Friday, August 29, 2025
Homeಅಂತಾರಾಷ್ಟ್ರೀಯ | Internationalಸೌದಿ ಅರೇಬಿಯಾದಲ್ಲಿ 3 ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಭಾರತ ಮೂಲದ ಮಹಿಳೆ

ಸೌದಿ ಅರೇಬಿಯಾದಲ್ಲಿ 3 ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಭಾರತ ಮೂಲದ ಮಹಿಳೆ

Hyderabad Woman Drowns 3 Sons In Bathtub, Attempts Suicide In Saudi Arabia

ರಿಯಾದ್‌,ಆ.29-ದೂರದ ಸೌದಿ ಅರೇಬಿಯಾದಲ್ಲಿ ಹೈದರಾಬಾದ್‌ ಮೂಲದ ಮಹಿಳೆ ತನ್ನ ಮೂರು ಮಕ್ಕಳನ್ನು ಬಾತ್‌ ಟಬ್‌ನಲ್ಲಿ ಮುಳುಗಿಸಿ ಕೊಂದು ನಂತರ ಆಕೆಯೂ ಆತಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಸೌದಿ ಅರೇಬಿಯಾದ ಅಲ್‌ ಖೋಬರ್‌ನಲ್ಲಿ ಈ ಕೃತ್ಯ ನಡೆದಿದೆ. ಹೈದರಾಬಾದ್‌ ಮೂಲದವರಾದ ಸಯ್ಯದಾ ಹುಮೇರಾ ಅಮ್ರೀನ್‌ ಅವರು ತಮ ಅವಳಿ ಮಕ್ಕಳಾದ ಸಾದಿಕ್‌ ಅಹ್ಮದ್‌ (7), ಅಡೆಲ್‌ ಅಹ್ಮದ್‌ (7) ಮತ್ತು ಯೂಸುಫ್‌ ಅಹ್ಮದ್‌ (3) ಎಂಬುವರನ್ನು ಬಾತ್‌ ಟಬ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ.

ಈಕೆಯ ಪತಿ ಮೊಹಮ್ಮದ್‌ ಶಹನವಾಜ್‌ ಅವರು ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಹೀಗಾಗಿ ಅಮ್ರೀನ್‌ ಅವರು ಪತಿಯನ್ನು ಭೇಟಿಯಾಗಲು ಕೆಲ ದಿನಗಳ ಹಿಂದೆ ಸೌದಿಗೆ ತೆರಳಿದ್ದರು. ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪತಿ ಕೆಲಸದಿಂದ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದೆ.

ಪ್ರಾಥಮಿಕ ವರದಿಯ ಪ್ರಕಾರ, ಅಮ್ರೀನ್‌ ಅವರು ಕೆಲ ಸಮಯದಿಂದ ಮಾನಸಿಕ ಖಿನ್ನತೆ ಒಳಗಾಗಿದ್ದರು. ಅಲ್ಲದೇ ಕೌಟುಂಬಿಕ ಕಲಹದಿಂದ ಬೆಸತ್ತಿದ್ದರು ಎನ್ನಲಾಗಿದೆ. ಘಟನೆಯ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ. ಸೌದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Latest News