ಮೈಸೂರು,ಆ.18- ಕುಡಿಯಲು ಹಣ ನೀಡದ ಪತ್ನಿಯನ್ನು ಮಚ್ಚಿನಿಂದ ಹಲ್ಲೆಗೈದು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇಶ್ವರಿ ಬಡಾವಣೆಯಲ್ಲಿ ನಡೆದಿದೆ.ಗಾಯತ್ರಿ ಪತಿಯಿಂದ ಕೊಲೆಯಾದ ಪತ್ನಿ.
ಈ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಪಾಪಣ್ಣ ಸಾಲಗಾರನಾಗಿದ್ದು, ಜೊತೆಗೆ ಕುಡಿತದ ದಾಸನಾಗಿದ್ದ. ಕೆಲಸವಿಲ್ಲದೆ ಅಲೆದಾಡುತ್ತಿದ್ದ ಪಾಪಣ್ಣ ಹಣಕ್ಕಾಗಿ ಪತ್ನಿ ಹಾಗೂ ಮಕ್ಕಳನ್ನು ಪೀಡಿಸುತ್ತಿದ್ದ. ಇದಕ್ಕೆ ಮಕ್ಕಳು ಹಾಗೂ ಪತ್ನಿ ಹಲವು ಬಾರಿ ಬುದ್ದಿವಾದ ಹೇಳಿದ್ದರು. ಈಗಲೇ ಮದುವೆಯ ಸಾಲವಿದೆ. ನಿನಗೆ ಕುಡಿಯಲು ಹಣ ಎಲ್ಲಿಂದ ಕೊಡಲು ಸಾಧ್ಯ ಎಂದಿದ್ದರು.
ಸಾಹುಕಾರ ಹುಂಡಿಯಲ್ಲಿ ಜಮೀನಿದ್ದು, ಅದನ್ನು ಮಾರಾಟ ಮಾಡಿ ಹಣ ಕೊಡುವಂತೆ ಪಾಪಣ್ಣ ಪಟ್ಟು ಹಿಡಿದಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮಕ್ಕಳು ಮನೆಯಲ್ಲಿಲ್ಲದಿದ್ದಾಗ ಗಲಾಟೆ ತೆಗೆದು ಪತ್ನಿಯನ್ನು ಮಚ್ಚಿನಿಂದ ಹಲ್ಲೆಗೈಯ್ದು ಕೊಂದಿದ್ದಾನೆ.
ಗಾಬರಿಯಿಂದ ಮನೆಯ ಬೀಗ ಹಾಕುತ್ತಿದ್ದ ದೃಶ್ಯವನ್ನು ಮಗ ನೋಡಿ ಪ್ರಶ್ನಿಸಿದ್ದು, ತಂದೆ ತಬ್ಬಿಬ್ಬಾದ. ಜೊತೆಗೆ ಕೈ ರಕ್ತಮಯವಾಗಿದ್ದನ್ನು ಗಮನಿಸಿ ಹಿಂದಿನ ಬಾಗಿಲು ತೆರೆದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ತಾಯಿಯ ಬಳಿ ಹೋಗಿ ನೋಡುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.ಈ ಸಂಬಂಧ ವಿಜಯನಗರ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
- ಬಿಹಾರ ಮತದಾರರ ಪಟ್ಟಿಯಿಂದ ಅಳಿಸಲಾದ 65 ಲಕ್ಷ ಜನರ ಹೆಸರು ಬಹಿರಂಗ
- ಎಸ್ಐಆರ್ ಮತಚೋರಿಯ ಹೊಸ ಆಸ್ತ್ರ ; ರಾಹುಲ್ ಗಾಂಧಿ
- ನಾಳೆ ಟಿ20 ತಂಡದ ಆಯ್ಕೆ, ತಂಡ ಸೇರುವರೇ ಗಿಲ್..?
- ಮೇಘಾಲಯದಲ್ಲಿ 4.4ಕೋಟಿ ಮೌಲ್ಯದ ಹೆರಾಯಿನ್ ವಶ, ಮೂವರು ಮಹಿಳೆಯರ ಬಂಧನ
- ಚೀನಾ ವಿದೇಶಾಂಗ ಸಚಿವರ ಭಾರತ ಭೇಟಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