ಆರೋಗ್ಯ ಕುರಿತಾಗಿ ಭಾರತದಲ್ಲಿ ಹಲವಾರು ಉತ್ತಮ ಪದ್ಧತಿಗಳನ್ನು, ಸಂಪ್ರದಾಯಗಳನ್ನು ಪಾಲಿಸುಕೊಂಡೇ ಬರಲಾಗುತ್ತಿದೆ. ಬಾಯಿಯ ಆರೋಗ್ಯದ ವಿಚಾರದಲ್ಲಿಯೂ ಇಂಥಾ ಹಲವಾರು ಉತ್ತಮ ಕ್ರಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ ನಮ್ಮ ಹಿರಿಯರು.
ದೇಶಾದ್ಯಂತ ಇರುವ ಅನೇಕ ಕುಟುಂಬಗಳು ಬಾಯಿಯ ಆರೋಗ್ಯಕ್ಕೆ ನೈಸರ್ಗಿಕ ಕ್ರಮಗಳನ್ನು ಕಂಡುಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಬೇವಿನ ಕಡ್ಡಗಳು, ಉಪ್ಪಿನಿಂದ ಉಜ್ಜುವುದು ಮತ್ತು ಲವಂಗ ಎಣ್ಣೆ ಬಳಸುವುದು ಹೀಗೆಲ್ಲಾ ಮಾಡುವುದರಿಂದ ಹಲ್ಲು ಮತ್ತು ಒಸಡುಗಳನ್ನು ರಕ್ಷಿಸಲು ಸಾಧ್ಯ ಎಂಬ ನಂಬಿಕೆ ಈಗಲೂ ಬಲವಾಗಿದೆ. ಅನೇಕರ ಹೃದಯದಲ್ಲಿ ಮತ್ತು ಮನೆಗಳಲ್ಲಿ ಈ ಅಭ್ಯಾಸಗಳು ಶಾಶ್ವತ ಸ್ಥಾನ ಪಡೆದುಕೊಂಡಿವೆ. ಇವೆಲ್ಲವೂ ಆಧುನಿಕ ಭಾರತೀಯರಿಗೆ ಹಿಂದಿನವರು ಬಾಯಿಯ ಆರೋಗ್ಯವನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎಂಬುದನ್ನು ತಿಳಿಸುತ್ತದೆ.
ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಕ್ರಮಗಳು :
ಭಾರತದಲ್ಲಿ ಮೌಖಿಕ ಆರೈಕೆ ಕ್ಷೇತ್ರವು ಗಟ್ಟಿಯಾದ ಪ್ರಾದೇಶಿಕ ಬೇರುಗಳನ್ನು ಹೊಂದಿದೆ. ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯ ಅಭ್ಯಾಸಗಳು ನಡೆಯುತ್ತಾ ಬಂದಿವೆ. ಪ್ರತಿಯೊಂದು ಪ್ರದೇಶ ಕೂಡ ಭಾರತದ ಮೌಖಿಕ ನೈರ್ಮಲ್ಯ ಕ್ಷೇತ್ರಕ್ಕೆ ತನ್ನದೇ ಆದ ಉತ್ತಮ ಕೊಡುಗೆ ನೀಡುತ್ತದೆ. ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾಯೋಗಿಕ ಜ್ಞಾನವನ್ನು ನೀಡುತ್ತದೆ.
ದಕ್ಷಿಣ ಭಾರತ: ಬೇವಿನ ಕಡ್ಡಿ ಬಳಕೆ :
ದಕ್ಷಿಣ ಭಾರತದಲ್ಲಿ ಹಲ್ಲುಜ್ಜಲು ಬೇವಿನ ಕಡ್ಡಿಗಳನ್ನು ಬಹಳ ಹಿಂದಿನಿಂದಲೇ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಬೇವಿನ ಕಡ್ಡಿಗಳನ್ನು ಸಾಂಪ್ರದಾಯಿಕವಾಗಿ ಮುಂಜಾನೆ ಹಲ್ಲುಜ್ಜುವ ಬ್ರಷ್ ಆಗಿ ಮತ್ತು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಪ್ರಚಲಿತದಲ್ಲಿರುವ ಈ ಅಭ್ಯಾಸವು ಕೃತಕ ವಸ್ತುಗಳಿಲ್ಲದೇ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದರ ಆಧಾರದಲ್ಲಿಯೇ ಈಗ ಬೇವು ಆಧಾರಿತ ಟೂತ್ ಪೇಸ್ಟ್ ಗಳು ಬಂದಿವೆ. ಆ ಮೂಲಕ ಹಳೆಯ ಪದ್ಧತಿಗಳನ್ನು ಆಧುನಿಕ ಜೀವನ ಶೈಲಿಯಲ್ಲಿ ಸಂಯೋಜಿಸಲಾಗಿದೆ.
