Thursday, January 16, 2025
Homeಬೆಂಗಳೂರುಶೀಲ ಶಂಕಿಸಿ ಪತ್ನಿಗೆ ಇರಿದಿದ್ದ ಪತಿ ಬಂಧನ

ಶೀಲ ಶಂಕಿಸಿ ಪತ್ನಿಗೆ ಇರಿದಿದ್ದ ಪತಿ ಬಂಧನ

ಬೆಂಗಳೂರು, ಏ.4- ಪತ್ನಿಗೆ ಅಕ್ರಮ ಸಂಬಂಧ ವಿದೆಯೆಂದು ಶಂಕಿಸಿ ಚಾಕುವಿನಿಂದ ಇರಿದಿದ್ದ ಆಟೋ ಚಾಲಕನನ್ನು ಪುಟ್ಟೇನ ಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೆ.ಪಿ.ನಗರದಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ವಾಸವಿರುವ ಮಹಿಳೆಯೊಬ್ಬರು ಎಚ್.ಎಸ್. ಆರ್ ಲೇಔಟ್ನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕೆಲಸದ ವಿಚಾರವಾಗಿ ಮಾತನಾಡಲು ಸಹೊದ್ಯೋಗಿಯನ್ನು ನಾಲ್ಕು ದಿನಗಳ ಹಿಂದೆ ಮನೆಗೆ ಕರೆಸಿಕೊಂಡಿದ್ದರು.

ಅದೇ ವೇಳೆಗೆ ಆಟೋ ತೆಗೆದುಕೊಂಡು ಹೊರಗೆ ಹೋಗಿದ್ದ ಮಹಿಳೆಯ ಪತಿ ಮನೆಗೆ ಬಂದಾಗ ವ್ಯಕ್ತಿಯನ್ನು ಕಂಡು ಪತ್ನಿ ಜೊತೆ ಜಗಳವಾಡಿ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ಚಾಕುವಿನಿಂದ ಹಲ್ಲೆ ನಡೆಸಿ ಇರಿದಿದ್ದಾನೆ.

ಗಾಯಗೊಂಡ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಹಿಳೆಯ ಪತಿಯನ್ನು ವಶಕ್ಕೆ ಪಡೆದು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

RELATED ARTICLES

Latest News