ದುಬೈ, ಮಾ.9-ದುಬೈನಲ್ಲಿ ಚಾಂಪಿಯನ್ ಟ್ರೋಫಿಯಾ ಫೈನಲ್ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದು ನ್ಯೂಜಿಲೆಂಡ್ ಬ್ಯಾಂಟಿಂಗ್ ಆಯ್ಕೆಮಾಡಿಕೊಂಡಿದೆ. ಚಾಂಪಿಯನ್ ಕಿರೀಟಕ್ಕಾಗಿ ಭಾರತ ತಂಡ ಭರ್ಜರಿ ಆಟ ಪ್ರದರ್ಶಿಸಿದೆ. ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ -ಭಾರತದ ನಡುವೆ ನಡೆದಿರುವ ಫೈನಲ್ ಪಂದ್ಯ ಭಾರೀ ಸಂಚಲನ ಸೃಷ್ಟಿಸಿದ್ದು, ವಿಶ್ವಾದ್ಯಂತ ಕೋಟ್ಯಂತರ ಜನ ವೀಕ್ಷಿಸಿದ್ದು, ಹೊಸ ದಾಖಲೆ ಸೃಷ್ಟಿಸಿದೆ.
ಐಸಿಸಿ ಪಂದ್ಯದ ವೇಳೆ ಸದಾ ಎಡವುತ್ತಿದ್ದ ಭಾರತ ಈ ಬಾರಿ ಎಚ್ಚರಿಕೆಯ ಆಟ ಪ್ರದರ್ಶಿಸಿದ್ದು, ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ್ದಾರೆ.ರೋಹಿತ್ ಶರ್ಮಾ ಚಾಂಪಿಯನ್‌್ಸ ಟ್ರೋಫಿ ನಂತರ ನಿವೃತ್ತಿಯಾಗುವ ಮುನ್ಸೂಚನೆ ನೀಡಿದ್ದು, ಇದಕ್ಕಾಗಿ ಗೆಲುವಿನ ಉಡುಗೊರೆ ನೀಡಲು ಇಡೀ ತಂಡ ಕೆಚ್ಚೆದೆಯ ಆಟ ಪ್ರದರ್ಶಿಸಿದೆ.
12 ವರ್ಷಗಳ ನಂತರ ಮತ್ತೆ ಚಾಂಪಿಯನ್ ಟ್ರೋಫಿಯನ್ನು ಎತ್ತಿ ಹಿಡಿಯಲು ಹಾತೊರೆಯುತ್ತಿರುವ ಭಾರತಕ್ಕೆ ನ್ಯೂಜಿಲೆಂಡ್ ಕೂಡ ಭರ್ಜರಿ ಪೈಪೋಟಿ ನೀಡಿದ್ದು, ಪ್ರತಿ ಕ್ಷಣದ ಆಟವನ್ನು ಕ್ರಿಕೆಟ್ ಪ್ರೇಮಿಗಳು ಆಸ್ವಾದಿಸುತ್ತಿದ್ದಾರೆ.
25 ವರ್ಷಗಳ ನಂತರ ಸೇಡು ತೀರಿಸಿಕೊಳ್ಳಲು ಈಗ ಫೈನಲ್‌ನಲ್ಲಿ ಒಳ್ಳೆಯ ಅವಕಾಶ ಸಿಕ್ಕಿದ್ದು, ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ ಭಾರತ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಂತರ ರೂ. ಬೆಟ್ಟಿಂಗ್ ದಂಧೆಯು ಕೂಡ ನಡೆದಿದೆ.
ವಿಶೇಷವಾಗಿ ಇಂದಿನ ಪಂದ್ಯಕ್ಕಾಗಿ ಭಾರತದಿಂದ ಸಾವಿರಾರು ಮಂದಿ ದುಬೈಗೆ ತೆರಳಿದ್ದು ಮತ್ತು ಅಲ್ಲಿ ನೆಲೆಸಿರುವ ಭಾರತೀಯರು ಕೂಡ ಮೈದಾನದಲ್ಲಿ ತುಂಬಿ ತುಳುಕಿದ್ದಾರೆ.ಭಾರತೀಯರನ್ನು ಬೆಂಬಲಿಸುವ ಪ್ರೇಕ್ಷಕರು ಹೆಚ್ಚಾಗಿ ಕಂಡುಬಂದಿದ್ದು, ಎಂದೂ ಕಾಣದಂತಹ ವಿಶೇಷ ಭದ್ರತೆ ಕೂಡ ಮಾಡಲಾಗಿದೆ.
ಐಸಿಸಿ ಅಧ್ಯಕ್ಷ ಜೈಶಾ ಸೇರಿದಂತೆ ಬಹುತೇಕ ಕ್ರಿಕೆಟ್ ಮಂಡಳಿ ರಾಷ್ಟ್ರಗಳ ಅಧ್ಯಕ್ಷರು ಆಗಮಿಸಿ ಕ್ರಿಕೆಟ್ ವೀಕ್ಷಿಸಿದ್ದಾರೆ. ದುಬೈನ ರಾಜಮನೆತನದ ಸದಸ್ಯರು ಕೂಡ ಈ ಮಹತ್ವದ ಪಂದ್ಯ ವೀಕ್ಷಿಸಿದ್ದು, ಭಾರತ ಸೇರಿದಂತೆ ಹಲವೆಡೆ ಅಭಿಮಾನಿಗಳು ರೋಹಿತ್ ಬಳಗಕ್ಕೆ ಚಾಂಪಿಯನ್‌್ಸ ಪಟ್ಟ ಲಭಿಸಲಿ ಎಂದು ವಿಶೇಷ ಪೂಜೆ, ಹೋಮ-ಹವನಗಳನ್ನು ನಡೆಸಿದ್ದಾರೆ.