Saturday, December 21, 2024
Homeರಾಜ್ಯಲೆಕ್ಕ ಚುಕ್ತಾ ಮಾಡೋದು ನಮಗೂ ಗೊತ್ತು, ಧಮ್ಕಿಗಳಿಗೆ ನಾನು ಜಗ್ಗಲ್ಲ : ಡಿಕೆಶಿ

ಲೆಕ್ಕ ಚುಕ್ತಾ ಮಾಡೋದು ನಮಗೂ ಗೊತ್ತು, ಧಮ್ಕಿಗಳಿಗೆ ನಾನು ಜಗ್ಗಲ್ಲ : ಡಿಕೆಶಿ

I am not afraid of threats: DK Shivakumar

ಬೆಂಗಳೂರು,ಡಿ.21- ಎಲ್ಲರಿಗೂ ಅವರದೇ ಸಾಮರ್ಥ್ಯದಲ್ಲಿ ಲೆಕ್ಕ ಚುಕ್ತಾ ಮಾಡುವ ಅವಕಾಶಗಳಿರುತ್ತವೆ. ಬೆದರಿಕೆ, ಧಮ್ಕಿಗಳನ್ನು ನಾನು ನೋಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಲೆಕ್ಕ ಚುಕ್ತ್ತಾ ಮಾಡುತ್ತೇನೆ ಎಂದು ಸಿ.ಟಿ.ರವಿ ಹೇಳಿರುವುದಕ್ಕೆ ತಿರುಗೇಟು ನೀಡಿದ ಅವರು, ಇಂತಹ ಮಾತುಗಳನ್ನು ತುಂಬಾ ಕೇಳಿದ್ದೇನೆ. ಎಲ್ಲರಿಗೂ ಅವರವರದೇ ಆದ ಸಾಮರ್ಥ್ಯದಲ್ಲಿ ಲೆಕ್ಕ ಚುಕ್ತ್ತಾ ಮಾಡಿಕೊಳ್ಳಲು ಸಾಧ್ಯವಿದೆ. ಯಾರು ಬೇಡ ಎಂದಿದ್ದಾರೆ ಎಂದು ಹೇಳಿದರು.

ಸಿ.ಟಿ.ರವಿ ಪ್ರಕರಣದಲ್ಲಿ ಪೊಲೀಸರು ರಾತ್ರಿಯಿಡೀ ಸುತ್ತಾಡಿಸಿರುವುದೂ ಸೇರಿದಂತೆ ಏನೇ ಕ್ರಮ ಕೈಗೊಂಡಿದ್ದರೂ ಅದಕ್ಕೆ ಪೊಲೀಸರೇ ಹೊಣೆ. ನನಗೂ, ಅದಕ್ಕೂ ಸಂಬಂಧವಿಲ್ಲ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಪೊಲೀಸರನ್ನು ಯಾವ ರೀತಿ ನಡೆಸಿಕೊಂಡರು ಎಂದು ಎಲ್ಲರಿಗೂ ಗೊತ್ತಿದೆ ಎಂದರು.

ಬಿಜೆಪಿಯವರು ಪ್ರತಿಯೊಂದಕ್ಕೂ ನನ್ನನ್ನು ಹೊಣೆ ಮಾಡುತ್ತಾರೆ. ಅವರ ಮನೆಯಲ್ಲಿ, ಪಕ್ಷದಲ್ಲಿ, ಅವರ ಹೊಟ್ಟೆಯಲ್ಲಿ, ಹೊರಗಡೆ ಎಲ್ಲಿ, ಏನೇ ಆದರೂ ನಾನೇ ಕಾರಣ. ನನ್ನನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ. ವಿಧಾನಪರಿಷತ್ನಲ್ಲಿ ಸಿ.ಟಿ.ರವಿ ಆಡಿರುವ ಮಾತಿಗೆ ದೇವರು ನ್ಯಾಯ ಕೊಡುತ್ತಾರೆ ಎಂದರು.

