Wednesday, September 3, 2025
Homeರಾಜಕೀಯ | Politicsನಾನು ಯಾವ ಪಕ್ಷಕ್ಕೂ ಸೇರಲ್ಲ, ಕೊನೆಯವರೆಗೂ ಕಾಂಗ್ರೆಸ್‌‍ನಲ್ಲೇ ಇರುತ್ತೇನೆ : ಕೆ.ಎನ್‌.ರಾಜಣ್ಣ

ನಾನು ಯಾವ ಪಕ್ಷಕ್ಕೂ ಸೇರಲ್ಲ, ಕೊನೆಯವರೆಗೂ ಕಾಂಗ್ರೆಸ್‌‍ನಲ್ಲೇ ಇರುತ್ತೇನೆ : ಕೆ.ಎನ್‌.ರಾಜಣ್ಣ

I will not join any party, I will remain in Congress till the end: K.N. Rajanna

ಕೊರಟಗೆರೆ,ಸೆ.3- ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೂ ನಾನು ಸೇರ್ಪಡೆಯಾಗುವುದಿಲ್ಲ , ನನ್ನ ರಾಜಕೀಯ ಕಾಂಗ್ರೆಸ್‌‍ ಪಕ್ಷದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಮಾಜಿ ಸಹಕಾರ ಸಚಿವ ಕೆ ಎನ್‌ ರಾಜಣ್ಣ ತಿಳಿಸಿದ್ದಾರೆ.

ತಾಲೂಕಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಕಾಂಗ್ರೆಸ್‌‍ ಪಕ್ಷದಲ್ಲಿಯೇ ಬಿಜೆಪಿಗೆ ಸೇರ್ಪಡೆ ಪ್ರಶ್ನೆಯೇ ಇಲ್ಲ. ವಿರೋಧಿಗಳ ಕುತಂತ್ರ ಎಂದು ಪ್ರತಿಕ್ರಿಯಿಸಿದರು.

ಸಹಕಾರ ಸಚಿವ ಸ್ಥಾನ ಹೈಕಮಾಂಡ್‌ ಹಣತಿಯಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ನನ್ನ ರಾಜಕೀಯ ಭವಿಷ್ಯ ಜೊತೆಗೆ ನನ್ನ ಮಗನನ್ನ ವಿಧಾನ ಪರಿಷತ್‌ ಸದಸ್ಯರನ್ನಾಗಿ ಆಯ್ಕೆ ಮಾಡಿದಂತಹ ಕಾಂಗ್ರೆಸ್‌‍ ಪಕ್ಷಕ್ಕೆ ಋಣ ತೀರಿಸುವಂತ ಕೆಲಸ ನನ್ನ ರಕ್ತದ ಕಣಕಣದಲ್ಲೂ ಇದೆ.

ನನ್ನ ರಾಜಕೀಯ ವಿರೋಧಿಗಳ ಕುತಂತ್ರ ಹಾಗೂ ನನ್ನ ಹೆಸರಿಗೆ ಮಸಿ ಬಳಿಯುವ ರೀತಿಯಲ್ಲಿ ಬಿಜೆಪಿ ಸೇರಿದಂತೆ ಇತರ ಪಕ್ಷಗಳಿಗೆ ಸೇರಲಿದ್ದಾರೆ ಎಂಬ ವದಂತಿ ತಳ್ಳಿ ಹಾಕಿದ ರಾಜಣ್ಣ, ನನ್ನ ಕೊನೆ ಉಸಿರು ಇರುವವರೆಗೂ ಕಾಂಗ್ರೆಸ್‌‍ನಲ್ಲಿ ಇರುತ್ತೇನೆ ಎಂದು ಅಭಿಪ್ರಾಯಪಟ್ಟರು.

ದೆಹಲಿಗೆ ಎರಡು ವಿಶೇಷ ರೈಲಿನಲ್ಲಿ ಹೋಗುವಂತ ವಿಚಾರ ನಮ ಅಭಿಮಾನಿಗಳದ್ದು, ಹೈಕಮಾಂಡ್‌ ಗಮನಹರಿಸುವಂತೆ ಮಾಡುವ ಉದ್ದೇಶದಿಂದ ಅಭಿಮಾನಿಗಳು ದೆಹಲಿಗೆ ಪ್ರಯಾಣ ಬಳಸಬಹುದು ಅದಕ್ಕೂ ನನಗೂ ಸಂಬಂಧವಿಲ್ಲ. ನನಗೂ ಇದೆ ಈ ವಿಚಾರದ ಬಗ್ಗೆ ಒಂದಷ್ಟು ಅಭಿಮಾನಿಗಳು ಮಾತನಾಡಿದ ಸಂದರ್ಭದಲ್ಲಿ ಹೈಕಮಾಂಡ್‌ ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕಿಗೆ 7ನೇ ಬಾರಿ ಅಧ್ಯಕ್ಷ ರಾಗಿ ಆಯ್ಕೆ ಖಚಿತ: ತುಮಕೂರಿನ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ನಾಳೆ ಮತ್ತೊಮೆ 7ನೇ ಬಾರಿಗೆ ಕೆ.ಎನ್‌ ರಾಜಣ್ಣ ಅಧಿಕಾರ ವಹಿಸುವುದು ಬಹುತೇಕ ನಿಶ್ಚಯವಾಗಿದ್ದು, 14 ಜನ ಸದಸ್ಯ ಬಲದಲ್ಲಿ ಬಹುತೇಕ ಯಾವುದೇ ಅಧ್ಯಕ್ಷ ಗಾದೆಗೆ ಅರ್ಜಿ ಸಲ್ಲಿಸದೆ ಏಕಮಯ ಅಧ್ಯಕ್ಷರಾಗಿ ರಾಜಣ್ಣ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ.

ಇದರ ಬಗ್ಗೆ ಕೆ ಎನ್‌ ರಾಜಣ್ಣನವರು ಸಹಕಾರ ಕ್ಷೇತ್ರದಲ್ಲಿ ನಾವು ಸಲ್ಲಿಸಿರುವ ಸೇವೆಗೆ ಸಿಗುತ್ತಿರುವ ಬಳುವಳಿ ಎನ್ನುವ ಮೂಲಕ ಅಧ್ಯಕ್ಷ ನಾನೇ ಎಂದು ಪರೋಕ್ಷವಾಗಿ ನಗೆ ಚಟಾಕಿ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದರು.

RELATED ARTICLES

Latest News