್ನು ಮಾಡಿ ಯಾವುದರಲ್ಲೂ ಯಶಸ್ಸು ಕಾಣದೆ ಸೋತ ಕಾಲದಲ್ಲಿ ಸ್ಟೀವ್‌ ನೆಮದಿಗಾಗಿ ಆಧ್ಯಾತಿಕತೆಯತ್ತ ಮುಖ ಮಾಡುತ್ತಾರೆ. ವಿಶ್ವಕ್ಕೆ ಧರ್ಮ, ಸಂಸ್ಕೃತಿ ಆಚರಣೆಗಳನ್ನು ಕಲಿಸುವುದರಲ್ಲಿ ವಿಶ್ವಗುರುವಾಗಿರುವ ಸನಾತನ ಧರ್ಮ ಸ್ಟೀವ್‌ರ ಕೈ ಅನ್ನು ಬಿಡಲಿಲ್ಲ. ಈ ಹಿಂದೆ ಪೌಷ್ಟಿಕ ಆಹಾರಕ್ಕಾಗಿ ಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಸ್ಟೀವ್‌ ಜಾಬ್ಸ್‌‍, ಅಲ್ಲಿನ ಆಚರಣೆ, ವಿಚಾರಗಳನ್ನು ಅರ್ಥೈಸಿಕೊಂಡಿದ್ದರು. ಆ ಮೂಲಕ ಸನಾತನ ಹಿಂದೂ ಧರ್ಮದ ಭಕ್ತರಾಗಿದ್ದರು.

ಜೀವನದಲ್ಲಿ ಸೋತು ಭಾರತಕ್ಕೆ ಬಂದಾಗ ಕಂಚಿಯಲ್ಲಿನ ನಿಮ್‌ ಕರೋಲಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಅವರ ಕಾಲೇಜು ದಿನಗಳ ಸ್ನೇಹಿತ ಡ್ಯಾನಿಯಲ್‌ ಕೋಟ್ಕೆ ಅವರ ಜೊತೆಯಾಗಿ ಭಾರತದಲ್ಲಿ ಹಲವು ಕಡೆ ಅಲೆದಾಡಿ ಆಧ್ಯಾತಿಕ ತಂತ್ರಗಳನ್ನು ಹುಡುಕಾಡಿದ್ದರು. ನಿಮ್‌ ಕರೋಲಿ ಬಾಬಾ ಅವರ ಹಿಂದಿನ ವರ್ಷವೇ ಮೃತಪಟ್ಟಿದ್ದರಿಂದಾಗಿ ಆಶ್ರಮದಲ್ಲಿ ಹೆಚ್ಚಿನ ಜನರು ಇರಲಿಲ್ಲ. ಆದಾಗ್ಯೂ ಜಾಬ್ಸ್‌‍ ಏಳು ತಿಂಗಳ ಕಾಲ ಭಾರತದಲ್ಲಿ ಬೆಟ್ಟಗುಟ್ಟ ಹತ್ತಿಳಿದು ಆಧ್ಯಾತಿಕ ಚಿಂತನೆಗಳನ್ನು ಪಡೆದು ಅಮೆರಿಕಾಗೆ ಮರಳಿದರು.
ಅಮೆರಿಕಾದಲ್ಲೂ ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಮನಶಾಂತಿಗಾಗಿ ಧ್ಯಾನದಲ್ಲಿ ತೊಡಗಿದರು. ಆ ಸಂದರ್ಭದಲ್ಲಿ ಪಡೆದ ಪ್ರೇರಣೆ ಜಾಬ್ಸ್‌‍ ಅವರ ಬದುಕನ್ನೇ ಬದಲಾಯಿಸಿತು. ಭಾರತದಲ್ಲಿ ಆದ ಜ್ಞಾನೋದಯ ಆಪಲ್‌ ಕಂಪನಿಯ ಏಳಿಗೆಗೆ ದುಡಿಯಲು ಜಾಬ್ಸ್‌‍ ಗೆ ದಿಟ್ಟ ಮಾರ್ಗದರ್ಶನಗಳನ್ನು ನೀಡಿತು.

ಈ ಮೊದಲು ಉದ್ಯೋಗ ನಷ್ಟ, ನಂಬಿಕೆ ದೋಹ, ವೈಯಕ್ತಿಕ ಬದುಕಿನ ನೋವುಗಳು ಸ್ಟೀವ್‌ ಜಾಬ್ಸ್‌‍ ಅವರನ್ನು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗರನ್ನಾಗಿ ನಿಲ್ಲಿಸಿದೆ. ಅವರು ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಸನಾತನ ಧರ್ಮದ ಬಗ್ಗೆ ಅಪಾರ ಭಕ್ತಿ ಗೌರವ ಒಲವನ್ನು ಹೊಂದಿದರು.
ಸ್ಟೀವ್‌ ಅವರ ಪತ್ನಿ ಲಾರೀನ್‌ ಪೊವೆಲ್‌ ಹಿಂದೂ ಧರ್ಮದ ಕಟ್ಟಾ ಅನುಯಾಯಿಯಾಗಿದ್ದಾರೆ. ಎರಡನೇ ಬಾರಿಗೆ ಭಾರತಕ್ಕೆ ಆಗಮಿಸಿರುವ ಅವರು ಪ್ರಯಾಗ್‌ ರಾಜ್ನ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಜಗತ್ತಿನ ಶ್ರೀಮಂತ ಮಹಿಳೆಯಾಗಿದ್ದರೂ ಪ್ರಯಾಜ್‌ ರಾಜ್‌ನಲ್ಲಿ ಲಾರೀನ್‌ ಸಾಮಾನ್ಯ ಟೆಂಟಿನಲ್ಲಿ ಮಲಗುತ್ತಿದ್ದಾರೆ.

