ನವದೆಹಲಿ,ಮಾ.23- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗುವಾಹಟಿಯ ಸಂಶೋಧಕರು ಅಂತಾರಾಷ್ಟ್ರೀಯ ಗಡಿಗಳ ಕಣ್ಗಾವಲಿಗೆ ಯಂತ್ರ ಮಾನವ(ರೋಬೋ)ರನ್ನು ಅಭಿವೃದ್ಧಿಪಡಿಸಿದ್ದಾರೆ. ಇವು ಸವಾಲಿನ ಗುಡ್ಡಗಾಡು ಪ್ರದೇಶಗಳಲ್ಲಿಯೂ ವಾಸ್ತವಿಕ ಅಡಚಣೆ ರಹಿತ ಎಐ ಬಲದ ಕಣ್ಗಾವಲು ಇರಿಸಲು ಸಮರ್ಥವಾಗಿದೆ.
ಈ ರೋಬೋಗಳನ್ನು ಡಸ್ಪೇಷಿಯೋ ರೋಬೋಟಿಕ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್(ಡಿಎಸ್‌ಆರ್‌ಎಲ್) ಎಂಬ ಐಐಟಿ ಗುವಾಹಟಿಯ ಒಂದು ನವೋದ್ಯಮ ಅಭಿವೃದ್ಧಿಪಡಿಸಿದೆ. ಭಾರತೀಯ ರಕ್ಷಣಾ ಮೂಲಸೌಕರ್ಯದಲ್ಲಿ ಸೇರ್ಪಡೆಯಾಗಲು ಇವುಗಳು ಸಮರ್ಥವಾಗಿರುವುದನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ದೃಢಪಡಿಸಿದೆ. ಭಾರತೀಯ ಸೇನೆಯು ಈಗಾಗಲೇ ಈ ಕಣ್ಗಾವಲು ವ್ಯವಸ್ಥೆಯ ಕ್ಷೇತ್ರ ಪ್ರಯೋಗಗಳನ್ನು ನಡೆಸುತ್ತಿದೆ.
ಸೀಮಾತೀತ ಧ್ರುವೀಯ ಟ್ರಾವರ್‌ಸಲ್ ಸಾಮರ್ಥ್ಯ, ಅಳವಡಿಕೆಯ ತೊಂದರೆ ಇಲ್ಲದ ನ್ಯಾವಿಗೇಷನ್ ಮತ್ತು ಎಐ ಚಾಲಿತ ಗುರುತಿಸುವಿಕೆ ಹೊಂದಿರುವ ಈ ವ್ಯವಸ್ಥೆ ಗಡಿ ರಕ್ಷಣೆಯಲ್ಲಿ ಒಂದು ಗೇಮ್ ಚೇಂಜರ್ ಆಗಿದೆ. ಮಹತ್ವದ ಮೂಲಸೌಕರ್ಯ ಕಣ್ಗಾವಲು ಮತ್ತು ಕಾರ್ಯತಂತ್ರಾತಕ ರಕ್ಷಣಾ ಅಪ್ಲಿಕೇಷನ್ ಇದಾಗಿದೆ.
ಡಿಎಸ್‌ಆರ್‌ಎಲ್‌ನ ಸಿಇಓ ಅರ್ನಬ್ ಕುಮಾರ್ ಅವರ ಪ್ರಕಾರ ಡ್ರೋನ್‌ಗಳು, ಸ್ಥಿರ ಕ್ಯಾಮೆರಾಗಳು ಮತ್ತು ಮಾನವ ಗಸ್ತು ವ್ಯವಸ್ಥೆ ಮೇಲೆ ಅವಲಂಬಿತ ಸಾಂಪ್ರದಾಯಿಕ ಭದ್ರತಾ ಕ್ರಮಗಳಂತಲ್ಲದೆ, ಈ ಸ್ವಯಂಚಾಲಿತ ರೋಬೋಟಿಕ್ ವ್ಯವಸ್ಥೆಯು ಗುಡ್ಡಗಾಡು ಪ್ರದೇಶಗಳು, ಹವಾಮಾನ ಮತ್ತು ದಬ್ಬಾಳಿಕೆಯ ಮಿತಿಗಳನ್ನು ಮೀರಿ ಕಾರ್ಯನಿರ್ವಹಿಸಬಲ್ಲದು.