Sunday, November 24, 2024
Homeಕ್ರೀಡಾ ಸುದ್ದಿ | Sportsಪಾಕಿಗಳನ್ನು ಮಟ್ಟಹಾಕಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಭಾರತದ ಲೆಜೆಂಡ್ಸ್

ಪಾಕಿಗಳನ್ನು ಮಟ್ಟಹಾಕಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಭಾರತದ ಲೆಜೆಂಡ್ಸ್

ಬರ್ಮಿಂಗ್‌ಹ್ಯಾಮ್‌, ಜು. 14- ಸಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದ ಭಾರತ ಚಾಂಪಿಯನ್ಸ್ ತಂಡವು ಚೊಚ್ಚಲ ಆವೃತ್ತಿಯ ಲೆಜೆಂಡ್ಸ್ ವಿಶ್ವ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್ ಬಸ್ಟನ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್‌‍ ಗೆದ್ದು ಮೊದಲು ಬ್ಯಾಟ್‌ ಮಾಡಿದ ಯೂನಿಸ್‌‍ಖಾನ್‌ ಸಾರಥ್ಯದ ಪಾಕಿಸ್ತಾನ ತಂಡವು ಉತ್ತಮ ಆರಂಭ ಕಂಡಿತು. ಆದರೆ ತಂಡದ ಮೊತ್ತ 14 ರನ್‌ಗಳಾಗಿದ್ದಾಗ ಅನುರೀತ್‌ ಸಿಂಗ್‌ ಬೌಲಿಂಗ್‌ನಲ್ಲಿ ಆರಂಭಿಕ ಆಟಗಾರ ಸರ್ಜಿಲ್‌ ಖಾನ್‌ (12 ರನ್‌, 2 ಬೌಂಡರಿ) ವಿಕೆಟ್‌ ಒಪ್ಪಿಸಿದರು. ಶೋಯಿಬ್‌ ಮಕ್ಸೂದ್‌ (21 ರನ್‌,1 ಬೌಂಡರಿ, 2 ಸಿಕ್ಸರ್‌) ಅಲ್ಪ ಹೋರಾಟ ತೋರಿದರೂ ಕನ್ನಡಿಗ ವಿನಯ್‌ಕುಮಾರ್‌ಗೆ ಬೌಲಿಂಗ್‌ನಲ್ಲಿ ಔಟಾಗಿ ಪೆವಿಲಿಯನ್‌ ತೊರೆದರು.

ನಂತರ ಆರಂಭಿಕ ಆಟಗಾರ ಕಮ್ರಾನ ಅಕಲ್‌ (24 ರನ್‌, 4 ಬೌಂಡರಿ), ಶೋಯಿಬ್‌ ಮಲ್ಲಿಕ್‌ (41 ರನ್‌, 3 ಸಿಕ್ಸರ್‌) ಹಾಗೂ ಶೋಯಿಲ್‌ ತನ್ವೀರ್‌ (19 ರನ್‌, 2 ಬೌಂಡರಿ, 1 ಸಿಕ್ಸರ್‌) ಆಟದ ನೆರವಿನಿಂದ ಪಾಕಿಸ್ತಾನ ನಿಗಧಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 156 ರನ್‌ಗಳ ಸವಾಲಾತಕ ಮೊತ್ತ ದಾಖಲಿಸಿತು.

ಅಂಬಾಟಿರಾಯುಡು ಆಕರ್ಷಕ ಅರ್ಧಶತಕ:
ಪಾಕಿಸ್ತಾನ ನೀಡಿದ 157 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಚಾಂಪಿಯನ್‌್ಸ ಪರ ಆರಂಭಿಕರಾದ ರಾಬಿನ್‌ ಉತ್ತಪ್ಪ (10 ರನ್‌, 1 ಬೌಂಡರಿ) ಹಾಗೂ ಅಂಬಾಟಿ ರಾಯುಡು (50 ರನ್‌, 5 ಬೌಂಡರಿ, 2 ಸಿಕ್ಸರ್‌) ಮೊದಲ ವಿಕೆಟ್‌ಗೆ 34 ರನ್‌ಗಳ ಜೊತೆಯಾಟ ನೀಡಿದರು. ಆದರೆ 10 ಎಸೆತಗಳ ಅಂತರದಲ್ಲಿ ಅಮೀರ್‌ ಯಾಮಿನ್‌ ತಮ ವೇಗದ ಅಸ್ತ್ರದ ಮೂಲಕ ರಾಬಿನ್‌ ಉತ್ತಪ್ಪ ಹಾಗೂ ಸುರೇಶ್‌ ರೈನಾ (4ರನ್‌, 1 ಬೌಂಡರಿ) ಅವರ ವಿಕೆಟ್‌ ಪಡೆದು ಪಾಕ್‌ ಪಾಳೆಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು.

