Sunday, October 6, 2024
Homeರಾಜ್ಯಸರ್ವರ ಅಭಿಪ್ರಾಯ ಪಡೆದು ಜಾತಿಗಣತಿ ವರದಿ ಜಾರಿ, ಒಳ ಮೀಸಲಾತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ...

ಸರ್ವರ ಅಭಿಪ್ರಾಯ ಪಡೆದು ಜಾತಿಗಣತಿ ವರದಿ ಜಾರಿ, ಒಳ ಮೀಸಲಾತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ : ಸಿಎಂ

Implementation of caste census report after getting everyone's opinion: CM

ರಾಯಚೂರು,ಅ.5- ಕಾಂತರಾಜು ಅವರ ವರದಿಯನ್ನು ಸ್ವೀಕರಿಸಲಾಗಿದೆ. ಅದನ್ನು ಸಂಪುಟದಲ್ಲಿ ಚರ್ಚಿಸಿ ಎಲ್ಲರ ಅಭಿಪ್ರಾಯ ಶೇಖರಿಸಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ನಡೆಸಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಜಾರಿ ಮಾಡುತ್ತೇವೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಚರ್ಚೆ ಮಾಡುತ್ತೇವೆ, ಸಣ್ಣಪುಟ್ಟ ಲೋಪದೋಷಗಳಿದ್ದರೆ ಸರಿಪಡಿಸುತ್ತೇವೆ ಎಂದರು.

ಒಳಮೀಸಲಾತಿ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ತೀರ್ಪು ಪ್ರಕಟವಾದ ಬಳಿಕ ನಾನು ಹೇಳಿಕೆ ನೀಡಿದ್ದೇನೆ. ಒಳಮೀಸಲಾತಿ ಕುರಿತು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸುವಂತೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಸೂಚನೆ ನೀಡಲಾಗಿದೆ. ಇದು ರಾಷ್ಟ್ರಮಟ್ಟದ ವಿಚಾರವಾಗಿರುವುದರಿಂದ ಹೈಕಮಾಂಡ್ ನಾಯಕರ ಜೊತೆ ಕೂಡ ಚರ್ಚೆ ಮಾಡಬೇಕಿದೆ ಎಂದು ಹೇಳಿದರು.

ಸಚಿವರ ಭೇಟಿ ವಿಶೇಷವಲ್ಲ:
ಸಚಿವರು ಭೇಟಿ ಮಾಡಿದಾಕ್ಷಣ ಊಹಾಪೋಹ ಹರಡುವುದು ಸರಿಯಲ್ಲ. ಸಚಿವ ಎಚ್.ಸಿ.ಮಹದೇವಪ್ಪ ಅವರ ಮನೆಯಲ್ಲಿ ಸಚಿವರು ಚರ್ಚೆ ನಡೆಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಸಚಿವ ಎನ್.ಎಸ್.ಬೋಸರಾಜು ಯಾರನ್ನೋ ಭೇಟಿ ಮಾಡಿದರೆ ಅದಕ್ಕೆಲ್ಲಾ ಊಹಾಪೋಹ ಹರಡುವುದು ಸರಿಯಲ್ಲ. ಈ ಹಿಂದೆಯೂ ಈ ರೀತಿಯ ಹಲವು ಸಭೆಗಳಾಗಿವೆ. ಎಲ್ಲದಕ್ಕೂ ವದಂತಿ ಸೃಷ್ಟಿಸಲಾಗುತ್ತಿದೆ. ಸಭೆಗಳ ಹಿಂದೆ ತಮನ್ನು ಪದಚ್ಯುತಗೊಳಿಸುವ ಯಾವುದೇ ಪ್ರಯತ್ನಗಳಿಲ್ಲ ಎಂದರು.

