ಬೆಂಗಳೂರು, ಅ.20- ಟೀಮ್ ಇಂಡಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್ ತಂಡ ಇತಿಹಾಸ ಸೃಷ್ಟಿಸಿದೆ. 1988 ರಲ್ಲಿ ಅಂತಿಮ ಬಾರಿ ಮುಂಬೈನ ವಾಂಖೆಡೆ ಕ್ರೀಡಾಂ ಗಣದಲ್ಲಿ ಗೆಲುವು ಸಾಧಿಸಿದ್ದ ಕಿವೀಸ್ 36 ವರ್ಷಗಳ ನಂತರ ಭಾರತದ ನೆಲದಲ್ಲಿ ಜಯಭೇರಿ ಬಾರಿಸಿದೆ.
ರೋಹಿತ್ಶರ್ಮಾ ಪಡೆಯನ್ನು ಮಣಿಸಿರುವ ನ್ಯೂಜಿಲ್ಯಾಂಡ್ ತಂಡದಲ್ಲಿ ರುವ ಬಹುತೇಕ ಮಂದಿ 1988ರಲ್ಲಿ ಜನಿಸಿರಲೇ ಇಲ್ಲ. ಕಿವೀಸ್ನ ಸ್ಪಿನ್ನರ್ ಅಜಾಜ್ ಪಟೇಲ್ ಅವರು ಆಗ ಒಂದು ತಿಂಗಳ ಮಗುವಾಗಿದ್ದರು.
ಟಾಮ್ ಲ್ಯಾಥಮ್ 3ನೇ ನಾಯಕ:
ಭಾರತದ ವಿರುದ್ಧ ಟೆಸ್ಟ್ ಪಂದ್ಯ ಜಯಿಸಿದ ಮೂರನೇ ನಾಯಕ ಎಂಬ ದಾಖಲೆಗೆ ಟಾಮ್ ಲ್ಯಾಥಮ್ ಅವರು ಪಾತ್ರರಾಗಿದ್ದಾರೆ. 1969ರಲ್ಲಿ ಗ್ರಾಹಂ ಡೊವಿಂಗ್ ಹಾಗೂ 1988ರಲ್ಲಿ ಜಾನ್ ರೈಟ್ ಸಾರಥ್ಯಗಳಲ್ಲಿ ಕಿವೀಸ್ ಪಡೆಯು ಗೆಲುವಿನ ನಗಾರಿ ಬಾರಿಸಿತ್ತು. ಅಂದಿನಿಂದಲೂ ಕಿವೀಸ್ ತಂಡವೂ ಹಲವು ಟೆಸ್ಟ್ ಸರಣಿಗಳನ್ನು ಆಡಿದ್ದರೂ, ಒಂದೇ ಒಂದು ಪಂದ್ಯ ದಲ್ಲಿ ಗೆಲುವು ಸಾಧಿ ಸಲು ಸಫಲರಾಗಿರಲಿಲ್ಲ, ಈಗ ಸಿಕ್ಕಿರುವ ಗೆಲುವು ತಂಡದಲ್ಲಿ ಸರಣಿ ಜಯಿಸುವ ಹುಮಸ್ಸು ಆಟಗಾರರಲ್ಲಿ ಮೂಡಿದೆ.
ಭಾರತದಲ್ಲಿ ಮೂರನೇ ಗೆಲುವು:
69 ವರ್ಷಗಳಿಂದಲೂ ನ್ಯೂಜಿಲ್ಯಾಂಡ್ ತಂಡವು ಹಲವು ಬಾರಿ ಭಾರತ ನೆಲದಲ್ಲಿ ಟೆಸ್ಟ್ ಪ್ರವಾಸ ಮಾಡಿರುವ ನ್ಯೂಜಿಲೆಂಡ್ ಗೆಲುವು ಸಾಧಿಸಿರುವುದು ಮಾತ್ರ ಮೂರನೇ ಬಾರಿ. ಈ ಹಿಂದೆ 1988ರಲ್ಲಿ ಸರ್ ರಿಚರ್ಡ್ ಹೆಡ್ಲಿ ಸಾರಥ್ಯದಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತ್ತು. ಈಗ ಟಾಮ್ ಲ್ಯಾಥೇಮ್ ಅವರ ಸಾರಥ್ಯದಲ್ಲಿ ಕಿವೀಸ್ ಎಂಟು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಮ್ ಲ್ಯಾಥೇಮ್ ಕ್ಯಾಪ್ಟನ್ಸಿಯಲ್ಲಿ ಆಡುತ್ತಿರುವ ನ್ಯೂಜಿಲೆಂಡ್ನ ಬಹುತೇಕ ಆಟಗಾರರಿಗೆ ಭಾರತದ ನೆಲದಲ್ಲಿ ಆಡಿದ ಅನುಭವ ವಿಲ್ಲದಿದ್ದರೂ ಟೀಮ್ಇಂಡಿಯಾದ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿರುವುದು ತಂಡ ಗೆಲುವು ಸಾಧಿಸಲು ಸಹಕಾರಿಯಾಗಿದೆ.