60 ರನ್‌ಗಳ ಜೊತೆಯಾಟ:
ಅಂಬಾಟಿ ರಾಯುಡು ಜೊತೆಗೆ 3ನೇ ಕ್ರಮಾಂಕದಲ್ಲಿ ಜೊತೆಗೂಡಿದ ಗುರುಕೀರ್ತ್‌ ಸಿಂಗ್‌ ಮಾನ್‌(34 ರನ್‌, 2 ಬೌಂಡರಿ, 1 ಸಿಕ್ಸರ್‌) ಪಾಕಿಸ್ತಾನದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ರನ್‌ಗಳಿಸುತ್ತಾ ಸಾಗಿಸಿದರು. 100 ರನ್‌ಗಳ ಗಡಿ ಅಂಚಿನಲ್ಲಿದ್ದಾಗ ಅರ್ಧಶತಕ ಸಿಡಿಸಿದ್ದ ಅಂಬಾಟಿ ರಾಯುಡು ಸ್ಪಿನ್ನರ್‌ ಸಯೀದ್‌ ಅಜಲ್‌ ಬೌಲಿಂಗ್‌ನಲ್ಲಿ ಸರ್ಜಿಲ್‌ಖಾನ್‌ ಹಿಡಿತ ಕ್ಯಾಚ್‌ಗೆ ಔಟಾದರು. ಆದರೆ ಈ ಜೋಡಿಯು 60 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದರು. ನಂತರ ಗುರುಕೀರ್ತ್‌ ಸಿಂಗ್‌ ಮಾನ್‌ ಅವರು ಶೋಯಿಬ್‌ ಮಲ್ಲಿಕ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಕಮ್ರಾನ್‌ ಅಕಲ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ತೊರೆದರು.

ಆದರೆ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಯೂಸುಫ್‌ ಪಠಾಣ್‌ (30 ರನ್‌, 1 ಬೌಂಡರಿ, 3 ಸಿಕ್ಸರ್‌), ಯುವರಾಜ್‌ಸಿಂಗ್‌ರ ತಾಳೆಯುತ ಆಟ (15 ರನ್‌) ಆಟದಿಂದ ಭಾರತ ವಿಶ್ವ ಚಾಂಪಿಯನ್‌್ಸ 19.1 ಓವರ್‌ಗಳಲ್ಲೇ 159/5 ರನ್‌ ಗಳಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಇರ್ಫಾನ್‌ ಪಠಾಣ್‌ ಬೌಂಡರಿ ಸಿಡಿಸುವ ಮೂಲಕ ಭಾರತಕ್ಕೆ ಗೆಲುವಿನ ರನ್‌ ತಂದುಕೊಟ್ಟರು.

ಪಾಕಿಸ್ತಾನ ಚಾಂಪಿಯನ್ಸ್ ಪರ ಆಮೀರ್‌ ಯಾಮಿನ್‌ (2 ವಿಕೆಟ್‌), ಸಯೀದ್‌ ಅಜಲ್‌, ವಾಹಬ್‌ ರಿಯಾಜ್‌ ಹಾಗೂ ಶೋಯಿಬ್‌ ಮಲ್ಲಿಕ್‌ ತಲಾ ಒಂದೊಂದು ವಿಕೆಟ್‌ ಪಡೆದರೆ, ಭಾರತ ಚಾಂಪಿಯನ್ಸ್ ಪರ ಅನುರೀತ್‌ ಸಿಂಗ್‌ (3 ವಿಕೆಟ್‌), ವಿನಯ್‌ಕುಮಾರ್‌, ಪವನ್‌ನೇಗಿ ಹಾಗೂ ಇರ್ಫಾನ್‌ ಪಠಾಣ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿದರು. ಅಂಬಾಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

RELATED ARTICLES

Latest News