Saturday, January 18, 2025
Homeರಾಜ್ಯಪತ್ನಿಯನ್ನು ಗುಂಡಿಕ್ಕಿ ಕೊಂದು ಆ್ಯಸಿಡ್ ಕುಡಿದು ಪತಿ ಆತ್ಮಹತ್ಯೆ

ಪತ್ನಿಯನ್ನು ಗುಂಡಿಕ್ಕಿ ಕೊಂದು ಆ್ಯಸಿಡ್ ಕುಡಿದು ಪತಿ ಆತ್ಮಹತ್ಯೆ

Husband commits suicide by consuming acid after shooting wife

ಮಂಗಳೂರು, ಜ.18- ಕುಡಿದ ಅಮಲಿನಲ್ಲಿ ನಡೆದ ಜಗಳದ ವೇಳೆ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಪಾಪಿ ಪತಿ ನಂತರ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಕೊಲೆಯಾದವರನ್ನುವಿನೋದಾ ಕುಮಾರಿ ಎಂದು ಗುರುತಿಸಲಾಗಿದ್ದು,ಆಕೆಯ ಪತಿ ರಾಮಚಂದ್ರಗೌಡ ಮನನೊಂದು ಆತಹತ್ಯೆಮಾಡಿಕೊಂಡಿದ್ದಾನೆ.ರಾಮಚಂದ್ರ ನಿತ್ಯ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದ ,ಅದೇ ರೀತಿ ಕಳೆದ ರಾತ್ರಿ ಕೂಡ ದಂಪತಿ ಗಲಾಟೆ ನಡೆದಿದ್ದು,ಬಿಡಿಸಲು ಬಂದ ಮಗ ಪ್ರಶಾಂತ್ನಿಗೆ ಫೈರಿಂಗ್ ಮಾಡಲು ರಾಮಚಂದ್ರ ಯತ್ನಿಸಿದ್ದಾನೆ. ಮಗನಿಗೆ ಶೂಟ್ ಮಾಡುವಾಗ ತಾಯಿ ವಿನೋದಾ ಅಡ್ಡ ಬಂದಿದ್ದಾರೆ. ಈ ವೇಳೆ ಗುಂಡು ತಗುಲಿ ವಿನೋದಾ ಕುಮಾರಿ ಮೃತಪಟ್ಟಿದ್ದಾರೆ.

ಇದಾದ ನಂತರ ಪತ್ನಿಯ ಸಾವಿನಿಂದ ಮನನೊಂದ ರಾಮಚಂದ್ರ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News