Monday, September 1, 2025
Homeರಾಜ್ಯಚಿನ್ನಯ್ಯ ತಂದಿದ್ದ ಬುರುಡೆಯನ್ನು ಬೆಂಗಳೂರಿನಿಂದ ದೆಹಲಿಗೆ ಸಾಗಿಸಿದ್ದು ನಿಜ : ಜಯಂತ್‌

ಚಿನ್ನಯ್ಯ ತಂದಿದ್ದ ಬುರುಡೆಯನ್ನು ಬೆಂಗಳೂರಿನಿಂದ ದೆಹಲಿಗೆ ಸಾಗಿಸಿದ್ದು ನಿಜ : ಜಯಂತ್‌

I welcome the SIT investigation: T Jayant

ಬೆಂಗಳೂರು, ಆ.31– ಚಿನ್ನಯ್ಯ ತಂದಿದ್ದ ಬುರುಡೆಯನ್ನು ನಾನು ಬೆಂಗಳೂರಿನಿಂದ ದೆಹಲಿಗೆ, ದೆಹಲಿಯಿಂದ ಮಂಗಳೂರಿಗೆ ಸಾಗಿಸಿದ್ದು ನಿಜ. ಈ ವಿಚಾರವಾಗಿ ನಡೆಯುತ್ತಿರುವ ಎಸ್‌‍ಐಟಿ ತನಿಖೆಯನ್ನು ಸ್ವಾಗತಿಸುತ್ತೇನೆ ಎಂದು ಟಿ.ಜಯಂತ್‌ ಹೇಳಿದ್ದಾರೆ.

ಏಪ್ರಿಲ್‌ ತಿಂಗಳಿನಲ್ಲಿ ನನಗೆ ಭೀಮಾ ಎಂದು ಗುರುತಿಸಲಾಗಿದ್ದ ಚಿನ್ನಯ್ಯನ ಪರಿಚಯವಾಗಿತ್ತು. ಆತ ಮೊದಲ ಬಾರಿ ಬಂದಾಗ ನಮ ಮನೆಯಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೆ. ಎರಡನೇ ಬಾರಿ ಬದಾಗ ಆತ ಬ್ಯಾಗ್‌ನಲ್ಲಿ ಬುರುಡೆ ತಂದಿದ್ದ. ಇದಕ್ಕೆ ಸಂಬಂಧಟ್ಟಂತೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಕೆಲ ದಾಖಲೆಗಳನ್ನು ಸಲ್ಲಿಸಬೇಕಿತ್ತು. ಅದಕ್ಕಾಗಿ ವಕೀಲರನ್ನು ಸಂಪರ್ಕಿಸಲು ಚಿನ್ನಯ್ಯ ಪದೇಪದೇ ಬರುತ್ತಿದ್ದ. ನಮ ಮನೆಯಲ್ಲಿ ಎರಡು ಬಾರಿ ಉಳಿದುಕೊಂಡಿದ್ದ ಎಂದಿದ್ದಾರೆ.

ಸದರಿ ಬುರುಡೆಯನ್ನು ಸುಪ್ರೀಂಕೋರ್ಟ್‌ಗೆ ಹಾಜರುಪಡಿಸಲು ನಾನು ದೆಹಲಿಗೆ ತೆಗೆದುಕೊಂಡು ಹೋಗಿದ್ದೆ, ಅಲ್ಲಿಂದ ದಕ್ಷಿಣ ಕನ್ನಡದ ಎಸ್‌‍ಪಿ ಅವರ ಮುಂದೆ ಹಾಜರು ಪಡಿಸಲು ಮಂಗಳೂರಿಗೆ ತೆಗೆದುಕೊಂಡು ಹೋಗಿದ್ದೆ. ಈ ಕಾರಣಕ್ಕಾಗಿ ಎಸ್‌‍ಐಟಿ ಅಧಿಕಾರಿಗಳು ನನ್ನಿಂದ ಮಾಹಿತಿ ಕಲೆ ಹಾಕಿದ್ದಾರೆ. ವಿಚಾರಣೆಗೆ ಕರೆದರೆ ನಾನು ಸಂತೋಷದಿಂದಲೇ ಹೋಗುತ್ತೇನೆ. ಈವರೆಗಿನ ವಿಚಾರಣೆಯನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ. ನಾವು ದೇವಸ್ಥಾನದ ವಿರುದ್ಧವಾಗಲೀ ಯಾವುದೇ ವ್ಯಕ್ತಿಯ ತೇಜೋವಧೆಗೆ ಪ್ರಯತ್ನ ಮಾಡಿಲ್ಲ. ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

RELATED ARTICLES

Latest News