Wednesday, April 2, 2025
Homeರಾಜ್ಯಹಿಟ್‌ ಅಂಡ್‌ ರನ್‌ ಆರೋಪಿ ಮಿಹಿರ್‌ ಶಾಗೆ ಮದ್ಯ ವಿತರಿಸಿದ ಬಾರ್‌ಗೆ ಬೀಗ

ಹಿಟ್‌ ಅಂಡ್‌ ರನ್‌ ಆರೋಪಿ ಮಿಹಿರ್‌ ಶಾಗೆ ಮದ್ಯ ವಿತರಿಸಿದ ಬಾರ್‌ಗೆ ಬೀಗ

ಮುಂಬೈ,ಜು.15-ಬಿಎಂಡಬ್ಲ್ಯು ಹಿಟ್‌ ಅಂಡ್‌ ರನ್‌ ಆರೋಪಿ ಮಿಹಿರ್‌ ಶಾ ಅವರಿಗೆ ನಾಲ್ಕು ಬಾಟಲಿ ಬಿಯರ್‌ ವಿತರಿಸಿದ್ದ ಮುಂಬೈ ಬಾರ್‌ನ ಪರವಾನಗಿಯನ್ನು ಉಲ್ಲಂಘನೆ ಆರೋಪದ ಮೇಲೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಮಿಹಿರ್‌ ಶಾ ಹಾಗೂ ಬಿಎಂಡಬ್ಲ್ಯು ಚಾಲಕ ಸಾಯಿ ಪ್ರಸಾದ್‌ ಅವರು ಬಾರ್‌ನಿಂದ ಬಿಯರ್‌ ಖರೀದಿಸಿ ಕಾರಿನೊಳಗೆ ತನ್ನ ಇತರ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ವೇಗವಾಗಿ ಡ್ರೈವ್‌ ಮಾಡಿಕೊಂಡು ಬಂದು ದಂಪತಿ ಇದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದರು.

ಹೀಗಾಗಿ ಸಮಯ ಮೀರಿದ ನಂತರವೂ ಆರೋಪಿಗಳಿಗೆ ಬಿಯರ್‌ ಮಾರಾಟ ಮಾಡಿದ ಜುಹುವಿನಲ್ಲಿರುವ ಬಾರ್‌ ಪರವಾನಿಗಿಯನ್ನು ರದ್ದುಗೊಳಿಸಲಾಗಿದೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ಪೊಲೀಸರು ಬಾರ್‌ ಮೇಲೆ ದಾಳಿ ನಡೆಸಿದಾಗ, ಭದ್ರತಾ ಕ್ಯಾಮೆರಾದ ದಶ್ಯಗಳನ್ನು ಸಹ ಅಳಿಸಲಾಗಿದೆ ಎಂದು ತಿಳಿದುಬಂದಿದೆ. ಎರಡನೇ ಸುತ್ತಿನ ಪಾನೀಯಗಳಿಗಾಗಿ ಮಲಾಡ್‌ ಬಾರ್‌ಗೆ ಹೋಗುವ ಮೊದಲು, ಮಿಹಿರ್‌ ಷಾ ಮತ್ತು ಅವರ ಮೂವರು ಸ್ನೇಹಿತರು ಜುಹುದಲ್ಲಿನ ವೈಸ್‌‍-ಗ್ಲೋಬಲ್‌ ತಪಸ್‌‍ ಬಾರ್‌ನಲ್ಲಿ ಕಂಠಪೂರ್ತಿ ವಿಸ್ಕಿ ಕುಡಿದಿದ್ದರು.ಮಿಹಿರ್‌ ಶಾ ಅವರು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಶಿವಸೇನಾ ಬಣದ ಸದಸ್ಯ ರಾಜೇಶ್‌ ಶಾ ಅವರ ಪುತ್ರರಾಗಿದ್ದಾರೆ.

RELATED ARTICLES

Latest News