ಇಂಫಾಲ, ಜ. 1 (ಪಿಟಿಐ) ಮಣಿಪುರದ ಬಿಷ್ಣುಪುರ್ ಮತ್ತು ತೌಬಲ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಬಿಷ್ಣುಪುರ್ ಜಿಲ್ಲೆಯ ಥೋಂಗ್‌ಖೋಂಗ್ಲೋಕ್ ಗ್ರಾಮದಿಂದ ಭದ್ರತಾ ಪಡೆಗಳು ಒಂದು ಎಸ್‌ಎಲ್‌ಆರ್‌ನೊಂದಿಗೆ ಒಂದು ವ್ಯಾಗಜೀನ್, ಒಂದು 303 ರೈಫಲ್, ಒಂದು 12 ಬೋರ್ ಸಿಂಗಲ್ ಬ್ಯಾರೆಲ್ ಗನ್, ಎರಡು 9 ಎಂಎಂ ಪಿಸ್ತೂಲ್ ಜೊತೆಗೆ ವ್ಯಾಗಜೀನ್, ಒಂದು ಆಂಟಿ-ರಿಯೆಟ್ ಗನ್, ಎರಡು ಇನ್ಸಾಸ್ ಎಲ್‌ಎಂಜಿ ವ್ಯಾಗಜೀನ್, ಎರಡು ಇನ್ಸಾಸ್ ರೈಫಲ್‌ಗಳನ್ನು ವಶಪಡಿಸಿಕೊಂಡಿವೆ. ಜೊತೆಗೆ ನಾಲ್ಕು ಕೈ ಗ್ರೆನೇಡ್‌ಗಳು, ಒಂದು ಡಿಟೋನೇಟರ್, ಐದು ಗಲಭೆ ನಿಗ್ರಹ ಶೆಲ್, ಮದ್ದುಗುಂಡುಗಳು ಮತ್ತು ಇತರ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರತಾ ಪಡೆಗಳು ತೌಬಲ್ ಜಿಲ್ಲೆಯ ಲೀಶಾಂಗ್ಥೆಮ್ ಐಕಾಪ್ ಪ್ಯಾಟ್ ಪ್ರದೇಶದಿಂದ ದಷ್ಟಿಗೋಚರ ವ್ಯಾಪ್ತಿ ಮತ್ತು ವ್ಯಾಗಜೀನ್‌ನೊಂದಿಗೆ ಮಾರ್ಪಡಿಸಿದ ಒಂದು ಆಂಟಿ ಮೆಟೀರಿಯಲ್ ರೈಫಲ್ ಸ್ನೈಪರ್, ಎರಡು ಸಿಂಗಲ್ ಬೋಲ್ಟ್ ಆಕ್ಷನ್ ರೈಫಲ್, ಮೂರು 9ಎಂಎಂ ಪಿಸ್ತೂಲ್ (ದೇಶ ನಿರ್ಮಿತ), ಒಂದು ಕೈ ಗ್ರೆನೇಡ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಏತನಧ್ಯೆ, ಇಂಫಾಲ್ ಪೂರ್ವ ಜಿಲ್ಲೆಯ ಬೆಂಗಾಲಿ ಕ್ರಾಸಿಂಗ್ ಬಳಿಯ ಮಂತ್ರಿಪುಖ್ರಿ ಬಜಾರ್‌ನಿಂದ ಸುಲಿಗೆಯಲ್ಲಿ ತೊಡಗಿದ್ದ ನಿಷೇಧಿತ ಸಂಘಟನೆ ಕಾಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್) ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಆತನ ಬಳಿ ಇದ್ದ ಒಂದು 9 ಎಂಎಂ ಪಿಸ್ತೂಲ್, ವ್ಯಾಗಜೀನ್‌ನ ಎರಡು ಹಣದ ರಸೀದಿಗಳು (ಪಿಡಬ್ಲ್ಯೂಜಿ) ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.