Sunday, September 8, 2024
Homeಇದೀಗ ಬಂದ ಸುದ್ದಿನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ಪತ್ತೆ, ಸುಪ್ರೀಂಗೆ ಮಾಹಿತಿ ನೀಡಿದ ಸಿಬಿಐ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ಪತ್ತೆ, ಸುಪ್ರೀಂಗೆ ಮಾಹಿತಿ ನೀಡಿದ ಸಿಬಿಐ

ನವದೆಹಲಿ,ಜು.26-ದೇಶಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿದ್ದ ನೀಟ್‌ ಪ್ರಶ್ನೆ ಪತ್ರಿಕೆಯು ಜಾರ್ಖಂಡ್‌ನ ಹಜರಿಬಾಗ್‌ನ ಓಯಸಿಸ್‌‍ ಶಾಲೆಯಿಂದ ಸೋರಿಕೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಪಂಕಜ್‌ಕುಮಾರ್‌ ಅಲಿಯಾಸ್‌‍ ಆದಿತ್ಯ ಅಲಿಯಾಸ್‌‍ ಸಾಹಿಲ್‌ ಎಂಬಾತನೇ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಮುಖ ರೂವಾರಿ ಎಂದು ಸಿಬಿಐ ಸುಪ್ರೀಂಕೋರ್ಟ್‌ಗೆ ನೀಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಹಜರಿಬಾಗ್‌ನ ಎನ್‌ಟಿಎ ಸಿಟಿ ಕೋ-ಆರ್ಡಿನೇಟರ್‌ ಕಂ ಪ್ರಿನ್ಸಿಪಾಲ್‌, ಓಯಸಿಸ್‌‍ ಸ್ಕೂಲ್‌ ಮತ್ತು ಸೆಂಟರ್‌ ಸೂಪರ್‌ಡಿಡೆಂಟ್‌ ಕಂ ವೈಸ್‌‍ ಪ್ರಿನ್ಸಿಪಾಲ್‌ ಓಯಸಿಸ್‌‍ ಶಾಲೆಯ ಸಹಕಾರದಲ್ಲಿ ನೀಟ್‌ ಪ್ರಶ್ನೆ ಪತ್ರಿಕೆಯನ್ನು ಕಳವು ಮಾಡಲಾಗಿತ್ತೆಂದು ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ನೀಟ್‌ ಪರೀಕ್ಷೆಯಲ್ಲಿ ರ್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌‍ ಮಾರ್ಕ್ಸ್ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂದು ಕೆಲವು ಪೋಷಕರು ಆರೋಪ ಮಾಡಿದ್ದರು.

ಗ್ರೇಸ್‌‍ ಮಾರ್ಕ್‌್ಸ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ನೀಟ್‌ ಯುಜಿ-2024 ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುವ ಟ್ರಂಕ್‌ಗಳನ್ನು ಮೇ 5 ರಂದು ಬೆಳಿಗ್ಗೆ ಶಾಲೆಗೆ ತಂದು ನಿಯಂತ್ರಣ ಕೊಠಡಿಯಲ್ಲಿ ಸಂಗ್ರಹಿಸಲಾಗಿದೆ. ಟ್ರಂಕ್‌ಗಳು ಬಂದ ಕೆಲವೇ ನಿಮಿಷಗಳಲ್ಲಿ, ಪ್ರಿನ್ಸಿಪಾಲ್‌ ಮತ್ತು ವೈಸ್‌‍ ಪ್ರಿನ್ಸಿಪಾಲ್‌ ಅವರು ಟ್ರಂಕ್‌ಗಳನ್ನು ಇರಿಸಲಾಗಿದ್ದ ಕೋಣೆಗೆ ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ಪ್ರವೇಶವನ್ನು ನೀಡಿದ್ದರು. ಅವರು ಟ್ರಂಕ್‌ನ್ನು ತೆರೆಯಲು ಮತ್ತು ಪ್ರಶ್ನೆಪತ್ರಿಕೆಗಳನ್ನು ಪ್ರವೇಶಿಸಲು ಅತ್ಯಾಧುನಿಕ ಸಾಧನಗಳನ್ನು ಬಳಸಿದರು. ಟ್ರಂಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರಿಸಿದ ಪ್ರಶ್ನೆಪತ್ರಿಕೆ ಪಡೆದ ಅಭ್ಯರ್ಥಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಪ್ರತಿಷ್ಠಿತ ಕಾಲೇಜುಗಳ ಎಂಬಿಬಿಎಸ್‌‍ ವಿದ್ಯಾರ್ಥಿಗಳಾದ ಎಲ್ಲ ಪರಿಹಾರಗಾರರನ್ನು ಗುರುತಿಸಲಾಗಿದೆ ಮತ್ತು ಅವರಲ್ಲಿ ಹೆಚ್ಚಿನವರನ್ನು ಬಂಧಿಸಲಾಗಿದೆ.

ಸಿಬಿಐ ಇದುವರೆಗೆ 33 ಸ್ಥಳಗಳಲ್ಲಿ ಶೋಧ ನಡೆಸಿದೆ. ಈ ಪ್ರಕರಣದಲ್ಲಿ ಬಿಹಾರ ಪೊಲೀಸರು 15 ಮಂದಿ ಸೇರಿದಂತೆ 36 ಮಂದಿಯನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೆ ಹಲವಾರು ದೋಷಾರೋಪಣೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ.
ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 2024, ಮೇ 5 ಮೇರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು.

ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್‌, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

RELATED ARTICLES

Latest News