Friday, May 3, 2024
Homeಇದೀಗ ಬಂದ ಸುದ್ದಿವೀಲಿಂಗ್ ಮಾಡಿದ ಅಪ್ರಾಪ್ತ ಮಗ, ಪೊಷಕರ ವಿರುದ್ಧ ಎಫ್ಐಆರ್

ವೀಲಿಂಗ್ ಮಾಡಿದ ಅಪ್ರಾಪ್ತ ಮಗ, ಪೊಷಕರ ವಿರುದ್ಧ ಎಫ್ಐಆರ್

ಬೆಂಗೂಳೂರು, ಏ.4-ಅಪಾಯಕಾರ ರೀತಿಯಲ್ಲಿ ವೀಲಿಂಗ್ ಮಾಡುತ್ತಾ ಇತರೆ ವಾಹನ ಸವಾರರಿಗೆ ಆತಂಕವನ್ನು ಉಂಟುಮಾಡುತ್ತಿದ್ದ ವಿರುದ್ಧ ಕೆ.ಆರ್.ಪುರ ಸಂಚಾರಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿ ದ್ದಾರೆ.

ವೀಲಿಂಗ್ ಮಾಡುವವರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ಕೈಗೊಂಡು ಹಳೇ ಮದ್ರಾಸ್ ರಸ್ತೆಯಲ್ಲಿ ಠಾಣಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ದ್ವಿಚಕ್ರ ವಾಹನದಲ್ಲಿ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಸವಾರನನ್ನು ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ.

ಸವಾರ ಅಪ್ರಾಪ್ತ ಬಾಲಕನಾಗಿರುವ ಹಿನ್ನೆಲೆಯಲ್ಲಿ ಆತನ ಪೊಷಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೂರ್ವ ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತರಾದ ಕುಲ್ದೀಪ್ ಕುಮಾರ್ ಆರ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News