Thursday, November 21, 2024
Homeಕ್ರೀಡಾ ಸುದ್ದಿ | Sportsಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕಗಳ ಬೇಟಿಯಾಡಿದ ಶೂಟರ್‌ಗಳು

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕಗಳ ಬೇಟಿಯಾಡಿದ ಶೂಟರ್‌ಗಳು

ಹ್ಯಾಂಗ್ಝೌ,ಸೆ.29-ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 2023 ಏಷ್ಯನ್ ಕ್ರೀಡಾಕೂಟದ ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತೀಯ ತಂಡವು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆಯೋರಾನ್ ಅವರ 50 ಮೀಟರ್ ರೈಫಲ್ 3ಕೆ ಪುರುಷರ ಭಾರತ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತು.

2023ರ ಏಷ್ಯನ್ ಗೇಮ್ಸ್‍ನಲ್ಲಿ ಭಾರತಕ್ಕೆ ಶೂಟಿಂಗ್‍ನಲ್ಲಿ ಇದು 15ನೇ ಪದಕ ಮತ್ತು 7ನೇ ಚಿನ್ನವಾಗಿದೆ. ಭಾರತವು 1769 ಅಂಕಗಳ ಗಮನಾರ್ಹ ಅಂಕಗಳಿಸಿತು, ಕಳೆದ ವರ್ಷ ಪೆರುವಿನಲ್ಲಿ ಯುಎಸ್‍ಎನ ಹಿಂದಿನ ದಾಖಲೆಯನ್ನು 8 ಅಂಕಗಳಿಂದ ಮೀರಿಸಿದೆ.

ಈ ನಡುವೆ ಇಶಾ ಸಿಂಗ್, ಪಾಲಕ್ ಮತ್ತು ದಿವ್ಯಾ ಸೇರಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಒಟ್ಟು 1731 ಅಂಕ ಗಳಿಸಿದ್ದು, ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಚೀನಾ 1736 ಅಂಕಗಳೊಂದಿಗೆ ಚಿನ್ನ ಪಡೆದುಕೊಂಡಿದೆ.

ಮನೆಯಲ್ಲಿ ಪಾಕ್ ಧ್ವಜ ಹಾರಿಸಿದ ತಂದೆ-ಮಗ ಅಂದರ್

ಗ್ರೂಪ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಇಶಾ ಮತ್ತು ಪಾಲಕ್ ವೈಯಕ್ತಿಕ ಸ್ಪರ್ಧೆಯಲ್ಲೂ ಫೈನಲ್ ತಲುಪಿದ್ದಾರೆ. 10 ವರ್ಷದ ಇಶಾ ಸಿಂಗ್ ಈಗ ಏಷ್ಯನ್ ಗೇಮ್ಸ್ 2023 ರಲ್ಲಿ ತನ್ನ ನಾಲ್ಕನೇ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಈ ಹಿಂದೆ 25 ಮೀಟರ್ ಪಿಸ್ತೂಲ್ ಟೀಮ್ ವಿಭಾಗದಲ್ಲಿ ಚಿನ್ನ ಹಾಗೂ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ಪ್ರಧಾನಿ ಮೋದಿ ಅಭಿನಂದನೆ :ಚೀನಾದ ಹ್ಯಾಂಗ್‍ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಶೂಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ವನಿತೆಯರ ತಂಡವನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಏಷ್ಯನ್ ಗೇಮ್ಸ್ ನಲ್ಲಿ ಶೂಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ದಿವ್ಯಾ ತಾಡಿಗೋಳ್, ಇಶಾ ಸಿಂಗ್ ಮತ್ತು ಪಾಲಕ್ ಅವರಿಗೆ ಅಭಿನಂದನೆಗಳು.

ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರುತ್ತಿದ್ದೇನೆ. ಅವರ ಯಶಸ್ಸು ಮುಂಬರುವ ಹಲವಾರು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ ಎಂದು ಹೇಳಿದ್ದಾರೆ.ಮತ್ತೊಂದು ಟ್ವೀಟ್‍ನಲ್ಲಿ ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ತಂಡವನ್ನು ಶ್ಲಾಘಿಸಿದ್ದಾರೆ.

ಇದು ಅದ್ಭುತ ಗೆಲುವು, ಪ್ರತಿಷ್ಠಿತ ಮತ್ತು ವಿಶ್ವ ದಾಖಲೆಯಾಗಿದೆ. ಏಷ್ಯನ್ ಗೇಮ್ಸ್‍ನಲ್ಲಿ ಪುರುಷರ 50 ಮೀಟರ್ ರೈಫಲ್ 3ಕೆ ಟೀಮ್ ಈವೆಂಟ್‍ನಲ್ಲಿ ಗೆಲುವು ಸಾಸಿದ ಸ್ವಪ್ನಿಲ್ ಕುಸಾಲೆ, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಅಖಿಲ್ ಶೆರಾನ್ ಅವರಿಗೆ ಅಭಿನಂದನೆಗಳು. ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತದ ತಂಡ ಅಸಾಧಾರಣ ಸಂಕಲ್ಪ ಮತ್ತು ಟೀಮ್‍ವರ್ಕ್ ತೋರಿಸಿದೆ ಎಂದು ಹೇಳಿದ್ದಾರೆ

RELATED ARTICLES

Latest News