ಪೂರ್ವ ಭಾರತ: ಸಾಸಿವೆ ಎಣ್ಣೆ ಮತ್ತು ಉಪ್ಪು :
ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನಂತಹ ಪ್ರದೇಶಗಳಲ್ಲಿನ ಬಹಳಷ್ಟು ಕುಟುಂಬಗಳು ಮೌಖಿಕ ಆರೈಕೆಗಾಗಿ ಸಾಸಿವೆ ಎಣ್ಣೆಯನ್ನು ಉಪ್ಪಿನೊಂದಿಗೆ ಬೆರೆಸಿ ಬಳಸುತ್ತವೆ. ಈ ಪರಿಪಾಠಗಳು ದಶಕಗಳಷ್ಟು ಹಳೆಯದಾಗಿವೆ. ಸಾಸಿವೆ ಎಣ್ಣೆ ಮತ್ತು ಉಪ್ಪಿನ ಮಿಶ್ರಣವನ್ನು ಒಸಡುಗಳು ಮತ್ತು ಹಲ್ಲುಗಳ ಮೇಲೆ ಮಸಾಜ್ ಮಾಡುವುದರಿಂದ ಬಾಯಿಯ ಆರೋಗ್ಯ ಹೆಚ್ಚುತ್ತದೆ, ಜೊತೆಗೆ ಹಲ್ಲುಗಳನ್ನು ಬಿಳುಪುಗೊಳಿಸುತ್ತದೆ, ವಿಶೇಷವಾಗಿ ತನ್ನ ಆಂಟಿ ಬ್ಯಾಕ್ಟೀರಿಯ ಗುಣದಿಂದ ವಸಡು ಕಾಯಿಲೆ ಉಂಟಾಗುವುದನ್ನು ತಡೆಯುತ್ತದೆ ಎಂದು ನಂಬಲಾಗಿದೆ. ಈ ಪದ್ಧತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ, ವಸಡುಗಳನ್ನು ಕಾಪಾಡುವ ನಿಟ್ಟಿನಲ್ಲಿ ಇಂದು ಸಾಸಿವೆ ಎಣ್ಣೆ ಅಥವಾ ಈ ಮಿಶ್ರಣದಿಂದ ಆಧಾರದಲ್ಲಿ ತಯಾರಾದ ಉತ್ಪನ್ನಗಳನ್ನು ವಸಡು, ಹಲ್ಲುಗಳ ಮೇಲೆ ತಿಕ್ಕಬಹುದಾಗಿದೆ.
ಉತ್ತರ ಭಾರತ: ಮಿಸ್ವಾಕ್ ಕಡ್ಡಿ ಮತ್ತು ಅರಿಶಿನ :
ಉತ್ತರ ಭಾರತದಲ್ಲಿ ಸಾಲ್ವಡೋರಾ ಪರ್ಸಿಕಾ ಮರದಿಂದ ಸಿದ್ಧಪಡಿಸಿದ ಮಿಸ್ವಾಕ್ ಕಡ್ಡಿಗಳನ್ನು ಹಲ್ಲುಜ್ಜಲು ಬಳಸುವುದು ಸಾಮಾನ್ಯವಾಗಿದೆ. ಮಿಸ್ವಾಕ್ ತನ್ನಲ್ಲಿ ನೈಸರ್ಗಿಕ ಫ್ಲೋರೈಡ್ ಅಂಶ ಒಳಗೊಂಡಿದೆ ಮತ್ತು ಪ್ಲೇಕ್ ವಿರೋಧಿ ಅಂಶಗಳಿಂದ ಗುರುತಿಸಲ್ಪಟ್ಟಿದೆ. ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ವಿಶ್ವಾಸಾರ್ಹ ಸಾಧನವಾಗಿದೆ. ಅದರ ಜೊತೆ ಒಸಡು ಸಮಸ್ಯೆಗಳನ್ನು ಶಮನಗೊಳಿಸಲು ಅರಿಶಿನವನ್ನು ಹೆಚ್ಚಾಗಿ ಪೇಸ್ಟ್ ಆಗಿ ಬಳಸಲಾಗುತ್ತದೆ. ಹೊಸ ಕಾಲದಲ್ಲಿ ಅದರ ಸ್ಫೂರ್ತಿಯಿಂದಲೇ ಅರಿಶಿನ ಒಳಗೊಂಡಿರುವ ಟೂತ್ ಪೇಸ್ಟ್ ಗಳು ಮತ್ತು ಮಿಸ್ವಾಕ್-ಆಧಾರಿತ ಸಾಧನಗಳು ಬಂದಿವೆ.
ಪಶ್ಚಿಮ ಭಾರತ: ಬಬೂಲ್ ಕಡ್ಡಿಗಳು :
ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಸಾಮಾನಾಯವಾಗಿ ಬಬೂಲ್ ಎಂದು ಕರೆಯಲ್ಪಡುವ ಒಂದು ರೀತಿಯ ಕರಿಜಾಲಿಯ ಜಾತಿಯ ಗಿಡದ ಕಡ್ಡಿಗಳನ್ನು ಬಳಸುತ್ತಾರೆ. ಅವುಗಳ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ಬಹಳ ಹಿಂದಿನಿಂದಲೇ ಹಲ್ಲುಜ್ಜಲು ಬಳಸಲಾಗುತ್ತದೆ. ಬಬೂಲ್ ರಸವು ಹಲ್ಲುಗಳನ್ನು ಬಲಪಡಿಸಲು ಮತ್ತು ಕುಳಿಗಳು ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಕ್ರಮಗಳಿಂದ ಬಬೂಲ್ ಆಧರಿಸಿದ ಉತ್ಪನ್ನಗಳನ್ನು ಬರತೊಡಗಿವೆ.
