Thursday, December 12, 2024
Homeಬೆಂಗಳೂರುಶೀಲ ಶಂಕಿಸಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

ಶೀಲ ಶಂಕಿಸಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

Husband pours petrol on wife, sets her on fire,

ಬೆಂಗಳೂರು,ನ.30– ಪತ್ನಿಯ ಶೀಲ ಶಂಕಿಸಿ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ತಾನು ಆತಹತ್ಯೆಗೆ ಯತ್ನಿಸಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊತ್ತನೂರು ಭಾಗದ ಮಾರಮ ದೇಗುಲ ರಸ್ತೆಯ ಮನೆಯಲ್ಲಿ ವಾಸವಿದ್ದ ಪ್ರಭು ಜಂಗ್ಲಿ ತನ್ನ ಪತ್ನಿ ಪ್ರಿಯಾಂಕಾಗೆ ಬೆಂಕಿ ಹಚ್ಚಿ ತಾನು ಆತಹತ್ಯೆಗೆ ಯತ್ನಿಸಿದ್ದಾನೆ.

ಎರಡು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಮೊದಲು ಅನೂನ್ಯವಾಗಿದ್ದರು. ನಂತರದ ದಿನಗಳಲ್ಲಿ ಪತ್ನಿ ಪ್ರಿಯಾಂಕಾ ಮೇಲೆ ಪತಿಗೆ ಅನುಮಾನ ಮೂಡಿ ಜಗಳವಾಡಿದ್ದಾನೆ.
ಮೊನ್ನೆ ರಾತ್ರಿ ಕುಡಿದು ಮನೆಗೆ ಬಂದು ಅದೇ ಮತ್ತಿನಲ್ಲಿ ಪತ್ನಿ ಪ್ರಿಯಾಂಕಾ ಮೇಲೆ ಪೆಟ್ರೋಲ್ ಸುರಿದು ನಂತರ ತಾನೂ ಪೆಟ್ರೋಲ್ ಸುರಿದುಕೊಂಡು ಏಕಾಏಕಿ ಬೆಂಕಿ ಕಡ್ಡಿ ಗೀರಿದ್ದಾನೆ.

ಬೆಂಕಿ ಉರಿ ತಾಳಲಾರದೆ ಮನೆಯಿಂದ ಹೊರಗಡೆ ಓಡಿ ಬಂದಿದ್ದ ಇಬ್ಬರನ್ನೂ ಸ್ಥಳೀಯರು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಸಂಬಂಧಿ ಅರುಣ್ ಪ್ರತಿಕ್ರಿಯಿಸಿದ್ದು, ಪ್ರಭು ಮೂಲತಃ ಬೆಳಗಾವಿಯವರು, ಪ್ರಿಯಾಂಕ ಬೆಂಗಳೂನವರಾಗಿದ್ದು, ಎರಡು ವರ್ಷಗಳ ಹಿಂದೆ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ.

ಮದುವೆ ಆದಾಗಿನಿಂದಲೂ ಇಬ್ಬರೂ ಪ್ರತಿ ದಿನ ಜಗಳವಾಡುತ್ತಿದ್ದರು. ಪ್ರಭು ದಿನ ಕುಡಿದು ಪ್ರಿಯಾಂಕ ಮೇಲೆ ಹಲ್ಲೆ ಮಾಡುತ್ತಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲೂ ದೂರುಗಳು ದಾಖಲಾಗಿವೆ. ಪ್ರಭು ತನ್ನ ಅಕ್ಕಂದಿರ ಮಾತು ಕೇಳಿ ಪ್ರಿಯಾಂಕ ಮೇಲೆ ಅನುಮಾನ ಪಡುತ್ತಿದ್ದ.

ಒಂದೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಸಂಸಾರ ಮುಂದುವರೆಸಿದ್ದರು, ಮತ್ತೆ ಇಬ್ಬರೂ ಜಗಳ ಆಡಿದ್ದಾರೆ. ಮಾತಿಗೆ ಮಾತು ಬೆಳೆದು ಪ್ರಭು ಪ್ರಿಯಾಂಕ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದಿದ್ದಾರೆ.ಸದ್ಯ ಇಬ್ಬರಿಗೂ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಮುಂದುವರೆದಿದೆ. ಆರೋಪಿ ಪತಿ ಪ್ರಭು ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

RELATED ARTICLES

Latest News