Saturday, October 26, 2024
Homeರಾಷ್ಟ್ರೀಯ | Nationalಮಣಿಪುರದಲ್ಲಿ ಮದ್ದು ಗುಂಡುಗಳನ್ನ ವಶ ಪಡೆದ ಪೊಲೀಸರು

ಮಣಿಪುರದಲ್ಲಿ ಮದ್ದು ಗುಂಡುಗಳನ್ನ ವಶ ಪಡೆದ ಪೊಲೀಸರು

Huge cache of arms, ammunition seized in Manipur

ಇಂಫಾಲ , ಅ. 26 (ಪಿಟಿಐ) ಮಣಿಪುರದ ಬಿಷ್ಣುಪುರ್ ಮತ್ತುಇಂಫಾಲ ಪಶ್ಚಿಮ ಜಿಲ್ಲೇಗಳಲ್ಲಿ ಭದ್ರತಾ ಪಡೆಗಳು ಶಸ್ರಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಷ್ಣುಪುರ್ ಜಿಲ್ಲೇಯ ಉಯುಂಗ್‌ ಮುಖೋಗ್ ನಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 7.62 ಎಂಎಂ ಸ್ವಯಂ ಲೋಡಿಂಗ್ ರೈಲ್, ಆರು ಗ್ರೆನೇಡ್‌ಗಳು, ನಾಲ್ಕು ಗ್ರೆನೇಡ್ ಆರ್ಮ್ ರಿಂಗ್‌ಗಳು, ಎರಡು ಅಶ್ರುವಾಯು ಗ್ರೆನೇಡ್‌ಗಳು, ಮೂರು ಸ್ಟಿಂಗರ್ ಗ್ರೆನೇಡ್‌ಗಳು ಮತ್ತು 2.3 ಕೆಜಿ ತೂಕದ ಐಇಡಿ ಪತ್ತೆಯಾಗಿದೆ ಎಂದು ಅವರು ಹೇಳಿದರು.

ಇಂಫಾಲ್ ಪಶ್ಚಿಮ ಜಿಲ್ಲೇಯ ಶಾಂತಿಪುರ ಮಖಾ ಲೈಕೈಯಲ್ಲಿ ಇದೇ ರೀತಿಯ ಕಾರ್ಯಾಚರಣೆಯಲ್ಲಿ, ಸಿಂಗಲ್ ಬ್ಯಾರೆಲ್ ಗನ್, ಎರಡು 9 ಎಂಎಂ ಪಿಸ್ತೂಲ್‌ಗಳು, ಎರಡು ಮ್ಯಾಗಜೀನ್‌ಗಳು, 7.62 ಎಲ್‌ಎಂಜಿ ಮ್ಯಾಗಜೀನ್ ಮತ್ತು ಮೂರು ಎಂ -67 ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು

RELATED ARTICLES

Latest News