ಕಲ್ಪವಾಸ ವೃತ್ತಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾಪಂಚಿಕ ವೈಭೋಗಗಳನ್ನು ತ್ಯಜಿಸಿ ಜಪ, ತಪ, ಧ್ಯಾನಗಳಲ್ಲಿ ನಿರತರಾಗಿದ್ದಾರೆ. ವಿಶೇಷ ತಾಂತ್ರಿಕ ಪೂಜೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಲ್ಪವಾಸ ವ್ರತ ಮಾಡುವವರನ್ನು ಕಲ್ಪವಾಸಿಗಳೆಂದು ಕರೆಯಲಾಗುತ್ತದೆ. ಪುಷ್ಯ ಪೂರ್ಣಿಮೆಯಿಂದ ಮಾಘ ಪೂರ್ಣಿಮೆಯವರೆಗೆ ಕಲ್ಪವಾಸ ವ್ರತವನ್ನು ಪವಿತ್ರ ನದಿಯ ದಡದಲ್ಲಿ ನೆರವೇರಿಸಬೇಕಿದೆ. ಕುಂಭಮೇಳದ ಸಮಯದಲ್ಲಿ ಇದನ್ನು ಮಾಡುವುದು ಮಹಾ ಪುಣ್ಯದಾಯಕ. ಕಲ್ಪವಾಸಿಗಳಿಗೆ ಕಟ್ಟುನಿಟ್ಟಾದ ಆಹಾರದ ವಿಧಿ ಇದೆ. ಕೆಲವರು ಉಪವಾಸ ಮಾಡಬಹುದು, ಕೆಲವರು ದಿನಕ್ಕೆ ಒಮೆ ಮಾತ್ರ ತಿನ್ನಬಹುದು, ಕೆಲವರಿಗೆ ನೀರಿನ ವ್ರತ ಇರಬಹುದು. ಆಹಾರ ಸೇವಿಸುವವರು ಸಾತ್ವಿಕ ಆಹಾರ ಮಾತ್ರ ಸೇವಿಸಬೇಕು. ಮಾಘ ಪೂರ್ಣಿಮೆಯಂದು, ಕೊನೆಯ ಪ್ರಮುಖ ಸ್ನಾನದ ದಿನ, ಕಲ್ಪವಾಸಿಗಳು ಕೆಲವು ವಿಶೇಷ ಆಚರಣೆಗಳನ್ನು ಮಾಡಿ ವ್ರತವನ್ನು ದೇವರಿಗೆ ಸಮರ್ಪಿಸುತ್ತಾರೆ.

ಪ್ರತಿದಿನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಶುದ್ಧೀಕರಣ ಮತ್ತು ಅಂತರ್ಭಕ್ತಿಯಿಂದ ಆತಾವಲೋಕನದ ಹಾದಿ ಹಿಡಿದಿದ್ದಾರೆ. ಆಧ್ಯಾತಿಕ ದಿಕ್ಕಿನತ ಮುಖ ಮಾಡಿರುವ ಲಾರೀನ್‌ ಪೋವೆಲ್‌ ತಮ ಹೆಸರನ್ನು ಕಮಲ ಎಂದು ಬದಲಾಯಿಸಿಕೊಂಡಿರುವುದು ಮತ್ತೊಂದು ವಿಶೇಷ.

ಕೈಲಾಸಾನಂದ ಸ್ವಾಮೀಜಿ ಅವರ ಶಿಬಿರದಲ್ಲಿ ತಂಗಿರುವ ಲಾರಿನ್‌ ಜನವರಿ 29 ರ ವರೆಗೂ ಕುಂಭಮೇಳದಲ್ಲಿ ವಿವಿಧ ವೃತ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೈಲಾಸಾನಂದ ಸ್ವಾಮೀಜಿಯವರು ಲಾರೀನ್‌ಗೆ ಕಮಲ ಎಂದು ನಾಮಕರಣ ಮಾಡಿ, ತಮ ಗುರುಗಳ ಗೋತ್ರಕ್ಕೆ ಆಕೆಯನ್ನು ಸ್ವೀಕರಿಸಿದ್ದಾರೆ. ಲಾರೀನ್‌ ತಮ ಮಗಳಿದ್ದಂತೆ ಆಕೆಯನ್ನು ಪ್ರೀತಿಯಿಂದ ಬರ ಮಾಡಿಕೊಂಡಿದ್ದೇವೆ. ಆಕೆಯ ಎಲ್ಲಾ ಆಚರಣೆಗಳಿಗೆ ಸಹಕರಿಸುತ್ತೇವೆ ಎಂದು ಕೈಲಾಸಾನಂದ ಶ್ರೀಗಳು ತಿಳಿಸಿದ್ದಾರೆ. ಕೇಸರಿ ಉಡುಪನ್ನು ಧರಿಸಿ ಸನ್ಯಾಸಿಯಾಗಿರುವ ಲಾರೀನ್‌ ಜನವರಿ 14ರಂದು ಶಾಹಿ ಸ್ನಾನ ಮತ್ತು ಜನವರಿ 29ರಂದು ರಾಜಸ್ನಾನ ಮಾಡುವ ಇಚ್ಛೆ ಹೊಂದಿದ್ದಾರೆ.

RELATED ARTICLES

Latest News