Sunday, May 4, 2025
Homeಅಂತಾರಾಷ್ಟ್ರೀಯ | Internationalಭಾರತ ಪಾಕ್‌ ಮೇಲೆ ದಾಳಿ ನಡೆದರೆ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾ ವಶಪಡಿಸಿಕೊಳ್ಳಬೇಕು ; ಯೂನುಸ್‌‍ ಆಪ್ತನ...

ಭಾರತ ಪಾಕ್‌ ಮೇಲೆ ದಾಳಿ ನಡೆದರೆ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾ ವಶಪಡಿಸಿಕೊಳ್ಳಬೇಕು ; ಯೂನುಸ್‌‍ ಆಪ್ತನ ಸಲಹೆ

If India attacks Pakistan, Bangladesh along with China should occupy 7 Northeastern states: Yunus' aide

ನವದೆಹಲಿ,ಮೇ.3- ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಭಾರತದ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಲು ಢಾಕಾ ಚೀನಾದೊಂದಿಗೆ ಸಹಕರಿಸಬೇಕು ಎಂದು ಬಾಂಗ್ಲಾದೇಶದ ಮಾಜಿ ಸೇನಾಧಿಕಾರಿ ಮತ್ತು ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನುಸ್‌‍ ಅವರ ಆಪ್ತ ಸಹಾಯಕ ಸಲಹೆ ನೀಡಿದ್ದಾರೆ.

ಮೇಜರ್‌ ಜನರಲ್‌ (ನಿವೃತ್ತ) ಎಎಲ್‌‍ಎಂ ಫಜ್ಲುರ್‌ ರೆಹಮಾನ್‌ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನೀಡಿದ ಹೇಳಿಕೆಗಳಿಂದ ಯೂನುಸ್‌‍ ಅವರ ಮಧ್ಯಂತರ ಸರ್ಕಾರ ಅಂತರ ಕಾಯ್ದುಕೊಂಡಿದೆ.

ತಮ ಫೇಸ್ಬುಕ್‌ ಪೋಸ್ಟ್‌ನಲ್ಲಿ ರಹಮಾನ್‌‍, ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶವು ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಆಕ್ರಮಿಸಬೇಕು ಎಂದು ಬಂಗಾಳಿ ಭಾಷೆಯಲ್ಲಿ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಜಂಟಿ ಮಿಲಿಟರಿ ವ್ಯವಸ್ಥೆ ಕುರಿತು ಚೀನಾದೊಂದಿಗೆ ಚರ್ಚೆಗಳನ್ನು ಪ್ರಾರಂಭಿಸುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.ರೆಹಮಾನ್‌ ಅವರನ್ನು ಯೂನುಸ್‌‍ ನೇತೃತ್ವದ ಮಧ್ಯಂತರ ಸರ್ಕಾರವು ಡಿಸೆಂಬರ್‌ 2024 ರಲ್ಲಿ ನೇಮಕ ಮಾಡಿತು.

2009 ರ ಬಾಂಗ್ಲಾದೇಶ ರೈಫಲ್ಸ್ ದಂಗೆಯಲ್ಲಿ ಹತ್ಯೆಗಳ ತನಿಖೆಗಾಗಿ ನಿಯೋಜಿಸಲಾದ ರಾಷ್ಟ್ರೀಯ ಸ್ವತಂತ್ರ ಆಯೋಗದ ಅಧ್ಯಕ್ಷರು. ಮಾಜಿ ಸೇನಾಧಿಕಾರಿಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಧ್ಯಮ ಪ್ರಕಟಣೆಯಲ್ಲಿ, ಈ ಹೇಳಿಕೆಗಳು ಬಾಂಗ್ಲಾದೇಶ ಸರ್ಕಾರದ ನಿಲುವು ಅಥವಾ ನೀತಿಗಳನ್ನು ಪ್ರತಿಬಿಂಬಿಸುವುದಿಲ್ಲ, ಆದ್ದರಿಂದ, ಸರ್ಕಾರವು ಅಂತಹ ವಾಕ್ಚಾತುರ್ಯವನ್ನು ಯಾವುದೇ ರೂಪದಲ್ಲಿ ಅಥವಾ ರೀತಿಯಲ್ಲಿ ಅನುಮೋದಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ ಎಂದು ಹೇಳಿದೆ.

ರೆಹಮಾನ್‌ ವ್ಯಕ್ತಪಡಿಸಿದ ವೈಯಕ್ತಿಕ ಅಭಿಪ್ರಾಯಗಳೊಂದಿಗೆ ಬಾಂಗ್ಲಾ ಸರ್ಕಾರವನ್ನು ಸಂಯೋಜಿಸದಂತೆ ಸರ್ಕಾರ ಸಂಬಂಧಪಟ್ಟವರನ್ನು ಒತ್ತಾಯಿಸಿದೆ ಎಂದು ಢಾಕಾ ಟ್ರಿಬ್ಯೂನ್‌ ಪತ್ರಿಕೆ ವರದಿ ಮಾಡಿದೆ. ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ, ಪರಸ್ಪರ ಗೌರವ ಮತ್ತು ಎಲ್ಲಾ ರಾಷ್ಟ್ರಗಳ ಶಾಂತಿಯುತ ಸಹಬಾಳ್ವೆಯ ತತ್ವಗಳಿಗೆ ಬಾಂಗ್ಲಾದೇಶ ದೃಢವಾಗಿ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.

RELATED ARTICLES

Latest News