Wednesday, January 8, 2025
Homeರಾಜಕೀಯ | Politicsಜೆಡಿಎಸ್‌‍ ರಾಜ್ಯಾಧ್ಯಕ್ಷನಾಗಬೇಕೆನ್ನುವ ಬಯಕೆ ನನಗಿಲ್ಲ : ನಿಖಿಲ್‌ ಕುಮಾರಸ್ವಾಮಿ

ಜೆಡಿಎಸ್‌‍ ರಾಜ್ಯಾಧ್ಯಕ್ಷನಾಗಬೇಕೆನ್ನುವ ಬಯಕೆ ನನಗಿಲ್ಲ : ನಿಖಿಲ್‌ ಕುಮಾರಸ್ವಾಮಿ

I have no desire to become JDS state president: Nikhil Kumaraswamy

ರಾಯಚೂರು, ಜ.6-ಪಕ್ಷದ ರಾಜ್ಯಾಧ್ಯಕ್ಷನಾಗಬೇಕೆನ್ನುವ ಬಯಕೆ ನನಗಿಲ್ಲ ಎಂದು ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌‍ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಸೇರಿದಂತೆ ಇತರ ಯಾವುದೇ ಹ್ದುೆಗಾಗಿ ಹಪಾಹಪಿಸುತ್ತಿಲ್ಲ ಎಂದರು.

ಜೆಡಿಎಸ್‌‍ ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಪಕ್ಷದ ವೇದಿಕೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಹೆಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಜೆಡಿಎಸ್‌‍ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಮಾಡುವಂತಿದ್ದರೆ ಪಕ್ಷದಲ್ಲಿ ಹಿರಿಯರು, ಅನುಭವಿಗಳು ಇದ್ದಾರೆ. ಅವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಮೈತ್ರಿ : ಜೆಡಿಎಸ್‌‍ ಪಕ್ಷ ಎನ್‌ಡಿಎ ಮೈತ್ರಿಕೂಟದ ಅಂಗವಾಗಿರುವುದರಿಂದ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆಗಳಲ್ಲೂ ಹೊಂದಾಣಿಕೆಯೊಂದಿಗೆ ಸ್ಪರ್ಧಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿರುವ ಗೊಂದಲಗಳನ್ನು ರಾಜ್ಯ ನಾಯಕರು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್‌‍ ತಿರಸ್ಕಾರ ಮಾಡುವ ಕಾಲ ದೂರವಿಲ್ಲ ಎಂದರು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌‍ ಭ್ರಷ್ಟ ಆಡಳಿತ ನಡೆಸುತ್ತಿದ್ದು, ಮುಡಾ ಹಗರಣ, ಭೋವಿ ನಿಗಮ, ವಾಲೀಕಿ ಅಭಿವೃದ್ದಿ ನಿಗಮದ ಭ್ರಷ್ಟಾಚಾರ, ಹಾಲಿನ ದರ, ಬಸ್‌‍ ದರ ಏರಿಕೆ ಖಂಡಿಸಿ ಬಿಜೆಪಿಯೊಂದಿಗೆ ಜೊತೆಗೂಡಿ ರಾಜ್ಯದ ಜನತೆಯ ಪರ ಧ್ವನಿ ಎತ್ತುವ ಕೆಲಸ ಜೆಡಿಎಸ್‌‍ ಮಾಡುತ್ತಿದೆ. ಕಾಂಗ್ರೆಸನ್ನು ಆಡಳಿತದ ವಿರುದ್ದ ಜನತೆ ಬೇಸತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಯುವ ಘಟಕದ ರಾಜ್ಯಾಧ್ಯಕ್ಷನಾಗಿ ರಾಜ್ಯಾದಾದ್ಯಂತ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದೇನೆ. ಈಗಾಗಲೇ ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್‌‍ಗೆ ರಾಜಕೀಯ ಶಕ್ತಿ ತುಂಬಿದೆ. ಈ ಭಾಗದಲ್ಲಿ ಜೆಡಿಎಸ್‌‍ ಪಕ್ಷಕ್ಕೆ ಉತ್ತಮ ಒಲವಿದೆ. ಮುಂದಿನ ದಿನಗಳಲ್ಲಿ ಹಿರಿಯರ ಅನುಭವನಗಳನ್ನು ಪಡೆದು ಪಕ್ಷ ಸಂಘಟನೆಗೆ ದುಡಿಯುವೆ ಎಂದರು.

ಜೆಡಿಎಸ್‌‍ ಬಲಿಷ್ಠವಾಗಿದ್ದಾಗ ಮನೆಯವರು ನಿಂತುಕೊಂಡು ಚುನಾವಣೆ ಎದುರಿಸುತ್ತಾರೆ. ಸೋಲಿನ ಭೀತಿಯಿದ್ದರೆ ಕಾರ್ಯಕರ್ತರನ್ನು ಬಲಿ ಕೊಡುತ್ತಾರೆ ಎನ್ನುವ ವಿರೋಧಿಗಳ ಆರೋಪ ಸುಳ್ಳಾಗಿಸಲು ನಾನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾಯಿತು ಎಂದು ಹೇಳಿದರು.

RELATED ARTICLES

Latest News