ಚೆನ್ನೈ,ಡಿ. 26- ತಮಿಳುನಾಡು ಮೂಲದ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಸಿಇಒ ಎನ್ ಶ್ರೀನಿವಾಸನ್ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂಡಿಯಾ ಸಿಮೆಂಟ್‌್ಸ ಸಂಸ್ಥೆಯನ್ನು ಅಲ್ಪ್ರಾಟೆಕ್ ಖರೀದಿಸಿರುವ ಒಪ್ಪಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕುಮಾರಮಂಗಳಂ ಬಿರ್ಲಾ ಒಡೆತನದ ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆ ಇಂಡಿಯಾ ಸಿಮೆಂಟ್ಸ್ ನಲ್ಲಿ ಪ್ರಮುಖ ಪಾಲನ್ನು ಖರೀದಿಸುತ್ತಿದೆ. 7,000 ಕೋಟಿ ರೂ ಮೊತ್ತದ ಡೀಲ್ ಆಗಿದೆ ಎನ್ನಲಾಗಿದೆ.
ಒಪ್ಪಂದ ಅಂತಿಮಗೊಳ್ಳುತ್ತಿದ್ದಂತೆಯೇ ಇಂಡಿಯಾ ಸಿಮೆಂಟ್ಸ್ನ ಮಾಲೀಕರ ಅಧಿಕಾರ ತಪ್ಪಿದಂತಾಗಿದೆ. ರೆಗ್ಯುಲೇಟರಿ ಫೈಲಿಂಗ್ನಲ್ಲಿ ಐಸಿಎಲ್ ಸಂಸ್ಥೆ ಎನ್ ಶ್ರೀನಿವಾಸನ್ ರಾಜೀನಾಮೆ ನೀಡಿರುವ ಸಂಗತಿಯನ್ನು ಘೋಷಿಸಿದೆ.
ಐಪಿಎಲ್ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ಮಾಲೀಕರಾದ ಎನ್ ಶ್ರೀನಿವಾಸನ್ ಅವರು ಇಂಡಿಯಾ ಸಿಮೆಂಟ್ಸ್ನ ಮುಖ್ಯಸ್ಥರಾಗಿ ಯಶಸ್ಸು ಗಳಿಸಿದ್ದರು. ಶ್ರೀನಿವಾಸನ್ ಮಾತ್ರವಲ್ಲದೇ ಅವರ ಕುಟುಂಬದ ಇತರ ಕೆಲ ಸದಸ್ಯರು ಇಂಡಿಯಾ ಸಿಮೆಂಟ್ಸ್ನಲ್ಲಿ ಪ್ರಮುಖ ಅಧಿಕಾರ ಹೊಂದಿದ್ದರು. ಪತ್ನಿ ಚಿತ್ರಾ ಶ್ರೀನಿವಾಸನ್, ಮಗಳು ರೂಪಾ ಗುರುನಾಥ್, ವಿ.ಎಂ. ಮೋಹನ್ ಅವರು ಐಸಿಎಲ್ನ ಮಂಡಳಿಯಿಂದ ಹೊರಬಂದಿದ್ದಾರೆ.
ಇವರೆಲ್ಲರೂ ಕೂಡ ಇಂಡಿಯಾ ಸಿಮೆಂಟ್ಸ್ನಲ್ಲಿ ಹೊಂದಿದ್ದ ಎಲ್ಲಾ ಷೇರುಪಾಲನ್ನೂ ಬಿಟ್ಟುಕೊಟ್ಟಿದ್ದಾರೆ. ಇವರ ಮಾಲೀಕತ್ವದ ಎಲ್ಲಾ ಸಂಸ್ಥೆಗಳು ಇಂಡಿಯಾ ಸಿಮೆಂಟ್ಸ್ನಲ್ಲಿ ಹೊಂದಿದ್ದ ಯಾವುದೇ ಈಕ್ವಿಟಿ ಷೇರುಗಳನ್ನೂ ಬಿಟ್ಟುಕೊಡಲಾಗಿದೆ. ಶ್ರೀನಿವಾಸನ್ ಅವರು ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಲ್ಲಿ ಸಿಇಒ ಮಾತ್ರವಲ್ಲದೇ ವೈಸ್ ಛೇರ್ಮನ್, ಎಂಡಿ ಮತ್ತು ಡೈರೆಕ್ಟರ್ ಕೂಡ ಆಗಿದ್ದರು.