ಬೆಂಗಳೂರು,ನ.19 – ಆದಾಯ ತೆರಿಗೆ ಕಾರಣಗಳನ್ನು ಮುಂದಿಟ್ಟುಕೊಂಡು ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿದರೆ ರಾಜ್ಯ ಸರ್ಕಾರಕ್ಕೆ ಜನರು ಬಿಸಿ ಮುಟ್ಟಿಸುತ್ತಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಡಾ.ಸಿ. ಎನ್.ಅಶ್ವಥ ನಾರಾಯಣ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಕೊಡಲು ಆಗುತ್ತಿಲ್ಲ. ಇದಕ್ಕಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡಿ ಸರ್ಕಾರ ಜನರಿಗೆ ಕೊಡುತ್ತಿದೆ. ಉಳಿದ ಸೌಕರ್ಯಗಳಿಗೂ ಕೊಕ್ಕೆ ಹಾಕುತ್ತಿದೆ ಎಂದರು. ನಿಮ ಢೋಂಗಿ ಗ್ಯಾರಂಟಿಗಳಿಗಷ್ಟೇ ಬಿಪಿಎಲ್ ಕಾಡ್ರ್ ಬೇಕಿಲ್ಲ, ಉಳಿದ ಸೌಕರ್ಯಗಳಿಗೂ ಕಾರ್ಡ್ ಬೇಕು. ಜನರ ಹೊಟ್ಟೆ ಮೇಲೆ ಹೊಡೆಯಬೇಡಿ. ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಜನರು ನಿಮಗೆ ನಿಜವಾದ ಬಿಸಿ ಮುಟ್ಟಿಸುತ್ತಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ತೊಡಗಿದೆ. ವಕ್ಫ್ ಹೊಸ ಕಾನೂನು ಬರುತ್ತೆ ಅಂತ ರೈತರ ಆಸ್ತಿ, ಶಾಲೆ, ಮಠ ಮಂದಿರಗಳ ಆಸ್ತಿ ವಶಪಡಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಜನ ಈ ಸಂಬಂಧ ಜಾಗೃತಿಯಾಗಿದ್ದಾರೆ ಎಂದರು.
ಜಮೀರ್ ಅಹಮದ್ ಸಿಎಂ ಆದೇಶ ಬಂದಿದೆ ಎಂದು ಇಂಡೀಕರಣಕ್ಕೆ ವಕ್‌್ಫ ಹೆಸರು ನೋಂದಣಿಗೆ ಮುಂದಾಗಿದ್ದರು. ಈ ವಿಚಾರದಲ್ಲಿ ಬಿಜೆಪಿ ಸಾಕಷ್ಟು ಹೋರಾಟ ಮಾಡಿದೆ. ಸಾಕಷ್ಟು ಒತ್ತಡ ಸರ್ಕಾರದ ಮೇಲೆ ಹೇರಿದೆ, ಇದರ ಪರಿಣಾಮ ಸರ್ಕಾರ ವಕ್‌್ಫ ನೊಟೀಸ್ ಹಿಂಪಡೆಯಲು ಸೂಚಿಸಿದೆ ಎಂದು ಹೇಳಿದರು.
ನಮ ಒತ್ತಾಯ 1974ರ ವಕ್ಫ್ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು. ಇದಕ್ಕಾಗಿ ನಮ ಭೂಮಿ ನಮ ಹಕ್ಕು ಅಡಿ ಬಿಜೆಪಿ ಹೋರಾಟ ನಡೆಸಲು ಮುಂದಾಗಿದೆ. ನವೆಂಬರ್ 21-22 ರಂದು ಎಲ್ಲ ಜಿಲ್ಲೆ, ತಾಲ್ಲೂಕುಗಳ ಡಿಸಿ, ತಾಲ್ಲೂಕು ಕಚೇರಿ ಎದುರು ದಿನವಿಡೀ ಪ್ರತಿಭಟನೆ ಹಮಿಕೊಂಡಿದ್ದೇವೆ ಎಂ ತಿಳಿಸಿದರು.
