ವಾಷಿಂಗ್ಟನ್,ಏ.25- ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ಸಂಭವಿಸಿದ ಭೀಕರ ನರಮೇಧದ ಬಗ್ಗೆ ಪಾಕಿಸ್ತಾನದ ಪಾತ್ರದ ಕುರಿತು ಪ್ರಶ್ನೆ ಕೇಳಿದ ಪಾಕ್ ಪತ್ರಕರ್ತೆಯೊಬ್ಬರನ್ನು ಪತ್ರಿಕಾಗೋಷ್ಠಿಯಿಂದ ಹೊರಹಾಕಿದ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಟಮಿ ಬ್ರೂಸ್ ಅವರು ಪಹಲ್ಗಾಮ್‌ನಲ್ಲಿ ನಡೆದ 26 ಮಂದಿಯ ನರಮೇಧದ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಪತ್ರಕರ್ತೆಯೊಬ್ಬರು ಪಹಲ್ಗಾಮ್‌ನಲ್ಲಿ ಕೇವಲ ಪಾಕಿಸ್ತಾನದ ಪಾತ್ರ ಮಾತ್ರ ಇದೆಯೋ ಇಲ್ಲವೇ ಭಾರತದ ಕೈವಾಡ ಇದೆಯೋ ಎಂಬುದರ ಕುರಿತು ಸ್ಪಷ್ಟಪಡಿಸಬೇಕೆಂದು ಪದೇ ಪದೇ ಪತ್ರಿಕಾಗೋಷ್ಠಿಯಲ್ಲಿ ಕಿರಿಕಿರಿ ಉಂಟು ಮಾಡಿದ್ದರು.
ನೀವು ಸಹನೆಯಿಂದ ಇರಿ. ನಿಮೆಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ಕೊಡಲು ಸಿದ್ದನಿದ್ದೇನೆ. ನೀವು ಪತ್ರಕರ್ತೆಯಂತೆ ವರ್ತಿಸಬೇಕೆ ವಿನಃ ಪಾಕಿಸ್ತಾನದ ವಕ್ತಾರರಂತೆ ಮಾತನಾಡಬೇಡಿ ಎಂದು ಟಮಿ ಬ್ರೂಸ್ ಮನವಿ ಮಾಡಿಕೊಂಡರು.
ಇಷ್ಟಕ್ಕೂ ಸುಮನಾಗದ ಪತ್ರಕರ್ತೆ ನೀವು ಕೇವಲ ಪಾಕಿಸ್ತಾನವನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸುತ್ತಿದ್ದೀರಿ. ಭಾರತದ ಪಾತ್ರದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಮರುಪ್ರಶ್ನೆ ಹಾಕಿದರು.
ಆಗ ಟಮಿ ಬ್ರೂಸ್ ನಾನು ಇಲ್ಲಿ ಯಾವುದೇ ದೇಶಕ್ಕೆ ಪ್ರಮಾಣ ಪತ್ರ ನೀಡಲು ಬಂದಿಲ್ಲ. 26 ಮಂದಿಯನ್ನು ಕಳೆದುಕೊಂಡು ಸಂತ್ರಸ್ತರಾಗಿರುವ ಭಾರತಕ್ಕೆ ಸಂತಾಪ ಸೂಚಿಸುವುದು ನಮ ಆದ್ಯ ಕರ್ತವ್ಯ. ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಅಗತ್ಯಬಿದ್ದರೆ ನಾವು ಭಾರತದ ಪರ ನಿಲ್ಲುತ್ತೇವೆ ಎಂದು ಸಮರ್ಥನೆ ಮಾಡಿಕೊಂಡರು.
ಆದರೂ ಸುಮನಾಗದ ಪತ್ರಕರ್ತೆ ಪ್ರತಿಯೊಂದು ಭಯೋತ್ಪಾದನೆ ದಾಳಿ ನಡೆದಾಗ ಕೇವಲ ಪಾಕಿಸ್ತಾನವನ್ನು ಮಾತ್ರ ದೂಷಣೆ ಮಾಡುತ್ತೀರಿ. ಜಮುಕಾಶೀರದ ಪರಿಸ್ಥಿತಿ ಹೇಗಿದೆ ಎಂಬುದು ನಿಮಗೆ ಗೊತ್ತೇ? ಅಲ್ಲಿ ಸೈನಿಕರು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಎಂದಾದರೂ ಮಾತನಾಡಿದ್ದೀರಾ? ಎಂದು ಪ್ರಶ್ನೆ ಮಾಡಿದರು.
ಇದರಿಂದ ಸಹನೆ ಕಳೆದುಕೊಂಡ ಟಮಿ ಬ್ರೂಸ್ ನಿಮ ಮನಃಸ್ಥಿತಿ ಏನೆಂಬುದು ನನಗೆ ಅರ್ಥವಾಗುತ್ತದೆ. ನೀವು ಪತ್ರಕರ್ತೆಯಾಗುವ ಬದಲು ಪಾಕ್‌ನ ವಕ್ತಾರೆ ಆಗುವುದು ಸೂಕ್ತವಾಗಿತ್ತು. ದಯಮಾಡಿ ಪತ್ರಿಕಾಗೋಷ್ಠಿಯಿಂದ ಎದ್ದು ಹೋಗಿ ಎಂದು ಆಚೆ ಕಳುಹಿಸಿದರು.