Tuesday, September 17, 2024
Homeರಾಜ್ಯಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ ರಚನೆ : ಸಿಎಂ

ಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ ರಚನೆ : ಸಿಎಂ

Siddaramaiah

ಬೆಂಗಳೂರು,ಸೆ.5- ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಹಾಗೂ ಇತರ ಸಮಸ್ಯೆಗಳ ಅಧ್ಯಯನಕ್ಕಾಗಿ ಸಮಿತಿ ರಚಿಸುವ ಕುರಿತಂತೆ ಸವಿಸ್ತಾರ ಚರ್ಚೆಯ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೈರ್ ತಂಡಕ್ಕೆ ಭರವಸೆ ನೀಡಿದ್ದಾರೆ.

ಚಿತ್ರರಂಗದಲ್ಲಾಗುತ್ತಿರುವ ತಾರತಮ್ಯ ಹಾಗೂ ಕಿರುಕುಳದ ತನಿಖೆಗಾಗಿ ಕೇರಳದ ಮಾದರಿಯಲ್ಲಿ ನ್ಯಾಯಾಂಗ ಆಯೋಗ ರಚಿಸಬೇಕು ಎಂದು ಚಿತ್ರರಂಗದಲ್ಲಿನ ಹಕ್ಕುಗಳು ಹಾಗೂ ಸಮಾನತೆಗಾಗಿ ಶ್ರಮಿಸುತ್ತಿರುವ ಫೈರ್ ಸಂಘ ಟನೆ ಮುಖಂಡರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.

ಇದಕ್ಕೆ ಸಕಾರಾತಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಅವರು, ಮನವಿಯನ್ನು ಸ್ವೀಕರಿಸಿ ಇದು ಗಂಭೀರವಾದ ವಿಚಾರ, ಮತ್ತೊಮೆ ನಿಮ ತಂಡದ ಜೊತೆ ಸವಿಸ್ತಾರವಾದ ಚರ್ಚೆ ನಡೆಸುತ್ತೇನೆ. ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಹಿರಿಯ ಪತ್ರಕರ್ತೆ ಡಾ. ವಿಜಯಮ, ಫೈರ್ ಸಂಘಟನೆಯ ಕಾರ್ಯದರ್ಶಿಯಾದ ನಟ ಚೇತನ್, ನಟಿಯರಾದ ಶೃತಿ ಹರಿಹರನ್ ಹಾಗೂ ನೀತು ಶೆಟ್ಟಿ ಒಳಗೊಂಡ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.

ಕೇರಳದ ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರ ಸಮಸ್ಯೆಗಳನ್ನು ನ್ಯಾಯಮೂರ್ತಿ ಹೇಮಾ ಅವರ ಸಮಿತಿ ಬಹಿರಂಗಪಡಿಸಿದೆ. ಕನ್ನಡ ಚಿತ್ರರಂಗದಲ್ಲೂ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ದೇಶದಲ್ಲೇ ಮೊದಲ ಬಾರಿಗೆ ಫೈರ್ ಸಂಸ್ಥೆ ಕನ್ನಡ ಚಿತ್ರೋದ್ಯಮದಲ್ಲಿ ಆತಂರಿಕ ದೂರುಗಳ ಸಮಿತಿಯನ್ನು ರಚಿಸಿದೆ. ಚಲನಚಿತ್ರೋದ್ಯಮದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತದೆ.

ಲೈಂಗಿಕ ಕಿರುಕುಳ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತನಿಖೆ ಮಾಡಬೇಕು, ಎಲ್ಲಾ ಮಹಿಳೆಯರಿಗೂ ಸುರಕ್ಷಿತ ಹಾಗೂ ನ್ಯಾಯಯುತ ವಾತಾವರಣ ಸೃಷ್ಟಿಸಲು ಅಗತ್ಯ ನಿಯಮಾವಳಿಗಳನ್ನು ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿತ್ತು.

ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಶೃತಿ ಹರಿಹರನ್, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕಿದೆ. ಲೈಂಗಿಕ ಕಿರುಕುಳ ಎಂಬುದು ಒಂದು ಭಾಗ ಮಾತ್ರ. ಅದಕ್ಕಿಂತಲೂ ಮುಖ್ಯವಾಗಿ ಕೆಲಸ ಮಾಡಲು ಪೂರಕವಾದ ವಾತಾವರಣ ಸೃಷ್ಟಿಸಬೇಕಿದೆ. ಉತ್ತಮ ಶಾಚಾಲಯ ವ್ಯವಸ್ಥೆ, ಸುರಕ್ಷಿತ ಸಾರಿಗೆ ಹಾಗೂ ಭದ್ರತೆಗಾಗಿ ಅಗತ್ಯ ನಿಯಮಾವಳಿಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

ನೀತು ಶೆಟ್ಟಿ ಮಾತನಾಡಿ, ಚಿತ್ರರಂಗ ಹೆಣ್ಣುಮಕ್ಕಳಿಗೆ ಕೆಲಸ ಮಾಡಲು ಸುಂದರ ತಾಣವಾಗಬೇಕು. ಲೈಂಗಿಕ ಕಿರುಕುಳ ಎಂಬುದು ಪ್ರತ್ಯೇಕ ವಿಚಾರ. ಚೆಕ್ಬೌನ್‌್ಸ ಆದರೆ ಅದರ ಹಣ ವಾಪಸ್ ಬರುತ್ತದೆಯೋ, ಇಲ್ಲವೋ ಎಂಬ ಆತಂಕ ಕಾಡುತ್ತದೆ. ನಮ ಚಿತ್ರರಂಗ ಎಂಬ ಕಾರಣಕ್ಕೆ ಎಷ್ಟು ದಿನ ಸಹಿಸಿಕೊಳ್ಳಬೇಕು. ಕಾರ್ಪೆಟ್ ವಲಯದಲ್ಲಿ ಈ ರೀತಿ ನಡೆಯುವುದಿಲ್ಲ.

ಸುರಕ್ಷಿತೆಯ ವಿಷಯ ಬಂದಾಗ ಕ್ಯಾರವಾನ್ನಲ್ಲಿ ಏನು ನಡೆಯಿತು?, ಯಾರು ಚಿತ್ರೀಕರಿಸಿದರು?, ಕೆಟ್ಟ ಕಾಮೆಂಟ್ ಮಾಡಿದರು? ಎಂಬೆೆಲ್ಲಾ ಪ್ರಕರಣಗಳೂ ವರದಿಯಾಗುತ್ತಿವೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಶಾಂತಿಯುತವಾದ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.
ಕಡಿಮೆ ಅವಧಿಯಲ್ಲಿ ಸರ್ಕಾರಕ್ಕೆ ಮನವಿ ನೀಡಲು ನಿರ್ಧಾರ ತೆಗೆದುಕೊಳ್ಳಲಾಯಿತು. 162 ಮಂದಿ ಮನವಿ ಪತ್ರಕ್ಕೆ ಸಹಿ ಹಾಕಿದರು. ಬಹಳಷ್ಟು ಜನ ಇದಕ್ಕೆ ಧ್ವನಿಯಾಗಲಿದ್ದಾರೆ ಎಂದು ಹೇಳಿದರು.

RELATED ARTICLES

Latest News