ನವದೆಹಲಿ,ಮೇ.14– ಚೀನಾ ಪರ ಸುದ್ದಿಗಳನ್ನು ಮಾಡುವ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸೌನ ಸಾಮಾಜಿಕ ಮಾಧ್ಯಮ ಖಾತೆಯನ್ನು ಭಾರತ ನಿರ್ಬಂಧಿಸಿದೆ.ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಭಾರತೀಯ ಸೇನೆಯ ಮೇಲೆ ಪರಿಶೀಲಿಸದ ಹೇಳಿಕೆಗಳನ್ನು ಹರಡಿದ್ದಕ್ಕಾಗಿ ಭಾರತ ಸರ್ಕಾರ ಇಂದು ಚೀನಾದ ಸರ್ಕಾರಿ ಸ್ವಾಮ್ಯದ ಎಕ್‌್ಸ ಹ್ಯಾಂಡಲ್ ಅನ್ನು ನಿಷೇಧಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೊದಲು ಸತ್ಯಗಳನ್ನು ಪರಿಶೀಲಿಸುವಂತೆ ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಾಧ್ಯಮಗಳಿಗೆ ಬಲವಾಗಿ ಎಚ್ಚರಿಕೆ ನೀಡಿದ ಕೆಲವು ದಿನಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜೊತೆಗೆ ಚೀನಾದ ಪ್ರಚಾರದ ಮುಖವಾಣಿ ಚೀನಾ ಕ್ಸಿನ್ಹುವಾ ನ್ಯೂಸ್ ಅನ್ನು ಸಹ ಭಾರತ ನಿರ್ಬಂಧಿಸಿದೆ. ಚೀನಾ ಕ್ಸಿನ್ಹುವಾ ನ್ಯೂಸ್ ಹಲವು ವರ್ಷಗಳಿಂದ ಭಾರತದ ವಿರುದ್ಧ ತಪ್ಪು ಮಾಹಿತಿ, ನಕಲಿ ಸುದ್ದಿ ಮತ್ತು ಅಪಪ್ರಚಾರದಲ್ಲಿ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ. ಗ್ಲೋಬಲ್ ಟೈಮ್ಸ್ ನಂತರ ಎರಡನೇ ಪ್ರಮುಖ ಚೀನೀ ಸರ್ಕಾರಿ ಮಾಧ್ಯಮ ಔಟ್ಲೆಟ್ ಅನ್ನು ಸಹ ನಿರ್ಬಂಧಿಸಲಾಗಿದೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯ ವನ್ನು ಗುರಿಯಾಗಿಸಿಕೊಂಡ ಭಾರತೀಯ ಮಿಲಿಟರಿ ದಾಳಿಗಳ ಟ್ಯಾಬ್ಲಾಯ್ಡ್ ವರದಿಗೆ ಪ್ರತಿಕ್ರಿಯಿಸಿರುವ ಭಾರತ ರಾಯಭಾರ ಕಚೇರಿ, ಆತೀಯ ಗ್ಲೋಬಲ್ ಟೈಮ್ಸ್ ನ್ಯೂಸ್, ಈ ರೀತಿಯ ತಪ್ಪು ಮಾಹಿತಿಯನ್ನು ಹೊರಹಾಕುವ ಮೊದಲು ನಿಮ ಸತ್ಯಗಳನ್ನು ಪರಿಶೀಲಿಸಲು ಮತ್ತು ನಿಮ ಮೂಲಗಳನ್ನು ಪುನರ್ ಪರಿಶೀಲನೆ ಮಾಡಲು ನಾವು ಶಿಫಾರಸು ಮಾಡುತ್ತೇವೆ ಎಂದು ಎಕ್‌್ಸನಲ್ಲಿ ಟ್ವೀಟ್ ಮಾಡಿತ್ತು.
