Sunday, July 7, 2024
Homeರಾಜ್ಯಡಿಸಿಎಂ ಆಗುವ ಆಸೆ ನನಗಿಲ್ಲ : ಕೆ.ಜೆ.ಜಾರ್ಜ್

ಡಿಸಿಎಂ ಆಗುವ ಆಸೆ ನನಗಿಲ್ಲ : ಕೆ.ಜೆ.ಜಾರ್ಜ್

ಬೆಂಗಳೂರು,ಜು.4- ಕೊಟ್ಟ ಕೆಲಸವನ್ನೇ ಸರಿಯಾಗಿ ಮಾಡಿದರೆ ಸಾಕು. ಉಪಮುಖ್ಯಮಂತ್ರಿಯಾಗುವ ಯಾವ ಆಸೆಯೂ ತಮಗಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1969 ರಲ್ಲಿ ರಾಜಕೀಯಕ್ಕೆ ಬಂದವನು.

ನೀವು ರಾಜಕೀಯಕ್ಕೆ ಬಂದು ದೇಶ ಉದ್ಧಾರ ಮಾಡಬೇಕೆಂದು ನನಗೆ ಯಾರೂ ಹೇಳಲಿಲ್ಲ. ಸಮಾಜಸೇವೆ ಮಾಡುವ ಆಸಕ್ತಿಯಿಂದ ರಾಜಕಾರಣಕ್ಕೆ ಬಂದೆ. ಶಾಸಕನಾಗುತ್ತೇನೆ ಎಂದುಕೊಂಡಿರಲಿಲ್ಲ. ಪಕ್ಷ ತನ್ನನ್ನು ಗುರುತಿಸಿ, ಸಚಿವನನ್ನಾಗಿ ಮಾಡಿದೆ ಎಂದರು.

ಹಿರಿತನದ ಆಧಾರದ ಮೇಲೆ ಅವಕಾಶ ನೀಡುವುದು, ಬಿಡುವುದು ಹೈಕಮಾಂಡ್ ಅಥವಾ ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ನನಗೆ ಆ ಹುದ್ದೆಗಳ ಮೇಲೆ ಆಸಕ್ತಿಯಿಲ್ಲ. ಈಗಾಗಲೇ ಉತ್ತಮವಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇದ್ದಾರೆ. ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವ ಅಗತ್ಯವಿಲ್ಲ. ಆದರೂ ಅದರ ವಿಚಾರವಾಗಿ ಕ್ರಮ ಕೈಗೊಳ್ಳಬೇಕಾಗಿರುವುದು ಮುಖ್ಯಮಂತ್ರಿಯವರ ಅಧಿಕಾರ ಎಂದು ಹೇಳಿದರು.

ಮುಡಾ ನಿವೇಶನ ಹಂಚಿಕೆ ಪ್ರಕರಣ ನಡೆದಿರುವುದು ಬಿಜೆಪಿಯವರ ಕಾಲದಲ್ಲಿ. ಡಿ ನೋಟಿಫಿಕೇಶನ್ ಆಗಿದ್ದ ಜಾಗವನ್ನು ಮೈಸೂರು ನಗರಾಭಿವೃದ್ಧಿ ಯಾವ ರೀತಿ ನಿವೇಶನ ಮಾಡಲು ಸಾಧ್ಯ?, ವಿರೋಧಪಕ್ಷಗಳಿಗೆ ಬೇರೆ ವಿಚಾರಗಳಿಲ್ಲ. ಹಾಗಾಗಿ ಇಂತಹ ಆರೋಪಗಳನ್ನು ಮಾಡುತ್ತಿದೆ ಎಂದು ದೂರಿದರು.

ಈಗಾಗಲೇ ಪ್ರಕರಣದ ವಿಚಾರಣೆ ನಡೆಯುತ್ತಿದೆ. ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.ಬಿಜೆಪಿಯವರು ಪ್ರತಿಯೊಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ಕೇಳುತ್ತಿದ್ದಾರೆ. ಈ ಹಿಂದೆ ಐಎಎಸ್ ಅ„ಕಾರಿ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ ಪ್ರಕರಣಗಳನ್ನು ಸಿಬಿಐಗೆ ನೀಡಲಾಯಿತು.ಫಲಿತಾಂಶಗಳೇನು ಎಂದು ಪ್ರಶ್ನಿಸಿದರು.

ನಮ್ಮಲ್ಲಿ ಒಳ್ಳೆಯ ಅಧಿಕಾರಿಗಳಿದ್ದಾರೆ. ಸಿಬಿಐಗೆ ನೀಡುವ ಅಗತ್ಯವಿಲ್ಲ ಎಂದರು.ತಾವು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದು, ಮುಡಾದಿಂದ ನಿವೇಶನ ಹಂಚಿಕೆಯಲ್ಲಿ ಯಾವುದೇ ಲೋಪಗಳಾಗಿಲ್ಲ ಎಂದು ಸಮರ್ಥಿಸಿಕೊಂಡರು.

RELATED ARTICLES

Latest News