ಹೈದರಾಬಾದ್,ಆ.21- ಭಾರೀ ಮಳೆಯಾಗುತ್ತಿದೆ ಮತ್ತಿನ ನಗರಿ ಹೈದರಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಶಾಲೆಗಳಿಗೆ ರಜೆ ಘೋಷಿಸಿದೆ. ಮಳೆ ನೀರು ಹಲವು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದು ವಾಹನ ಸಂಚಾರಕ್ಕೂ ಕೂಡ ಅಡಚಣೆಯಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಡಿಇಒ ಹಾಗೂ ಎಂಇಒಗೆ ಆದೇಶ ಹೊರಡಿಸಿದ್ದಾರೆ.
ರಂಗಾ ರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಭಾರೀ ಮಳೆಯಿಂದಾಗಿ ಇಂದು ಕೂಡ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮಳೆ ಅನಾಹುತ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಮುನ್ನೆಚ್ಚಿಕೆ ಕ್ರಮಕ್ಕೆ ಸೂಚಿಸಿದ್ದಾರೆ.
ಹೈದರಾಬಾದ್‌ನ ಪ್ರಮುಖ ಪ್ರದೇಶಗಳಾದ ಜುಬಿಲಿ ಹಿಲ್‌್ಸ, ಬಂಜಾರಾ ಹಿಲ್‌್ಸ, ಖೈರತಾಬಾದ್, ಪಂಜಗುಟ್ಟಾ, ಅಮೀರ್‌ಪೇಟ್, ಸೋಮಾಜಿಗುಡ, ಫಿಲ್‌್ಮನಗರ, ಶೇಕ್‌ಪೇಟ್, ಕುಕಟ್‌ಪಲ್ಲಿ, ಮುಸಾಪೇಟ್, ನಾಂಪಲ್ಲಿ, ಟ್ಯಾಂಕ್‌ಬಂಡ್ ಮುಶೀರಾಬಾದ್, ಚಿಕ್ಕದಪಲ್ಲಿ, ರಾಮನಗರ, ಅಶೋಕ್ ನಗರ, ಮಲಕ್‌ಪೇಟ್, ದಿಲ್‌ಸುಖ್‌ನಗರ, ಚೈತಾನಾಬಾದ್ ಸೇರಿದಂತೆ ಹಲವೆಡೆ ರಸ್ತೆಗಳು ಕರೆಯಂತಾಗಿದೆ.
ಯಾವುದೇ ಅನಾಹುತ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.ಹಲವೆಡೆ ಉರುಳಿರುವ ಮರ ,ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗುತ್ತಿದೆ.