ವಿರೋಧಪಕ್ಷದವರು ತಮ ವಿರುದ್ಧ ಸುಳ್ಳು ಆರೋಪ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ನಾವು ತಕ್ಕ ಉತ್ತರವನ್ನು ರಾಜಕೀಯವಾಗಿಯೇ ನೀಡಿದ್ದೇವೆ ಎಂದರು. ಜಿ.ಟಿ.ದೇವೇಗೌಡರು ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸತ್ಯ ಹೇಳಿದ್ದಾರೆ. ಜೆಡಿಎಸ್ನ ಕೋರ್ಕಮಿಟಿಯಲ್ಲಿ ಅಧ್ಯಕ್ಷರಾಗಿದ್ದಾರೆ. ಮುಡಾದಲ್ಲಿ ಸದಸ್ಯರಾಗಿದ್ದು, ಜೆಡಿಎಸ್ನ ಹಿರಿಯ ನಾಯಕರಾಗಿ ಅವರು ಸತ್ಯ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪುಗಳಿಲ್ಲ. ಜಿ.ಟಿ.ದೇವೇಗೌಡ ಕೂಡಾ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿರುವುದು ನನಗೆ ಗೊತ್ತಿಲ್ಲ. ನಾನು ಮುಡಾದ ಯಾವುದೇ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಹೇಳಿದರು.

ಬೆಂಗಳೂರು-ಮೈಸೂರು ನಡುವೆ ಪಾದಯಾತ್ರೆ ನಡೆಸುವುದು ಬೇಡ ಎಂದು ಜೆಡಿಎಸ್-ಬಿಜೆಪಿ ನಾಯಕರಿಗೆ ಜಿ.ಟಿ.ದೇವೇಗೌಡ ಸಲಹೆ ನೀಡಿದ್ದರು ಎಂದರು.

ಆರ್.ಅಶೋಕ್ ರಾಜೀನಾಮೆ ಕೊಟ್ಟುಬಿಡಲಿ :
ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಸರ್ಕಾರಿ ಜಮೀನನ್ನು ತೆಗೆದುಕೊಂಡು ಹಗರಣ ಮಾಡಿದ್ದರು. ನ್ಯಾಯಾಲಯದಲ್ಲಿ ತಮ ಪರವಾಗಿ ತೀರ್ಪು ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೂ ನಮ ಹಿರಿಯ ಸಚಿವರು ಹಗರಣವನ್ನು ಬಯಲು ಮಾಡಿದ್ದಾರೆ. ಒಂದು ವೇಳೆ ಅಶೋಕ್ರವರು ರಾಜೀನಾಮೆ ಕೊಡುವುದಾದರೆ ಕೊಟ್ಟುಬಿಡಲಿ ಎಂದು ತಿರುಗೇಟು ನೀಡಿದರು.

ಹಿಂದುಳಿದ ವರ್ಗದವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ :
ನನ್ನೊಬ್ಬನಿಗೆ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದಿಲ್ಲ, ಹಿಂದುಳಿದ ವರ್ಗಗಳ ಎಲ್ಲರ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ, ಈ ಹಿನ್ನೆಲೆಯಲ್ಲಿ ಮಾನ್ವಿಯಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಸ್ವಾಭಿಮಾನ ಹೆಚ್ಚಾಗಬೇಕು ಎಂಬ ಕಾರಣಕ್ಕೆ ಸಮಾವೇಶ ನಡೆಸಲಾಗುತ್ತಿದೆ. ಇದರ ಉದ್ದೇಶ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದಲ್ಲ ಎಂದರು.

ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಟಿಎಂಸಿ. ಈಗ 102 ಟಿಎಂಸಿ ಮಾತ್ರ ಸಂಗ್ರಹವಾಗುತ್ತಿದೆ. ಸುಮಾರು 30 ಟಿಎಂಸಿ ನೀರಿನಷ್ಟು ಹೂಳು ತುಂಬಿದೆ. ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಜಲಾಶಯದ 19ನೇ ಗೇಟ್ ಕೊಚ್ಚಿ ಹೋದಾಗ ಐದೇ ದಿನದಲ್ಲಿ ದುರಸ್ತಿ ಮಾಡಿಸಿದ್ದೇವೆ. ನೀರು ಹೊರಹರಿಯವುದನ್ನು ತಡೆಹಿಡಿದಿದ್ದೇವೆ, ಬಾಗಿನ ಅರ್ಪಿಸಿದ್ದೇವೆ ಎಂದು ಹೇಳಿದರು.

RELATED ARTICLES

Latest News