ಬೆಂಗಳೂರಿನಲ್ಲಿ ಅಂದು ಫ್ರೀಡಂಪಾರ್ಕ್ನಲ್ಲೂ ವಕ್ಫ್ ವಿರುದ್ಧ ದಿನವಿಡೀ ಹೋರಾಟ ನಡೆಯಲಿದೆ. ವಕ್ಫ್ ವಿರುದ್ಧ ಒಟ್ಟಾರೆ ಮೂರು ತಂಡಗಳಿಂದ ಪ್ರತಿಭಟನೆ ನಡೆಸಲಾಗುತ್ತದೆ. ಈ ಮೂರು ತಂಡಗಳು ಡಿಸೆಂಬರ್ ಮೊದಲ ವಾರದಿಂದ ರಾಜ್ಯ ಪ್ರವಾಸ ನಡೆಸಲಿವೆ. ವಕ್ಫ್ ತೊಂದರೆಗೊಳಗಾದವರ ಅಹವಾಲು ಆಲಿಸಲಾಗುತ್ತದೆ. ನಂತರ ಅಧಿವೇಶನದಲ್ಲಿ ವಕ್ಫ್ ಕುರಿತು ನೈಜ ವಿಚಾರ ಸರ್ಕಾರದ ಮುಂದಿಟ್ಟು ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಅಧಿವೇಶನದ ಮುಂಚೆ ಬೃಹತ್ ಸಮಾವೇಶ ಇಟ್ಕೊಂಡಿದ್ದೇವೆ. ಬೆಳಗಾವಿಯಲ್ಲಿ ವಕ್‌್ಫ ವಿರುದ್ಧ ಬೃಹತ್ ಸಮಾವೇಶ ನಡೆಸುತ್ತೇವೆ. ಯತ್ನಾಳ್, ಜಾರಕಿಹೊಳಿ, ಲಿಂಬಾವಳಿ ಅವರ ಹೆಸರೂ ನಮ ತಂಡದಲ್ಲಿದೆ. ನಾವೆಲ್ಲ ಒಟ್ಟಿಗೆ ವಕ್ಫ್ ಹೋರಾಟ ನಡೆಸ್ತೇವೆ. ಪಕ್ಷದಿಂದ ಅಧಿಕೃತವಾಗಿ ತಂಡಗಳ ಘೋಷಣೆ ಆಗಿದೆ, ಇದರಲ್ಲೊ ಅವರೂ ಇರುತ್ತಾರೆ. ಬೇರೆಯವರು ವೈಯಕ್ತಿಕವಾಗಿ ಹೋರಾಟ ಮಾಡಿದರೆ ಮಾಡಲಿ. ಆದರೆ ಅಧಿಕೃತವಾಗಿ ಪಕ್ಷದ ಮೂರು ತಂಡಗಳಲ್ಲಿ ಅವರೂ ಇದ್ದಾರೆ ಎಂದರು.
ಜಯನಗರಕ್ಕೆ ಅನುದಾನ ಬಿಡುಗಡೆ ಮಾಡದ ವಿಷಯವಾಗಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಚ್ಚರಿಕೆ ಕೊಟ್ಟರು.
ನೀವೇನೂ ದಾನ ಧರ್ಮ ಮಾಡುತ್ತಿಲ್ಲ. ನಿಮ ಖಾಸಗಿ ಹಣ ಕೊಡುತ್ತಿಲ್ಲ. ಅನುದಾನ ಕೇಳಲು ಜನಪ್ರತಿನಿಧಿಗಳಿಗೆ ಹಕ್ಕಿದೆ. ಇದಕ್ಕೆಲ್ಲ ತಗ್ಗಿ ಬಗ್ಗಿ ನಡೀಬೇಕು ಅಂತೀರಲ್ಲ, ಈಗಾಗಲೇ ಎಲ್ಲ ತೆರಿಗೆಗಳು, ದರಗಳು ಗಗನಕ್ಕೆ ಏರಿಸಿದ್ದೀರಿ. ಜಯನಗರದ ಜನ ತೆರಿಗೆ ಕಟ್ಟೋದಿಲ್ಲವೇ? ಎಂದು ಪ್ರಶ್ನಸಿದರು.
ತಗ್ಗಿ ಬಗ್ಗಿ ನಡೀಬೇಕು ಎಂದು ಡಿಕೆಶಿಯವರು ನಮ ಶಾಸಕರಿಗೆ ತಾಕೀತು ಮಾಡಿ ಅವಮಾನ ಮಾಡಿದ್ದಾರೆ, ಕೂಡಲೇ ಅವರು ನಮ ಶಾಸಕ ರಾಮಮೂರ್ತಿ ಅವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಆಪರೇಷನ್ ಕಮಲ ಆರೋಪದ ಕುರಿತು ಮಾತನಾಡಿದ ಅವರು, ನಮ ಕಡೆ ತೋರಿಸಿ ಅವರ ಶಾಸಕರಿಗೆ ಭಯ ಹುಟ್ಟಿಸುವ ಕೆಲಸ ಕಾಂಗ್ರೆಸ್ನಲ್ಲಿ ಆಗುತ್ತದೆ. ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ, ನಮಗೆ ಆ ಹುಚ್ಚೂ ಇಲ್ಲ ಎಂದು ತಿರುಗೇಟು ಕೊಟ್ಟರು.