ಲವಂಗ ಎಣ್ಣೆಯ ಸಾರ್ವತ್ರಿಕ ಬಳಕೆ ;
ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಬಹುತೇಕ ಕಡೆಗಳಲ್ಲಿ ಹಲ್ಲುನೋವುಗಳಿಗೆ ಲವಂಗ ಎಣ್ಣೆಯು ಅತ್ಯಂತ ಜನಪ್ರಿಯ ಪರಿಹಾರ ಉತ್ಪನ್ನವಾಗಿದೆ. ನೈಸರ್ಗಿಕವಾಗಿ ಯುಜೆನಾಲ್ ಅನ್ನು ಒಳಗೊಂಡಿರುವ ಲವಂಗ ಎಣ್ಣೆಯನ್ನು ಆಯುರ್ವೇದ ಹಲ್ಲಿನ ಪುಡಿಗಳಲ್ಲಿ ಹೆಚ್ಚಾಗಿ ಸೇರಿಸಲಾಗುತ್ತದೆ. ಆ ಮೂಲಕ ಹಲ್ಲು ಉಜ್ಜಲು ಬಳಸಲಾಗುತ್ತದೆ. ಇಂದಿಗೂ ಸಹ ಹಲ್ಲು ನೋವು ಪರಿಹಾರಕ್ಕೆ ಬಾಯಿಯಲ್ಲಿ ಒಂದು ಸಣ್ಣ ಲವಂಗದ ತುಂಡು ಇಟ್ಟುಕೊಳ್ಳುವುದು ಅತ್ಯುತ್ತಮ ಪರಿಹಾರವಾಗಿದೆ.
ಸಂಪ್ರದಾಯದ ಆಚರಣೆ :
ನಾವು ಪ್ರಸ್ತುತ ಆಧುನಿಕ ದಂತ ಆರೈಕೆ ಕ್ರಮವನ್ನು ಪಾಲಿಸುತ್ತಿದ್ದೇವೆ. ಆಶ್ಚರ್ಯವೆಂದರೆ ಸಾಂಪ್ರದಾಯಿಕ ಅಭ್ಯಾಸಗಳನ್ನು ಕಾಲದ ಉತ್ಪನ್ನಗಳೊಂದಿಗೆ ಸಂಯೋಜಿಸುವ ಕೆಲಸವೂ ನಡೆದಿದೆ. ಡಾಬರ್ ರೆಡ್ ಪೇಸ್ಟ್ ಉತ್ಪನ್ನವು ಪ್ರಾಚೀನ ಆಯುರ್ವೇದ ತಂತ್ರ ಮತ್ತು ಅತ್ಯಾಧುನಿಕ ದಂತ ವಿಜ್ಞಾನದ ಅತ್ಯುತ್ತಮ ಸಂಯೋಜನೆಗೆ ಉತ್ತಮ ಉದಾಹರಣೆಯಾಗಿದೆ. ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ಯಿಂದ ಇದು ಪ್ರಮಾಣೀಕರಿಸಲ್ಪಟ್ಟಿದ್ದು, ಇದು ಲವಂಗ, ಬೇವು ಮತ್ತು ಪುದೀನದಂತಹ ಅತ್ಯುತ್ತಮ ಪದಾರ್ಥಗಳನ್ನು ಒಟ್ಟುಗೂಡಿಸಿ ಸಿದ್ಧಪಡಿಸಲಾಗಿದೆ.
ಈ ಸಾಂಪ್ರದಾಯಿಕ ಕ್ರಮಗಳ ಜೊತೆಗೆ ನಿಯಮಿತವಾಗಿ ಹಲ್ಲುಜ್ಜುವುದು ಮತ್ತು ಹಲ್ಲಿನ ವೈದ್ಯರನ್ನು ಭೇಟಿ ಮಾಡುವ ಕ್ರಮಗಳನ್ನು ಪಾಲಿಸುವ ಮೂಲಕ ಈ ಕಾಲದಲ್ಲಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಮೂಲಕ ಆಧುನಿಕ ಪದ್ಧತಿಯಲ್ಲಿ ಸಾಂಪ್ರದಾಯಿಕತೆಯ ಮಿಶ್ರಣವನ್ನು ತಂದು ಸಂಪ್ರದಾಯಕ್ಕೆ, ಪರಂಪರೆಗೆ ಗೌರವ ಸಲ್ಲಿಸಬಹುದಾಗಿದೆ.
ಡಾ.ಸೋನಿಯಾ ದತ್ತಾ, ಎಂಡಿಎಸ್, ಸಾರ್ವಜನಿಕ ಆರೋಗ್ಯ ದಂತವೈದ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪ್ರೊಫೆಸರ್