ಆಪರೇಷನ್ ಸಿಂಧೂರ್ ಪ್ರಕರಣದ ಸಂದರ್ಭದಲ್ಲಿ ಪಾಕಿಸ್ತಾನ ಪರವಾಗಿರುವ ಹಲವಾರು ಹ್ಯಾಂಡಲ್‌ಗಳು ಆಧಾರ ರಹಿತ ಹೇಳಿಕೆಗಳನ್ನು ಹರಡುತ್ತಿದ್ದು, ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಮಾಧ್ಯಮಗಳು ಮೂಲಗಳನ್ನು ಪರಿಶೀಲಿಸದೆ ಅಂತಹ ಮಾಹಿತಿಯನ್ನು ಹಂಚಿಕೊಂಡಾಗ, ಅದು ಜವಾಬ್ದಾರಿ ಮತ್ತು ಪತ್ರಿಕೋದ್ಯಮದ ನೈತಿಕತೆಯ ಗಂಭೀರ ಲೋಪವನ್ನು ಪ್ರತಿಬಿಂಬಿಸುತ್ತದೆ ಎಂದು ರಾಯಭಾರ ಕಚೇರಿ ತನ್ನ ಮುಂದಿನ ಪೋಸ್ಟ್‌ನಲ್ಲಿ ತಿಳಿಸಿದೆ.
ಬಹಾವಲ್ಪುರ ಬಳಿ ಭಾರತೀಯ ರಫೇಲ್ ಜೆಟ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನಿ ಖಾತೆಗಳು ಮತ್ತು ಕೆಲವು ಮಾಧ್ಯಮಗಳಿಂದ ವೈರಲ್ ಪೋಸ್ಟ್‌ಗಳು ಬಂದ ನಂತರ ರಾಯಭಾರ ಕಚೇರಿಯ ಹೇಳಿಕೆಗಳು ಬಂದಿವೆ.
ಆದರೆ, ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಅಂತಹ ಒಂದು ವೈರಲ್ ಚಿತ್ರವು ದಾರಿತಪ್ಪಿಸುವಂತಿದೆ ಎಂದು ಗುರುತಿಸಿದೆ. ಅದು 2021 ರಲ್ಲಿ ಪಂಜಾಬ್‌ನ ಮೋಘಾ ಜಿಲ್ಲೆಯಲ್ಲಿ ನಡೆದ ಮಿಗ್ -21 ಅಪಘಾತದ ಚಿತ್ರ ಎಂದು ತಿಳಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಪಾಕಿಸ್ತಾನ ಪರ ಹ್ಯಾಂಡಲ್‌ಗಳು ಹಂಚಿಕೊಂಡ ಹಳೆಯ ಚಿತ್ರಗಳ ಬಗ್ಗೆ ಎಚ್ಚರದಿಂದಿರಿ ಎಂದು ಪಿಐಬಿ ತನ್ನದೇ ಆದ ಪೋಸ್ಟ್‌ನಲ್ಲಿ ಎಚ್ಚರಿಸಿದೆ.
ಇದಕ್ಕೂ ಮುನ್ನ ವಿದೇಶಾಂಗ ಸಚಿವಾಲಯವು ಅರುಣಾಚಲ ಪ್ರದೇಶದ ಮೇಲಿನ ಚೀನಾದ ಹಕ್ಕು ಸ್ವಾಮ್ಯವನ್ನು ನಿರಾಕರಿಸಿ ಅಲ್ಲಿನ ಸ್ಥಳಗಳ ಮರುನಾಮಕರಣ ಪ್ರಯತ್ನವನ್ನು ಬಲವಾಗಿ ಆಕ್ಷೇಪಿಸಿತು. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಮತ್ತು ಯಾವಾಗಲೂ ಭಾರತದಲ್ಲೇ ಉಳಿಯುತ್ತದೆ ಎಂಬ ನಿರಾಕರಿಸಲಾಗದ ವಾಸ್ತವವನ್ನು ಚೀನಾದ ಸೃಜನಶೀಲ ಹೆಸರಿಸುವಿಕೆ ಬದಲಾಯಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ಪುನರುಚ್ಚರಿಸಿದೆ.
ಪ್ರಯತ್ನಗಳನ್ನು ಮುಂದುವರಿಸಿರುವುದನ್ನು ನಾವು ಗಮನಿಸಿದ್ದೇವೆ. ನಮ ತತ್ವಬದ್ಧ ನಿಲುವಿಗೆ ಅನುಗುಣವಾಗಿ, ನಾವು ಅಂತಹ ಪ್ರಯತ್ನಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.