Wednesday, August 20, 2025
Homeರಾಜ್ಯಫಲಾನುಭವಿಗಳ ಪಟ್ಟಿ ನೀಡದಿದ್ದರೆ ಅನುದಾನ ವಾಪಸ್‌‍ : ಸಚಿವ ಮಹದೇವಪ್ಪ

ಫಲಾನುಭವಿಗಳ ಪಟ್ಟಿ ನೀಡದಿದ್ದರೆ ಅನುದಾನ ವಾಪಸ್‌‍ : ಸಚಿವ ಮಹದೇವಪ್ಪ

If the list of beneficiaries is not provided, the grant will be withdrawn: Minister Mahadevappa

ಬೆಂಗಳೂರು, ಆ.20- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಉಪ ಯೋಜನೆಯ ಹಣದ ಬಳಕೆಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ನೀಡದೆ ಇದ್ದರೆ ಅನುದಾನವನ್ನು ಹಿಂಪಡೆಯುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್‌. ಸಿ .ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ .

ವಿಧಾನಸಭೆಯಲ್ಲಿಂದು ಮಾಗಡಿ ಕ್ಷೇತ್ರದ ಶಾಸಕ ಎಚ್‌.ಸಿ .ಬಾಲಕೃಷ್ಣ ಅವರು ವಿವಿಧ ನಿಗಮಗಳಿಗೆ ಒದಗಿಸಿರುವ ಅನುದಾನದ ಬಗ್ಗೆ ಮಾಹಿತಿ ಕೇಳಿದರು ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ವೆಲ್‌ ಕೊರೆಯುವುದು ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಮಯ ವ್ಯರ್ಥವಾಗುತ್ತಿದೆ. ಕಾಲಮಿತಿಯಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು.

ಉತ್ತರ ನೀಡಿದ ಸಚಿವ ಮಹದೇವಪ್ಪ, ಗಂಗಾ ಕಲ್ಯಾಣ ಹಾಗೂ ಇತರ ಯೋಜನೆಗಳನ್ನು ಜಿಲ್ಲಾವಾರು ಅನುಷ್ಠಾನಗೊಳಿಸಲಾಗುತ್ತಿದೆ. ಬೋರ್ವೆಲ್‌ ಕೊರೆದ ಬಳಿಕ, ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಇಂಧನ ಇಲಾಖೆಯ ಜವಾಬ್ದಾರಿ. ಗಂಗಾ ಕಲ್ಯಾಣ ಯೋಜನೆ ಅಡಿ 75 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಹೆಚ್ಚಿನ ವೆಚ್ಚವಾದರೆ ಅದನ್ನು ಇಂಧನ ಇಲಾಖೆಗೆ ಭರಿಸಬೇಕು ಎಂದರು.

ಇಂಧನ ಇಲಾಖೆಗೆ ಎಸ್‌‍ಸಿ, ಎಸ್‌‍ಟಿ ಉಪ ಯೋಜನೆಯ ಅಡಿ 5180 ಕೋಟಿ ರೂ.ಗಳನ್ನು ನೀಡಲಾಗಿದೆ. ಆ ಹಣವನ್ನು ಯಾವುದಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಶಾಸಕ ಎಂ. ಚಂದ್ರಪ್ಪ ಪ್ರಶ್ನಿಸಿದರು.ಉಪ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಎಲ್ಲಾ ಇಲಾಖೆಗಳು ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕು. ಇಲ್ಲವಾದರೆ ಅನುದಾನ ವಾಪಾಸ್‌‍ ಪಡೆಯಲಾಗುವುದು ಎಂದು ಮಹದೇವಪ್ಪ ಎಚ್ಚರಿಕೆ ನೀಡಿದರು.

RELATED ARTICLES

Latest News