ಮಕ್ಕಳಾಗಲಿಲ್ಲವೆಂದು ರುಬ್ಬುಕಲ್ಲಿನಿಂದ ಜಜ್ಜಿ ಮಹಿಳೆಯ ಕೊಲೆ

ವಿಜಯನಗರ,ನ.19- ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮಹಿಳೆ ಬಾಯಿಗೆ ಬಟ್ಟೆ ತುರುಕಿ ರುಬ್ಬುಕಲ್ಲಿನಿಂದ ಆಕೆಯ ಪತಿ ಹಾಗೂ ಕುಟುಂಬಸ್ಥರೇ ಜಜ್ಜಿ ಕೊಲೆ ಮಾಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಈರಮ್ಮ ಕೊಲೆಯಾದ ದುರ್ದೈವಿ. 11 ವರ್ಷಗಳ ಹಿಂದೆ ಪಟ್ಟಣದಲ್ಲಿ ಫೋಟೋಗ್ರಾಫರ್ ಆಗಿದ್ದು, ಆನಂದ ಎಂಬುವರೊಂದಿಗೆ ಈರಮ್ಮನ ವಿವಾಹವಾಗಿತ್ತು. ಮಕ್ಕಳಾಗಲಿಲ್ಲವೆಂದು ಆತನ ಮನೆಯವರು ದಿನನಿತ್ಯ ಕಿರುಕುಳ ನೀಡುತ್ತಿದ್ದರು. ನ.16-18ರಂದು ಮೂರು ದಿನಗಳವರೆಗೆ ಈರಮ್ಮಗೆ ಹೊಡೆದು ನಂತರ ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಪೋಲೀಸರಿಗೆ ತಿಳಿಸಿದ್ದಾರೆ. ಇದೇ ಮೊದಲ […]

ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ-ಪ್ರಿಯಕರನ ಸೆರೆ

ಬೆಂಗಳೂರು,ಅ.27- ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಾನೆಂದು ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಂಡಪ್ಪಲೇಔಟ್‍ನ ಶ್ವೇತ (21) ಮತ್ತು ಪ್ರಿಯಕರ ಆಂಧ್ರಪ್ರದೇಶದ ಪೆನುಗೊಂಡ ನಿವಾಸಿ ಸುರೇಶ್ ಅಲಿಯಾಸ್ ಮೂಲಿ ಸೂರಿ (25) ಬಂಧಿತರು. ಕೊಂಡಪ್ಪಲೇಔಟ್‍ನಲ್ಲಿ ವಾಸವಾಗಿದ್ದ ಅಳಿಯ ಚಂದ್ರಶೇಖರ್ ಅವರನ್ನು ಮನೆಯ ಮೂರನೇ ಟೆರಸ್‍ನಲ್ಲಿ ಅ.21ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವುದಾಗಿ ಮಾವ ಶಿವಪ್ಪ ಎಂಬುವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ […]

ಪತಿಯ ಮರ್ಮಾಂಗಕ್ಕೆ ಬಿಸಿನೀರು ಸುರಿದ ಪತ್ನಿ, ಕಾರಣವೇನು ಗೊತ್ತೇ..?

ಚೆನ್ನೈ,ಆ.18- ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇಲೆ ಮಹಿಳೆಯೊಬ್ಬಳು ಪತಿಯ ಮರ್ಮಾಂಗಕ್ಕೆ ಬಿಸಿ ನೀರು ಸುರಿದಿರುವ ಪೈಶಾಚಿಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪತ್ನಿಯ ಪೈಶಾಚಿಕ ಕೃತ್ಯದಿಂದ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ತಮಿಳುನಾಡಿನ ಪುದುಪಟ್ಟು ನಿವಾಸಿ ತಂಗರಾಜ್ ಎಂದು ಗುರುತಿಸಲಾಗಿದೆ. ಬಿಸಿನೀರಿನಿಂದ ಆತನ ದೇಹ ಶೇ.50 ರಷ್ಟು ಸುಟ್ಟು ಹೋಗಿದ್ದು, ಸ್ಥಳೀಯರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿರುವುದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತಂಗರಾಜು ಏಳು ವರ್ಷದ ಹಿಂದೆ ಪ್ರಿಯ ಎಂಬುವರನ್ನು ವಿವಾಹವಾಗಿದ್ದ, […]

ನಿರ್ಜನ ಪ್ರದೇಶದಲ್ಲಿ ಪತ್ನಿಯ ಕೊಲೆ ಮಾಡಿದ್ದ
ಪತಿ ಸೇರಿ ಇಬ್ಬರ ಬಂಧನ

ಬೆಂಗಳೂರು, ಜು.12- ಪತ್ನಿಯ ನಡತೆ ಸರಿ ಇಲ್ಲವೆಂದು ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆಸಿಕೊಂಡು ಕೊಲೆ ಮಾಡಿ ಸುಟ್ಟು ಹಾಕಿದ ಪ್ರಕರಣವನ್ನು ಭೇದಿಸಿರುವ ಕೆಂಗೇರಿ ಠಾಣೆ ಪೊಲೀಸರು ಆರೋಪಿ ಪತಿ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ ಅಲಿಯಾಸ ಮೊಹಮ್ಮದ್ ರಫೀಕ್(29) ಜೆಸಿಬಿ ಚಾಲಕ. ಮತ್ತು ದೊಡ್ಡಬಳ್ಳಾಪುರ ತಾ. ಕರೀಂ ಸೊಣ್ಣೇನಹಳ್ಳಿ ಗ್ರಾಮದ ಸ್ನೇಹಿತ ಪ್ರಜ್ವಲ್(21) ಬಂಧಿತರು. ಕೆಂಗೇರಿ ಉಪನಗರದ ಸನ್‍ಸಿಟಿಯಲ್ಲಿ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ- ನಗೀನಾ ಖಾನಂ […]