ಬೆಂಗಳೂರು, ಅ.17- ಹೂ ಕುಂಡ, ಆಟಂ ಬಾಂಬ್ ತಂಟೆಗೆ ಹೋಗಬೇಡಿ… ಪಟಾಕಿ ಹಚ್ಚುವಾಗ ಬಕೆಟ್ ನೀರನ್ನು ಹತ್ತಿರದಲ್ಲಿಟ್ಟುಕೊಳ್ಳಿ. ಪೋಷಕರೇ ಮುಂದೆ ನಿಂತು ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಸಿ ಇದು ನಿಮಗೂ ನಿಮ ಕುಟುಂಬಕ್ಕೂ ಆಗಬಹುದಾದ ಸಮಸ್ಯೆ ನಿವಾರಿಸಲು ಸಹಾಯ ಮಾಡಲಿದೆ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ಸಾರ್ವಜನಿಕರಿಗೆ ಸಲಹೆ ಸೂಚನೆ ನೀಡಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಿಂಟೋ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಶಶಿಧರ್ ಅವರು ಪಟಾಕಿ ಹಚ್ಚುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ವಿವರಿಸಿದರು.
ಕಳೆದ ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದಾಗಿ ಶೇ. 35ರಷ್ಟು ಜನರಿಗೆ ಸುಟ್ಟ ಗಾಯಾಳಾಗಿತ್ತು. ಶೇ. 19ರಷ್ಟು ಮಂದಿಯ ಕಣ್ಣಿಗೆ ಹಾನಿ ಮಾಡಿಕೊಂಡಿದ್ದರು. ಅದರಲ್ಲಿ ಶೇ. 40ರಷ್ಟು ಮಂದಿ 14 ವರ್ಷದ ಒಳಗಿನ ಮಕ್ಕಳು ಎನ್ನುವುದು ವಿಶೇಷ ಹೀಗಾಗಿ ಮಕ್ಕಳ ಬಗ್ಗೆ ಎಚ್ಚರವಹಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಪ್ರಮುಖವಾಗಿ ಶೇ.28ರಷ್ಟು ಜನ ಪಟಾಕಿ ಹಚ್ಚಲು ಹೋಗಿ ತೊಂದರೆಗೊಳಗಾಗಿದ್ದರು ಶೆ. 18 ಮಂದಿ ಪಟಾಕಿ ಹಚ್ಚೋದನ್ನ ನೋಡೋಕೆ ಹೋಗಿ ಹಾನಿ ಮಾಡಿಕೊಂಡಿದ್ದಾರೆ.ಕಳೆದ ಬಾರಿ 71ಜನರಿಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದರಲ್ಲಿ 53 ಜನರಿಗೆ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ18 ಜನರಿಗೆ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಪಟಾಕಿ ಹಚ್ಚುವಾಗ ಹೂಕುಂಡ, ಆಟಂ ಬಾಂಬ್, ಬಿಜಲಿ ಪಟಾಕಿಯಿಂದ ಭಾರಿ ಸದ್ದು ಮಾಡುವ ಪಟಾಕಿ ಹಚ್ಚುವ ಬದಲು ಸಣ್ಣಪುಟ್ಟ ಪಟಾಕಿ ಸಿಡಿಸುವುದು ಉತ್ತಮ ಎಂದರು.
ಪಟಾಕಿ ಹಚ್ಚುವಾಗ ಬಕೆಟ್ ನೀರನ್ನು ಪಕ್ಕದಲ್ಲಿ ಇಟ್ಟುಕೊಂಡಿರಬೇಕು. 5ವರ್ಷದೊಳಗಿನ ಮಕ್ಕಳಿಗೆ ಪಟಾಕಿ ಹೊಡಿಸಬಾರದು.
ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಪಟಾಕಿ ಹೊಡೆಸಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಾಗಿ ಗಮನ ನೀಡಬೇಕು ಅದರಲ್ಲೂ ಪಟಾಕಿ ಹೊಡಿಬೇಕಾದ್ರೆ ಕನ್ನಡಕ ಬಳಸೋದು ಒಳಿತು1 ಎಂದು ಅವರು ಸಲಹೆ ನೀಡಿದರು.ಅದಷ್ಟು ಪಟಾಕಿಯಿಂದ ದೂರ ಉಳಿಯೋದೇ ವಾಸಿ ಪಟಾಕಿ ಬೇಕೇ ಬೇಕು ಎಂದಾದರೆ ಹಸಿರು ಪಟಾಕಿ ಬಳಸುವುದು ಪರಿಸರಕ್ಕೆ ಹಾಗೂ ನಿಮ ಆರೋಗ್ಯಕ್ಕೂ ಒಳ್ಳೆದು ಎಂದು ಅವರು ಹೇಳಿದರು.
ದೀಪಾವಳಿ ಸಂದರ್ಭದಲ್ಲಿ ನಮ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಕಾಲ ಚಿಕಿತ್ಸೆನೀಡಲಾಗುವುದು. ಅಗತ್ಯವಿರುವವರು 0802670 7176, 08026706221 ಸಹಾಯವಾಣಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.ಪಟಾಕಿ ಸಿಡಿತದಿಂದ ಹಾನಿ ಮಾಡಿಕೊಳ್ಳುವವರಿಗಾಗಿ 25 ಹಾಸಿಗೆಗಳನ್ನು ರಿಸರ್ವ್ ಮಾಡಲಾಗಿದೆ. ಇದರಲ್ಲಿ ಪುರುಷ ಮತ್ತು ಮಹಿಳೆಯರಿಗೆ ತಲಾ ಹತ್ತು ಹಾಗೂ ಮಕ್ಕಳಿಗಾಗಿ ಐದು ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ವಾರ್ಡ್‌ಗಳಲ್ಲಿ ಗಾಯಾಳುಗಳ ಎಕ್ಸಾಮಿನೇಷನ್ ಮಾಡಲು ಸ್ಲಿಟ್ ಲ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ವೈದ್ಯರಿಗೆ ದೀಪಾವಳಿಗೆ ರಜೆ ಇರುವುದಿಲ್ಲ. ಎಲ್ಲಾ ವೈದ್ಯರು ಕಡ್ಡಾಯವಾಗಿ ಕೆಲಸ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.