ಆಗ್ರಾ,ಮೇ21- ಉತ್ತರಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ದೇಶಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಶೋಧದ ವೇಳೆ ಸಿಕ್ಕ ನೋಟುಗಳ ಕಟ್ಟುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಮೂವರು ಚಪ್ಪಲಿ- ಶೂ ವ್ಯಾಪಾರಿಗಳ ಮನೆಗಳಲ್ಲಿ ಎಲ್ಲೆಂದರಲ್ಲಿ ಕಂತೆಕಂತೆ ನೋಟುಗಳು ಕಂಡುಬಂದಿವೆ. ಹಣ ಎಣಿಸಲು ಸಾಧ್ಯವಾಗದ ಕಾರಣ ಭಾರೀ ಪ್ರಮಾಣದಲ್ಲಿ ಎಣಿಕೆ ಯಂತ್ರಗಳನ್ನು ತರಿಸಬೇಕಾದ ಪರಿಸ್ಥಿತಿಯು ಐಟಿ ಅಧಿಕಾರಿಗಳಿಗೆ ಎದುರಾಗಿತ್ತು ಎಂದು ವರದಿಯಾಗಿದೆ.
ರಾಶಿ ರಾಶಿ ಹಣದ ಕಟ್ಟುಗಳ ಜತೆಗೆ ಈ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೇವಲ 42 ಗಂಟೆಗಳಲ್ಲಿ 100 ಕೋಟಿ ರೂ.ಗೂ ಹೆಚ್ಚು ವೌಲ್ಯದ ನಗದು, ಚಿನ್ನಾಭರಣ, ಆಸ್ತಿ ಐಟಿ ವಶಕ್ಕೆ ಪಡೆದಿದೆ.
ನೂರು ಕೋಟಿ ವಶ:
ಆಗ್ರಾದ ಮೂವರು ಶೂ ವ್ಯಾಪಾರಿಗಳಿಗೆ ಸೇರಿದ 14 ನಿವೇಶನಗಳಲ್ಲಿ ಆದಾಯ ತೆರಿಗೆ ಇಲಾಖೆ ಸತತ 42 ಗಂಟೆಗೂ ಹೆಚ್ಚು ಕಾಲ ಶೋಧ ನಡೆಸಿದೆ. ಸುಮಾರು 42 ಗಂಟೆಗಳ ಕಾಲ ನಡೆದ ಈ ಶೋಧದಲ್ಲಿ ಅಧಿಕಾರಿಗಳಿಗೆ ಕೋಟಿ ಕೋಟಿ ಹಣ ಸಿಕ್ಕಿದೆ.
ಶೂ ವ್ಯಾಪಾರಿಗಳ ಮನೆಗಳಲ್ಲಿನ ಹಾಸಿಗೆ, ಕಪಾಟು, ಬ್ಯಾಗ್, ಶೂ ಬಾಕ್‌್ಸಗಳಲ್ಲಿ ಕೋಟ್ಯಂತರ ರೂ. 500 ಮುಖಬೆಲೆಯ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ. ಹಣದ ಜತೆಗೆ ಕೋಟ್ಯಂತರ ವೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನೂ ಇದೇ ವೇಳೆ ಅಽಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ಆಸ್ತಿಯ ಒಟ್ಟಾರೆ ಮೊತ್ತ ಇದುವರೆಗೆ 100 ಕೋಟಿ ರೂ.ಗಳಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. ಆದರೆ ಇದುವರೆಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಷ್ಟು ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿ ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.
14 ಕಡೆ ಏಕಕಾಲದಲ್ಲಿ ಶೋಧ:
ಆದಾಯ ತೆರಿಗೆ ತನಿಖಾ ತಂಡ ಆಗ್ರಾದ 14 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿತು. ಐಟಿ ಇಲಾಖೆಯು ಎಂಜಿ ರಸ್ತೆಯ ಬಿಕೆ ಶೂಸ್, ಧಕ್ರಾನ್‌ನ ಮನ್ಶು ಟ್‌ರ್ವೇ ಮತ್ತು ಇಂಗು ಮಂಡಿಯ ಹರ್ಮಿಲಾಪ್ ಟ್ರೇಡರ್ಸ್ ಕಚೇರಿಗಳು ಮತ್ತು ಮನೆಗಳಲ್ಲಿ ತಪಾಸಣೆ ಕೈಗೊಂಡಿತ್ತು. ಆಗ್ರಾ, ಲಕ್ನೋ, ಕಾನ್ಪುರ, ನೋಯ್ಡಾದ ಅಧಿಕಾರಿಗಳು, ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು ಮತ್ತು ಪೊಲೀಸರು ಈ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.
ಹಾಸಿಗೆಯ ಕೆಳಗೆ ಕಂತೆಕಂತೆ ಕಟ್‌ಗಳು:
ಜಯಪುರದ ಟ್ರೇಡರ್ಸ್ ಮಾಲೀಕರ ಮನೆಯ ಹಾಸಿಗೆ, ಬೀರು, ಶೂ ಬಾಕ್ಸ್ , ಬ್ಯಾಗ್ ಮತ್ತು ಗೋಡೆಗಳಲ್ಲಿ 500 ರೂ. ಮುಖ್ಯಬೆಲೆಯ ನೋಟುಗಳ ಬಂಡಲ್‌ಗಳನ್ನು ಹುದುಗಿಡಲಾಗಿದ್ದನ್ನು ಐಟಿ ತಂಡ ಪತ್ತೆಮಾಡಿದೆ.
ಎರಡು ದಿನಗಳ ಹಿಂದೆ ಹುಡುಕಾಟ ಪ್ರಾರಂಭಿಸಲಾಗಿತ್ತು. ಈಗಲೂ ಐಟಿ ಅಽಕಾರಿಗಳು ಹಣದ ಎಣಿಕೆ ಮುಂದುವರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಹಾಸಿಗೆಯಲ್ಲಿ 500 ರೂ.ನೋಟುಗಳ ಬಂಡಲ್‌ಗಳು ಗೋಚರಿಸುತ್ತಿವೆ. ಗೋವಿಂದನಗರದಲ್ಲಿರುವ ವ್ಯಾಪಾರಿ ನಿವಾಸದಿಂದಲೂ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ತಂಡಗಳು ನಗದು ಹಣ ಎಣಿಸುವ ಕಾರ್ಯದಲ್ಲಿ ನಿರತವಾಗಿವೆ.
ವಾಷಿಂಗ್ ಮಷಿನ್ ಮತ್ತು ಗೋಡೆಗಳಲ್ಲಿನ ರಹಸ್ಯ ಸ್ಥಳಗಳಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ನೋಟು ಎಣಿಕೆ ಯಂತ್ರಗಳು ಬಿಸಿಯಾಗುತ್ತಿದ್ದಂತೆ ಬೇರೆ ಯಂತ್ರಗಳನ್ನು ತಂದು ಹಣ ಎಣಿಕೆ ಮಾಡಲಾಗಿದೆ ಎಂದು ಅಽಕಾರಿಗಳ ಮೂಲಗಳು ಹೇಳಿವೆ. ಒಟ್ಟಾರೆ 100 ಕೋಟಿಗೂ ಅಽಕ ಅಘೋಷಿತ ಆದಾಯವನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆದಾಯ ತೆರಿಗೆ ಇಲಾಖೆ ಅಽಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.