ರಾಜ್ಯಸಭೆಯಲ್ಲಿ ಅಂಬೇಡ್ಕರ್ರವರಿಗೆ ಅಪಮಾನ ಮಾಡಿ ಕೇಂದ್ರ ಗೃಹಸಚಿವ ಅಮಿತ್ ಶಾ ಆಡಿರುವ ಮಾತುಗಳ ಚರ್ಚೆಯನ್ನು ವಿಷಯಾಂತರಿಸಲು ಬಿಜೆಪಿಯವರು ನಾನಾ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದರು.

ಕಾನೂನಿನಲ್ಲಿ ಇರುವ ಅವಕಾಶಗಳಿಗನುಸಾರ ಎಲ್ಲವೂ ನಡೆಯುತ್ತದೆ. ಜಾಮೀನು ಪಡೆದಿರುವುದೂ ಕೂಡ ಕಾನೂನಿನ ಅನುಸಾರವೇ ಆಗಿದೆ. ಇಲ್ಲಿ ಮುಖ್ಯವಾಗಿ ಚರ್ಚೆಯಾಗಬೇಕಿರುವುದು ಸಿ.ಟಿ.ರವಿ ಹೇಳಿರುವ ಮಾತುಗಳು. ಅದರ ಹಿಂದೆ ಬಿಜೆಪಿಯ ಸಂಸ್ಕೃತಿ, ಆಚಾರ ವಿಚಾರಗಳು ಏನು ಎಂಬುದು ವಿಮರ್ಶೆಯಾಗಬೇಕು. ಸಿ.ಟಿ.ರವಿ ಹರಕಲು ಬಾಯಿ ಮನುಷ್ಯ.

ಜಯಮಾಲ, ಸಿದ್ದರಾಮಯ್ಯ ಸೇರಿದಂತೆ ಹಲವಾರು ಮಂದಿ ವಿಚಾರದಲ್ಲಿ ಈ ರೀತಿಯ ಮಾತುಗಳನ್ನಾಡಿದ್ದಾರೆ. ನಿತ್ಯ ಸುಮಂಗಲಿ ಎಂಬ ಭಾಷೆ ವಿಧಾನಸಭೆಯಲ್ಲಿ ಬಳಸಿ ಟೀಕೆಗೆ ಗುರಿಯಾಗಿದ್ದಾರೆ. ಆತ ರಾಷ್ಟ್ರಮಟ್ಟದ ನಾಯಕ. ಅಂಥವರ ಬಾಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಈ ರೀತಿಯ ಭಾಷೆ ಬರುವುದು ಸರಿಯೋ, ತಪ್ಪೋ ಎಂದು ಪ್ರಶ್ನಿಸಿದರು.

ಬಿಜೆಪಿಯ ಯಾವೊಬ್ಬ ನಾಯಕರೂ ಇಂತಹ ಹೇಳಿಕೆಯನ್ನು ಖಂಡಿಸಿಲ್ಲ. ನಮ ಪಕ್ಷದಲ್ಲಿ ಈ ರೀತಿ ಮಾಡಿದರೆ ಖಂಡಿತ ಖಂಡಿಸುತ್ತಿದ್ದೆ. ವಿರೋಧಪಕ್ಷದ ನಾಯಕ ಅಶೋಕ್ ಅವರು ಮುನಿರತ್ನ ವಿಚಾರದಲ್ಲಿ ಎಫ್ಎಸ್ಎಲ್ ವರದಿ ಬರುತ್ತಿದ್ದಂತೆ ಉಚ್ಚಾಟನೆ ಮಾಡುವುದಾಗಿ ಹೇಳಿದ್ದರು. ಆದರೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಅವರ ಪಕ್ಷದಲ್ಲಿ ಇಂತಹ ಮುತ್ತುರತ್ನಗಳನ್ನು ಇಟ್ಟುಕೊಂಡಿರಲಿ. ಅದಕ್ಕಾಗಿ ಖುಷಿ ಪಡಲಿ. ನಮ ತಕರಾರಿಲ್ಲ ಎಂದು ವ್ಯಂಗ್ಯವಾಡಿದರು.

RELATED ARTICLES

Latest News