ಚಿಕ್ಕೋಡಿ,ಮೇ.19-ಮಕ್ಕಳಾಗಲಿಲ್ಲ ಎಂದು ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಪತಿ ಹಾಗು ಇದಕ್ಕೆ ಸಹಕಾರ ನೀಡಿದ್ದ ಆತನ ಪೋಷಕರನ್ನು ಅಥಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಥಣಿ ತಾಲೂಕಿನ ಮಲಬಾದ ಗ್ರಾಮದ ರೇಣುಕಾ(27) ಯೊಲೆಯಾದ ಮಹಿಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸಂತೋಷ ಹೊನಕಾಂಡೆ, ಆತನ ತಂದೆ ಕಾಮಣ್ಣ ಹಾಗೂ ತಾಯಿ ಜಯಶ್ರೀಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ರಾತ್ರಿ ಏಕಾಏಕಿ ಬೈಕ್‌ನಲ್ಲಿ ಪತ್ನಿ ರೇಣುಕಾಳನ್ನು ಕರೆದುಕೊಂಡು ಹೋದ ಸಂತೋಷ ಹೊನಕಾಂಡೆ ಮಾರ್ಗ ಮಧ್ಯೆ ಉದ್ದೇಶ ಪೂರ್ವವಕವಾಗಿ ತಳ್ಳಿ ಬೀಳಿಸಿದ್ದ ಆಕೆ ರಸ್ತೆಗೆ ಉರುಳಿಬಿದ್ದು ತೀವ್ರವಾಗಿ ಗಾಯಗೊಂಡು ಮೃತಪ್ಪಟಿದ್ದಳು.
ನಂತರ ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರಿಗೆ ಅಪಘಾತವೆಂದು ಬಿಂಬಿಸಲು ಸಂತೋಷ ಮುಂದಾದ. ಈತನ ನಡೆ ಕಂಡು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ಅಪಘಾತವಲ್ಲ ಕೊಲೆ ಎಂದು ಬೆಳಕಿಗೆ ಬಂದಿದೆ.
ಸಂಚಿನಲ್ಲಿ ಬಾಗಿಯಾಗಿದ್ದ ಬಾಗಿಯಾಗಿದ್ದ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.