ಮಡಿಕೇರಿ,ನ.16-ವಿಡಿಯೋ ಕಾಲ್ ಮೂಲಕ ತನ್ನ ಪತ್ನಿಗೆ ಕರೆ ಮಾಡಿ ನೇಣು ಬಿಗಿದುಕೊಂಡು ಪತಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಸಮೀಪದ ಸಿಂಕೋನ ಪ್ರದೇಶದಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ನಿವಾಸಿ ಕೀರ್ತನ್ (36) ಆತಹತ್ಯೆ ಮಾಡಿಕೊಂಡ ವ್ಯಕ್ತಿ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಕೀರ್ತನ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಪತಿ ಜೈಲಿಗೆ ಹೋದ ಸಂದರ್ಭದಲ್ಲಿ ಪತ್ನಿ ಜ್ಯೋತಿ ತವರು ಮನೆ ಹೋಗಿದ್ದರು.ನಿನ್ನೆ ಪತ್ನಿಗೆ ಕರೆ ಮಾಡಿ ಆಕೆಯ ಮನೆಗೆ ಹೋಗಿದ್ದಾನೆ. ಎಷ್ಟೇ ಕರೆದರೂ ಪತ್ನಿ ಬರಲು ನಿರಾಕರಿಸಿದ್ದು ಅಲ್ಲಿಂದ ಓಡಿಸಲಾಗಿದೆ.
ಇದರಿಂದ ಮನನೊಂದ ಪತಿ ನಿನ್ನೆ ಸಂಜೆ ವೀಡಿಯೋ ಕಾಲ್ ಮಾಡಿ ಕೀರ್ತನ್ ಆತ ಹತ್ಯೆ ಮಾಡಿಕೊಂಡಿದ್ದಾರೆ.ಇಂದು ಮೃತದೇಹ ಪತ್ತೆಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
