Monday, August 25, 2025
Homeರಾಜ್ಯಬಿಡಿಎ ಸೈಟ್‌ ಖಾಲಿ ಬಿಟ್ರೆ ತೆರಬೇಕಾಗುತ್ತೆ ದುಬಾರಿ ದಂಡ

ಬಿಡಿಎ ಸೈಟ್‌ ಖಾಲಿ ಬಿಟ್ರೆ ತೆರಬೇಕಾಗುತ್ತೆ ದುಬಾರಿ ದಂಡ

If the BDA site is left vacant, a heavy fine will be paid

ಬೆಂಗಳೂರು,ಆ.25– ನಿಮ ಬಳಿ ಬಿಡಿಎ ಸೈಟ್‌ ಇದ್ಯಾ… ಅಲ್ಲಿ ಮನೆ ಕಟ್ಟದೆ ಮೂರು ವರ್ಷಗಳಿಂದ ಖಾಲಿ ಜಾಗ ಬಿಟ್ಟಿದ್ದೀರಾ…ಹಾಗಾದರೆ… ನೀವು ದುಬಾರಿ ದಂಡ ಕಟ್ಟಲು ರೆಡಿಯಾಗಿರಿ..
ಯಾಕೆ ಅಂತೀರಾ.. ಖಾಲಿ ಇರುವ ಬಿಡಿಎ ನಿವೇಶನಗಳಿಗೆ ದುಬಾರಿ ಫೈನ್‌ ಹಾಕಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅರ್ಥಾತ್‌ ಬಿಡಿಎ ಸದ್ದಿಲ್ಲದೆ ತಯಾರಿ ಮಾಡಿಕೊಳ್ಳುತ್ತಿದೆ.

ಮೂರು ವರ್ಷದಿಂದ ನಿಮ ಸೈಟ್‌ ಖಾಲಿ ಇದ್ದರೆ ಶೇ. 25 ರಷ್ಟು ದಂಡ ಕಟ್ಟಲೇಬೇಕಾಗಿದೆ. ಇಷ್ಟು ವರ್ಷ ಶೇ.10 ರಷ್ಟು ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿತ್ತು. ಆದರೆ, ಇದಕ್ಕೆ ನಿವೇಶನ ಖರೀದಿದಾರರು ಕ್ಯಾರೇ ಎನ್ನದ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿಗಳು ಇನುಂದೆ
ಶೇ.10 ರ ಬದಲು ಶೇ.25 ರಷ್ಟು ದಂಡ ವಿಧಿಸಲು ತೀರ್ಮಾನಿಸಿದ್ದಾರೆ.

ಯಾರೇ ಆಗಲಿ ನಿವೇಶನ ಪಡೆದು ಮೂರು ವರ್ಷದೊಳಗೆ ಮನೆ ಕಟ್ಟಬೇಕು. ನಿವೇಶನ ಹಂಚಿಕೆಯಾಗಿ ಮೂರು ವರ್ಷಗಳಿಂದ ಖಾಲಿ ಬಿಟ್ಟಿದ್ದರೆ ದಂಡ ಕಟ್ಟಲೆಬೇಕಾಗುವುದು. ಪ್ರಸ್ತುತ ನಿವೇಶನದ ಮೌಲ್ಯದ ಶೇ.10 ರಷ್ಟು ಬದಲು ಶೇ.25 ರಷ್ಟು ದಂಡ ಈ ಹೊಸ ರೂಲ್‌್ಸ ಮೂಲಸೌಕರ್ಯ ನೀಡಿರುವ ಹಳೆಯ ಲೇಔಟ್‌ಗಳಿಗೆ ಅನ್ವಯವಾಗಲಿದೆ.

ಮೂಲಸೌಕರ್ಯ ನೀಡದ ಲೇಔಟ್‌ ಗಳಿಗೆ ಈ ಹೊಸ ಆದೇಶ ಅನ್ವಯವಾಗುವುದಿಲ್ಲ. ಬಡಾವಣೆ ನಿರ್ಮಾಣವಾಗಿ ಹಲವಾರು ವರ್ಷಗಳಾಗಿರುವ ಸರ್‌. ಎಂ. ವಿಶ್ವೇಶ್ವರಯ್ಯ ಲೇಔಟ್‌ಗೆ ಈ ದಂಡ ನಿಯಮ ಅನ್ವಯವಾಗಲಿದೆ. ಅರ್ಕಾವತಿ ಮತ್ತು ಕೆಂಪೇಗೌಡ ಲೇಔಟ್‌ಗೆ ಇದು ಅನ್ವಯವಾಗಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

Latest News