ಚಿತ್ರದುರ್ಗ, ಜೂ.24- ನಾನು ಶಾಸಕನಾಗಿ ಕೆಲಸ ಮಾಡೋಕೆ ಆಗುತ್ತಿಲ್ಲ ಎಂದು ಮೊಳಕಾಲ್ಕೂರು ಶಾಸಕ ಎನ್‌ವೈ ಗೋಪಾಲಕೃಷ್ಣ ಅಸಮಧಾನ ಹೊರಹಾಕಿದ್ದಾರೆ. ಅನುದಾನ ತಾರತಮ್ಯವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು ಒಂದು ಚರಂಡಿ, ರಸ್ತೆ ಹಾಗೂ ಶಾಲೆ ನಿರ್ಮಿಸಲಾಗುತ್ತಿಲ್ಲ ಎಂದಿದ್ದಾರೆ.
ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಖಾಸಗಿ ಕಂಪನಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಆಗುತ್ತಿಲ್ಲ ಸರ್ಕಾರ ಸರಿಯಾಗಿ ಅನುದಾನ ನೀಡಲ್ಲ, ಕೆಲಸಗಲು ನಡೆಯುತ್ತಿಲ್ಲ ಎಂದು ಪರೋಕ್ಷವಾಗಿ ಅಸಹಾಯಕತೆ ಹೊರಹಾಕಿದರು.
ಬಂದು ಖಾಸಗಿ ಕಂಪನಿಯವರೇನು ಮಾಡುತ್ತಾರೆಂದು ವ್ಯಂಗ್ಯವಾಡಿದರು ಈ ಗಡಿಭಾಗದಲ್ಲಿ ಆರಂಭಿಸುತ್ತಿರುವ ಖಾಸಗಿ ಕಂಪನಿಯವರಿಗೇನು ಮೂರ್ಖತನವೊ ತಿಳಿಯದು. ಇಂತಹ ಸಮಯದಲ್ಲಿ ಈ ಭಾಗದಲ್ಲಿ ಇನ್ನು ಈ ಖಾಸಗಿ ಕಂಪನಿಯವರು ನನ್ನನ್ನು ಸಹ ಕುಟುಂಬ ಸದಸ್ಯ ಎಂದುಕೊಳ್ಳಿ.
ಹೀಗೆ ಹೇಳಿದ ಮಾತ್ರಕ್ಕೆ ಶೇರ್ ಹೋಲ್ಡರ್ ಎಂದು ಕೊಳ್ಳಬೇಡಿ. ನಾನು ಉಚಿತ ಸೇವೆ ಮಾಡುವವನು ಎಂದು ಶಾಸಕ ಮಾತನಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
- ಸಿದ್ದರಾಮಯ್ಯನವರೇ, ಗಾಂಧಿ ಕುಟುಂಬ ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಆರ್ಎಸ್ಎಸ್ ಟೀಕಿಸಬೇಡಿ : ಆರ್.ಅಶೋಕ್
- ಪೊಲೀಸರಿಂದ ತಪ್ಪಿಸಿಕೊಂಡ ಬಾಂಗ್ಲಾದೇಶದ ಗರ್ಭಿಣಿ ಕೈದಿ
- ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವು ವಿಧಿಸಲು ಬರಲ್ಲ ; ಕೇಂದ್ರ ಸರ್ಕಾರ ಎಚ್ಚರಿಕೆ
- ಆರ್ಎಸ್ಎಸ್-ಬಿಜೆಪಿ ನಡುವೆ ಯಾವುದೇ ಒಡಕಿಲ್ಲ ; ರಾಮ್ ಮಾಧವ್
- ಬೆಂಗಳೂರಿನ ಟನಲ್ ರಸ್ತೆ ನಿರ್ಮಾಣಕ್ಕೆ ಮುಗಿಬಿದ್ದ ಪ್ರತಿಷ್ಠಿತ ಸಂಸ್ಥೆಗಳು