Saturday, October 19, 2024
Homeರಾಷ್ಟ್ರೀಯ | Nationalಚಂಡಮಾರುತಕ್ಕೆ ಫ್ಲೋರಿಡಾ ತತ್ತರ, 12ಕ್ಕೂ ಹೆಚ್ಚು ಮಂದಿ ಸಾವು

ಚಂಡಮಾರುತಕ್ಕೆ ಫ್ಲೋರಿಡಾ ತತ್ತರ, 12ಕ್ಕೂ ಹೆಚ್ಚು ಮಂದಿ ಸಾವು

Hurricane Milton batters Florida with tornadoes and floods

ಫ್ಲೋರಿಡಾ,ಅ.10– ಮಿಲ್ಟನ್ ಚಂಡಮಾರುತದಿಮದಾಗಿ ಫ್ಲೋರಿಡಾದ ಗಲ್ಫ್ ಕರಾವಳಿಯ ಉದ್ದಕ್ಕೂ ವಿನಾಶಕಾರಿ ಆರ್ಭಟದ ಹಿನ್ನಲೆಯಲ್ಲಿ 12 ಕ್ಕೂ ಹೆಚ್ಚು ಮಂದಿ ಸಾವನ್ನಿಪ್ಪಿದ್ದು ,ವ್ಯಾಪಕ ಮಳೆ,ಪ್ರವಾಹ, ಭೂಕುಸಿತದಿಂದ ಜನರು ತತ್ತರಿಸಿದ್ದಾರೆ.

ಹಲವಾರು ಮನೆಗಳಿಗೆ ಹಾನಿಯಾಗಿದೆ.ಲಕ್ಷಾಂತರ ಜನರಿಗೆ ವಿದ್ಯುತ್ ಬಂದ್ಆಗಿದೆ.ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಎಡಡನೇ ಭಾರಿಗೆ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಿದೆ. ಪ್ರಬಲವಾದ ಗಾಳಿ,ಮಳೆ ರಾಜ್ಯಾದ್ಯಂತ ತೀವ್ರ ಹಾನಿ ಉಂಟಾಗಿದೆ.

ಫ್ಲೋರಿಡಾದ ಫೋರ್ಟ್ ಪಿಯರ್ಸ್ನಲ್ಲಿ ಸುಂಟರಗಾಳಿ ಅಪ್ಪಳಿಸಿದ ಕಾರಣ ಅನೇಕ ಸಾವುಗಳಿಗೆ ಕಾರಣವಾಯಿತು. ಚಂಡಮಾರುತವು ಸ್ಪ್ಯಾನಿಷ್ ಲೇಕ್‌್ಸ ಕಂಟ್ರಿ ಕ್ಲಬ್ ವಿಲೇಜ್ ಮೂಲಕ ಹರಿದುಹೋದಾಗ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಕತ್ತಲಾದ ನಂತರವೂ ಬದುಕುಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಸರ್ಕಾರಿ ಕಚೇರಿ ತಿಳಿಸಿದೆ.ಆದರೆ ಬಲಿಯಾದವರ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ.

ಸುಮುದ್ರದಲ್ಲಿ ಬಾರಿ ಗಾತ್ರದ ಅಲೆಗಳು ಏಳುತ್ತಿದ್ದು ಜನರನ್ನು ಆತಂಕಕ್ಕೆ ದೂಡಿದೆ ಮತ್ತು ಫ್ಲೋರಿಡಾದಲ್ಲಿ ಪತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ರಾಷ್ಟ್ರೀಯ ಹವಾಮಾನ ಇಲಾಖೆ ಇದು ಮಾನವ ಜೀವಕ್ಕೆ ತೀವ್ರ ಅಪಾಯವನ್ನುಂಟು ಮಾಡುತ್ತದೆ ಮತ್ತು ತಕ್ಷಣವೇ ಅಥವಾ ಮುಂದಿನ ದಿನಗಳಲ್ಲಿ ಸಂಭವಿಸುವ ದುರಂತದ ಸೂಚನೆ ಎಂದು ಹೇಳಿದೆ.

ಮಿಲ್ಟೂನ್ನಲ್ಲಿ 70,000 ಮನೆಗಳು ಮತ್ತು ವಾಣಿಜ್ಯ ವಹಿವಾಟು ಕತ್ತಲೆಯಲ್ಲಿ ಮುಳುಗಿದೆ. ಈ ಪ್ರದೇಶದಲ್ಲಿ ಸುಮಾರು 125 ಮನೆಗಳು ನೆಲಕ್ಕುರುಳಿವೆ ಮತ್ತು ಹೆಚ್ಚಿನ ನಷ್ಟವನ್ನು ನಿರೀಕ್ಷಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಇದು ಚಂಡಮಾರುತ ಅಪ್ಪಳಿಸುವ ಮೊದಲು.

ಚಂಡಮಾರುತದಿಂದ ಸುರಕ್ಷಿತ ಸ್ಥಳವನ್ನು ಹುಡುಕಲು ಸುಮಾರು 200 ಜನರು ಒರ್ಲ್ಯಾಂಡೊದ ಪ್ರೌಢಶಾಲೆಗೆ ಬಂದಿದ್ದಾರೆ . ಕೆಲವರು ತಮ ಸಾಕುಪ್ರಾಣಿಗಳೊಂದಿಗೆ ಮತ್ತು ಇತರರು ಮನರಂಜನೆಗಾಗಿ ಬೋರ್ಡ್ ಆಟಿಕೆಗಳನ್ನು ತಂದಿದ್ದಾರೆ.

RELATED ARTICLES

Latest News