ಗುವಾಹಟಿ, ಆ.26-ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಇಬ್ಬರನ್ನು ಬಂಧಿಸಿ ಬಾಟಲಿನಲ್ಲಿ ತುಂಬಿದ್ದ ಸುಮಾರು 3 ಕೋಟಿ ರೂ ಮೌಲ್ಯದ ಕೆಮ್ಮಿನ ಸಿರಪ್‌ಅನ್ನು ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ-ತ್ರಿಪುರ ಅಂತರರಾಜ್ಯ ಗಡಿಯಲ್ಲಿರುವ ಚುರೈಬರಿ ಹೊರಠಾಣೆ ಸಮೀಪ ತಡೆಹಿಡಿಯಲಾದ ವಾಹನದಿಂದ ಕೊಡೈನ್ ಫಾಸ್ಫೇಟ್ ಹೊಂದಿರುವ ಒಟ್ಟು 30,420 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ಮಾದಕವಸ್ತು ಮಾರಾಟಗಾರರನ್ನು ಜೈಲಿಗೆ ಅಟ್ಟಾಲಾಗಿದೆ ಮಾದಕವಸ್ತು ಪಿಡುಗಿನ ವಿರುದ್ಧ ಇದು ದೊಡ್ಡ ಹೋರಾಟ ಎಂದು ಶರ್ಮಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊಡೈನ್ ಫಾಸ್ಫೇಟ್ ಎಂಬುದು ಸೌಮ್ಯದಿಂದ ನೋವು, ಕೆಮು ಮತ್ತು ಅತಿಸಾರಕ್ಕೆ ಚಿಕಿತ್ಸೆ ನೀಡಲು ಅಫೀಮು ಅಥವಾ ಮಾರ್ಫಿನ್‌ನಿಂದ ತಯಾರಿಸಿದ ಔಷಧವಾಗಿದೆ.
ಇದು ನಾರ್ಕೋಟಿಕ್ ನೋವು ನಿವಾರಕಗಳು (ನೋವು ನಿವಾರಕಗಳು) ಎಂದು ಕರೆಯಲ್ಪಡುವ ಔಷಧಿಗಳ ಗುಂಪಿಗೆ ಸೇರಿದ್ದು, ದೀರ್ಘಕಾಲದವರೆಗೆ ಬಳಸಿದರೆ, ಅದು ವ್ಯಸನಕಾರಿಯಾಗಿ ಪರಿಣಮಿಸಬಹುದು, ಮಾನಸಿಕ ಅಥವಾ ದೈಹಿಕ ಅವಲಂಬನೆಗೆ ಕಾರಣವಾಗಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.