ರಾಯಚೂರು,ಜ.24-ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಒಳಗಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಮೃತನ ಪತ್ನಿ ಗೃಹಸಚಿವರಿಗೆ ಮಾಂಗಲ್ಯಸರ ಸಮೇತ ಮನವಿ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.
ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್ ಗ್ರಾಮ ಶರಣಬಸವ (35) ಮೃತ ವ್ಯಕ್ತಿಯಾಗಿದ್ದು ಸರಕುಸಾಗಣೆ ವಾಹನದ ಚಾಲಕರಾಗಿದ್ದ ಶರಣಬಸವ, ವಿವಿಧ ಫೈನಾನ್‌್ಸಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಆದರೆ ಅವರು ನೀಡಿದ ಕಿರುಕುಳ ತಾಳದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆ.
ಮನೆಗೆ ಆಧಾರವಾಗಿದ್ದ ಪತಿ ಕಳೆದುಕೊಡ ಪತ್ನಿ, ಮೂವರು ಮಕ್ಕಳು, ತಂದೆ, ತಾಯಿ ಕಂಗಾಲಾಗಿದ್ದಾರೆ. ಫೈನಾನ್ಸ್ ಮಂದಿಯ ಕಿರುಕುಳ ವನ್ನು ಉಲ್ಲೇಖಸಿ, ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ಪ್ರಕರಣ ದಾಖಲಿಸಲಾಗಿದೆ.
ಮೃತನ ಪತ್ನಿ ಪಾರ್ವತಿ ಈಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ಅವರಿಗೆ ಮಾಂಗಲ್ಯ ಸರ ಹಾಗೂ ಮನವಿ ಪತ್ರವನ್ನು ಸ್ಪೀಡ್ ಪೋಸ್ಟ್ ಮಾಡಿದ್ದಾರೆ. ಮನೆಗೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡಿರುವುದರಿಂದ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಸಾಲ ವಸೂಲಿಗಾಗಿ ಕಿರುಕುಳ ಕೊಡುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.