ಬೆಂಗಳೂರು, ಜು. 13- ಗಂಡ ಅನ್ನೋದು ಅವಳಿಗೆ ಲೆಕ್ಕಕ್ಕೆ ಇರಲಿಲ್ಲ. ಪಾರ್ಟಿ, ಪಬ್ ಅಂತಾ ಸುತ್ತುತ್ತಾ ಇದ್ದಳು, ತನ್ನ ಮೋಜಿನ ಜೀವನಕ್ಕಾಗಿ ಮನೆ ಭೋಗ್ಯದ ಹಣದೊಂದಿಗೆ ಪರಾರಿಯಾಗಲು ಪ್ಲಾನ್ ಮಾಡಿದ್ದಳು ಅವಳ ಈ ವರ್ತನೆಯಿಂದ ಬೇಸತ್ತು ನಾನು ಆಕೆಯ ಮೇಲೆ ಹಲ್ಲೆ ಮಾಡಿದ್ದೆ ಎಂದು ಕಿರು ತೆರೆ ನಟಿ ಶ್ರುತಿ ಅವರ ಪತಿ ಅಮರೇಶ್ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಗರದ ಮುನೇಶ್ವರ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದ ಕಿರು ತೆರೆ ನಟಿ ಶ್ರುತಿ ಅವರ ಮೇಲೆ ಪತಿ ಅಮರೇಶ್ ಚಾಕುವಿನಿಂದ ಹಲ್ಲೆ ನಡೆಸಿದ್ದ, ಆತನ ಹಲ್ಲೆಯಿಂದ ಆಕೆಯ ತೊಡೆ, ಮತ್ತಿತರ ಭಾಗಗಳಿಗೆ ತೀವ್ರವಾಗಿ ಗಾಯಗಳಾಗಿದ್ದರೂ ಆಕೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಪತಿ ಅಮರೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಶ್ರುತಿಯಿಂದ ತನಗೆ ಆಗಿದ್ದ ಅನ್ಯಾಯಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಈಸಂಜೆಗೆ ಖಚಿತಪಡಿಸಿವೆ.
ಆಕೆ ಕಿರು ತೆರೆ ನಟಿಯಾಗಿದ್ದರೂ ಮನುಷ್ಯತ್ವ ಅನ್ನೋದೆ ಇರಲಿಲ್ಲ. ಆಕೆಗೆ ತಮ ಇಬ್ಬರು ಹೆಣ್ಣು ಮಕ್ಕಳ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಮಕ್ಕಳನ್ನು ಮನೆಯಲ್ಲೇ ಬಿಟ್ಟು ಪಬ್, ಪಾರ್ಟಿ ಅಂತಾ ಸುತ್ತುತ್ತಾ ಮಧ್ಯರಾತ್ರಿ ಮನೆಗೆ ಬರುತ್ತಿದ್ದಳು. ಒಮೊಮೆ ಮನೆಯಿಂದ ಹೊರ ಹೋದರೆ 15 ದಿನಗಳಾದರೂ ವಾಪಸ್ ಬರುತ್ತಿರಲಿಲ್ಲ ಎಂದು ಆತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಕುಂಭಮೇಳಕ್ಕೆ ಹೋಗಿ ಬರುತ್ತಿನಿ ಎಂದು ಹೋದವಳು ಬಂದಿದ್ದು 15 ದಿನಗಳ ನಂತರ ಆ ಸಂದರ್ಭದಲ್ಲಿ ನಮಿಬ್ಬರ ನಡುವೆ ಜಗಳವಾಗಿತ್ತು.
ಕಾಲೇಜ್‌ಗೆ ಹೋಗುವ ಮಕ್ಕಳು ಇದ್ದ ಕಾರಣ ನಾನು 25 ಲಕ್ಷ ರೂ.ಗಳನ್ನು ನೀಡಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಒಂದನ್ನು ಭೋಗ್ಯಕ್ಕೆ ಹಾಕಿಸಿಕೊಂಡಿದ್ದೆ. ಮನೆ ಭೋಗ್ಯ ಕ್ಯಾನ್ಸಲ್ ಮಾಡಿ ಆ ಹಣದೊಂದಿಗೆ ಪರಾರಿಯಾಗಲು ಪ್ಲಾನ್ ಮಾಡಿದ್ದಳು ಅದಕ್ಕೆ ನಾನು ಒಪ್ಪದಿದ್ದಾಗ ನನ್ನ ಮೇಲೆ ಪೊಲೀಸರಿಗೆ ದೂರು ನೀಡಿದ್ದಳು.
ಇಂದಲ್ಲ ನಾಳೆ ಬುದ್ಧಿ ಕಲಿಯುತ್ತಾಳೆ ಎಂದು ನಾನು ಸುಮನಿದ್ದರೂ ಆಕೆ ತನ್ನ ದುರ್ಬುದ್ದಿ ಮುಂದುವರೆಸಿದ್ದಳು. ಇದೇ ವಿಚಾರದಲ್ಲಿ ಮತ್ತೆ ಜಗಳವಾದಾಗ ನಾನು ನನ್ನ ತಾಳೆ ಕಳೆದುಕೊಂಡು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದೇನೆ ಎಂದು ಅಮರೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
- ಪೊಲೀಸ್ ಕಸ್ಟಡಿ ಸಾವು ವಿರೋಧಿಸಿ ಬೀದಿಗಿಳಿದ ವಿಜಯ್
- ಸಾಲಬಾಧೆ ತಾಳಲಾರದೆ ಒಂದೇ ಗ್ರಾಮದ ಇಬ್ಬರು ರೈತರ ಆತ್ಮಹತ್ಯೆ
- ಬೆಳಗಾವಿ : ನಡು ರಸ್ತೆಯಲ್ಲೇ ಯುವ ಗಾಯಕನ ಬರ್ಬರ ಹತ್ಯೆ
- ಕಿರು ತೆರೆ ನಟಿ ಶ್ರುತಿ ಮೇಲಿನ ಹಲ್ಲೆಗೆ ನೈಜ ಕಾರಣ ಬಿಚ್ಚಿಟ್ಟ ಪತಿ
- ಬಿಹಾರ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ..!