ಮುಂಬೈ, ಅ.27- ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಪ್ರವಾಸಿ ತಂಡ 2-0 ಯಿಂದ ಕಳೆದು ಕೊಂಡಿರುವ ಬೆನ್ನಲ್ಲೇ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅನುಭವಿ ವೇಗಿ ಜಸ್‌ಪ್ರೀತ್ ಬುಮ್ರಾರ ಸೇವೆಯನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ನಂತರ ನಿರಂತರ ಪಂದ್ಯಗಳನ್ನು ಆಡುತ್ತಿರುವ ಟೆಸ್ಟ್ ತಂಡದ ಉಪನಾಯಕ ಬುಮ್ರಾ ಅವರಿಗೆ ವಿಶ್ರಾಂತಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಅವರನ್ನು ಕರೆತರುವ ಆಲೋಚನೆಯಲ್ಲಿ ಬಿಸಿಸಿಐ ಹಾಗೂ ಆಯ್ಕೆ ಮಂಡಳಿ ಚಿಂತಿಸಿತ್ತು.
ಆದರೆ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಬ್ಯಾಟರ್‌ಗಳ ವೈಫಲ್ಯದಿಂದ 8 ವಿಕೆಟ್ ಗಳ ಸೋಲು ಕಂಡ ಟೀಮ್ ಇಂಡಿಯಾಕ್ಕೆ ಸರಣಿಯಲ್ಲಿ ಜೀವಂತವಾಗಿ ಉಳಿಯಲು ಪುಣೆ ಟೆಸ್ಟ್ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಇಂತಹ ಸ್ಥಿತಿಯಲ್ಲಿ ಅನುಭವಿ ವೇಗಿ ಬುಮ್ರಾ ಅವರಿಗೆ ವಿಶ್ರಾಂತಿ ನೀಡದೆ ವೇಗಿ ಮೊಹಮದ್ ಸಿರಾಜ್ ಬದಲಿಗೆ ಯುವ ವೇಗಿ ಆಕಾಶ್ ಚೋಪ್ರಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ನವೆಂಬರ್ 1 ರಿಂದ ಆರಂಭಗೊಳ್ಳ ಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊಹಮದ್ ಸಿರಾಜ್ ರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಕಲ್ಪಿಸಿ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.
ಬುಮ್ರಾ ಸೇವೆ ಅವಶ್ಯಕ:
ಗಾಯದ ಸಮಸ್ಯೆಯಿಂದ ಕಮ್‌ಬ್ಯಾಕ್ ಮಾಡಿದ ನಂತರ ಐಸಿಸಿ ಏಕದಿನ, ಟ್ವೆಂಟಿ-20 ವಿಶ್ವಕಪ್ ಟೂರ್ನಿಗಳು ಸೇರಿದಂತೆ ನಿರಂತರ ಕ್ರಿಕೆಟ್ ಆಡುತ್ತಿರುವ ಜಸ್‌ಪ್ರೀತ್ ಅವರ ವರ್ಕ್ ಲೋಡ್ ಕಡಿಮೆಗೊಳಿಸುವುದು ಆಸ್ಟ್ರೇಲಿಯಾ ಟೆಸ್ಟ್‌ನ ನಿಮಿತ್ತ ಮುಖ್ಯವಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಿದ್ದು ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮದ್ ಸಿರಾಜ್ ಮಾತ್ರ ಅನುಭವಿ ವೇಗದ ಬೌಲರ್‌ಗಳಾಗಿರುವುದರಿಂದ ಮುಂಬೈ ಟೆಸ್ಟ್‌ನಿಂದ ಬುಮ್ರಾಗೆ ವಿಶ್ರಾಂತಿ ನೀಡುವುದು ಅವಶ್ಯಕವಾಗಿದೆ.