ಬೆಂಗಳೂರು, ಅ.15– ಸೂಕ್ತ ಸೌಲಭ್ಯ ಕಲ್ಪಿಸಿ ಇಲ್ಲವೇ ನಾವು ಇನ್ನು ಮುಂದೆ ಆಸ್ತಿ ತೆರಿಗೆ ಪಾವತಿಸುವುದಿಲ್ಲ ಎಂದು ಐಟಿ-ಬಿಟಿ ಮಂದಿ ಪಟ್ಟು ಹಿಡಿದಿದ್ದಾರೆ. ಇಲ್ಲಿನ ರಸ್ತೆ ಗುಂಡಿಗ ಳಿಂದ ಆಗಬಾರದ ಅನಾಹುತಗಳಾಗುತ್ತಿವೆ ಇಂತಹ ಸನ್ನಿವೇಶದಲ್ಲಿ ನಾವು ಯಾಕೆ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಟ್ಯಾಕ್ಸ್ ಪೇಯರ್‌ರಸ ಫೋರಂ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಅತಿ ಹೆಚ್ಚು ಐಟಿ-ಬಿಟಿ ಮಂದಿ ವಾಸಿಸುವ ವರ್ತೂರು ಹಾಗೂ ಪಣತ್ತೂರಿನ ನಿವಾಸಿಗಳು ಟ್ಯಾಕ್ಸ್ ಪೇಯರ್‌ರಸ ಫೋರಂ ರಚನೆ ಮಾಡಿಕೊಂಡು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.ನಗರದ ಇಂತಹ ದುಸ್ಥಿತಿ ತಲುಪಿರುವ ಸಂದರ್ಭದಲ್ಲಿ ನಾವು ಆಸ್ತಿ ತೆರಿಗೆ ಕಟ್ಟುವುದಿಲ್ಲ, ನಮ್ಮಿಂದ ತೆರಿಗೆ ಕೇಳಬೇಡಿ ಎಂದು ಅವರು ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದಾರೆ.
ವರ್ತೂರು ಮತ್ತು ಪಣತ್ತೂರು ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇರುವ ರಸ್ತೆಗಳಲ್ಲಿ ಗುಂಡಿಗಳಿವೆ ಹೀಗಾಗಿ ಇಲ್ಲಿ ನಿತ್ಯ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ನಿತ್ಯ ಸ್ಕೂಲ್ ಬಸ್‌ಗಳ ಅಪಘಾತದಿಂದ ಬೆಸತ್ತು ನಾವು ಈ ರೀತಿಯ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಫೋರಂ ಸದಸ್ಯರು ತಿಳಿಸಿದ್ದಾರೆ.
ಗುಂಡಿ ಮುಕ್ತ ರಸ್ತೆ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಿದ ನಂತರ ತೆರಿಗೆ ಕೇಳಿ ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ… ಈ ಭಾಗದ ಜನ ವಾರ್ಷಿಕ ಅಂದಾಜು 800 ಕೋಟಿ ತೆರಿಗೆ ಪಾವತಿ ಮಾಡುತ್ತಿದ್ದಾರಂತೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಹೂಡಿಕೆದಾರರ ಎದುರು ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗುತ್ತಿದೆ ಎಂದು ಅವರುಗಳು ಅಲವತ್ತುಕೊಂಡಿದ್ದಾರೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಎಕ್‌್ಸ ಮಾಡಿದ ನಂತರ ಐಟಿ-ಬಿಟಿ ಉದ್ದಿಮೆದಾರರು ಇದೀಗ ಒಂದಾಗಿ ಹೋರಾಟ ನಡೆಸಲು ಮುಂದಾಗಿದ್ದಾರೆ.