ಹೈದ್ರಾಬಾದ್, ಜ.21- ಇಂದು ಬೆಳ್ಳಂಬೆಳಗ್ಗೆಯೇ ಟಾಲಿವುಡ್ ನ ಖ್ಯಾತ ನಿರ್ಮಾಪಕರು, ನಿರ್ದೇಶಕ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಐಟಿ ರೇಡ್ ಆಗಿದೆ. 55 ಸದಸ್ಯರ ತಂಡವು 8 ಕಡೆ ದಾಳಿ ನಡೆಸಿವೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರವು ಇತ್ತೀಚೆಗೆ 1800 ರೂ.ಗಳ ಗಳಿಕೆ ಗಳಿಸಿದೆ ಎಂಬ ಖುಷಿಯಲ್ಲಿದ್ದ ನಿರ್ಮಾಪಕರಾದ ನವೀನ್ ಯರ್ರೆನೇನಿ ಹಾಗೂ ವೈ.ರವಿಶಂಕರ್ ಅವರ ಮನೆಗಳು ಹಾಗೂ ಮೈತ್ರಿ ಮೂವೀಸ್ ಮೇಕರ್ಸ್ ಸಂಸ್ಥೆಯ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಕೆಲವು ದಾಖಲೆಗಳನ್ನು ಪರಿಶೀಲಿಸಿ ವಶ ಪಡಿಸಿಕೊಂಡಿದ್ದಾರೆ.
ಇನ್ನು ತೆಲುಗು ಚಿತ್ರದ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ನಿರ್ಮಿಸಿರುವ ರಾಮ್ ಚರಣ್ ತೇಜ ನಟನೆಯ ಗೇಮ್ ಚೇಂಜರ್ ಹಾಗೂ ವಿಕ್ಟರಿ ವೆಂಕಟೇಶ್ ಅಭಿನಯದ ಸಂಕ್ರಾಂತಿಕಿ ವಸ್ತುನ್ನಾಮ್ ಸಿನಿಮಾಗಳು ಬಿಡುಗಡೆಗೊಂಡಿದ್ದು, ಗೇಮ್ ಚೇಂಜರ್ ನಲ್ಲಿ ನಷ್ಟ ಹಾಗೂ ಸಂಕ್ರಾಂತಿಕಿ ವಸ್ತುನ್ನಾಮ್ ಸಿನಿಮಾದಲ್ಲಿ ಲಾಭ ಗಳಿಸಿದೆ.
ದಿಲ್ ರಾಜು ನಿರ್ಮಾಣ ಸಂಸ್ಥೆಯ ಕಚೇರಿ, ಮನೆ ಅಲ್ಲದೆ ಅವರ ಸಹೋದರ ಸಿರೇಶ್ ಹಾಗೂ ಪುತ್ರಿ ಹನ್ಸಿತಾ ರೆಡ್ಡಿ ಅವರ ಮನೆಗಳ ಮೇಲೂ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕೆಲವು ಮಹತ್ವ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸಂಕ್ರಾಂತಿಕೆ ವಸ್ತುನ್ನಾಮ್ ಸಿನಿಮಾದ ನಿರ್ದೇಶಕ ಅನಿಲ್ ರಾವಿಪುಡಿ ಅವರ ಕಚೇರಿ ಹಾಗೂ ವೆಂಕಟೇಶ್ವರ ಪ್ರೊಡಕ್ಷನ್ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.