ಬೆಂಗಳೂರು,ಅ.17- ಬಿ ಖಾತೆಯಿಂದ ಎ ಖಾತೆ ನೀಡುವ ಜಿಬಿಎ ನಿರ್ಧಾರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯೋಜನೆ ಆರಂಭದಲ್ಲೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಈಗಾಗಲೇ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ ಜಾತಿ ಗಣತಿ ಕಾರ್ಯ ಮುಗಿದ ಕೂಡಲೇ ಅರ್ಜಿ ವಿಲೇವಾರಿ ಕಾರ್ಯ ಆರಂಭಿಸುತ್ತೇವೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಮ್ಮ ಕಂಟ್ರೋಲ್ ರೂಂಗೆ ಖಾತೆಗೆ ಸಂಬಂಧಿಸಿದ ಸಾವಿರಾರು ಕರೆಗಳು ಬರುತ್ತಿವೆ. ಸಬ್ ರಿಜಿಸ್ಟ್ರಾರ್ ದರದ ಶೇ.5 ರಷ್ಟು ಮೊತ್ತವನ್ನು ಜನರು ಪಾವತಿ ಮಾಡಬೇಕು. ಮಾರ್ಕೆಟ್ ದರ ಹೆಚ್ಚಿರುತ್ತೆ ಹೀಗಾಗಿ ಗೈಡ್‌ಲೈನ್ಸ್ ವ್ಯಾಲ್ಯೂ ಪರಿಗಣನೆ ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅವಧಿ ವಿಸ್ತಿರಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ಕೊಟ್ಟ ಡೆಡ್ ಲೈನ್ ಗೆ ಕೆಲವೇ ದಿನಗಳು ಬಾಕಿ ಇದೆ. ಈ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಯತ್ನಿಸಲಾಗುವುದು. ಸಾಧ್ಯವಾಗದಿದ್ದರೆ ಸರ್ಕಾರದೊಂದಿಗೆ ಮಾತನಾಡಿ ಅವಧಿ ವಿಸ್ತರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ನಗರದಲ್ಲಿ ಪಟಾಕಿ ಅಂಗಡಿಗಳಿಗೆ ಪೊಲೀಸ್ ಕಮಿಷನರ್ ಕೊಡ್ತಾರೆ ನಮ ಕಡೆಯಿಂದ ಪಟಾಕಿ ಮಳಿಗೆಗೆ ಜಾಗ ಗುರುತು ಮಾಡುವ ಕೆಲಸ ಆಗಿದೆ. ಪೊಲೀಸ್ ಕಮಿಷನರ್ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ಸುರಕ್ಷತೆಗೆ ಏನೇನ್ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧರಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.